ಕಾನ್ಪುರ (ಉತ್ತರ ಪ್ರದೇಶ):ಕೋವಿಡ್​ನಿಂದ ವ್ಯಕ್ತಿ ಮೃತಪಟ್ಟರೂ, ಅವರು ಸತ್ತಿದ್ದಾರೆ ಎಂದು ನಂಬಲು ತಯಾರಿಲ್ಲದ ಪತ್ನಿ ಹಾಗೂ ಅಪ್ಪ-ಅಮ್ಮ, ಸುಮಾರು ಒಂದೂವರೆ ವರ್ಷಗಳ ಕಾಲ ಮನೆಯಲ್ಲೇ ಇರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಆದಾಯ ತೆರಿಗೆ ಇಲಾಖೆ ಉದ್ಯೋಗಿಯಾಗಿದ್ದ ವಿಮಲೇಶ್​ ಕುಮಾರ್​ ಅವರು 2021ರ ಏಪ್ರಿಲ್‌ನಲ್ಲಿ ಮೃತಪಟ್ಟಿದ್ದರು. ಆದರೆ ಅವರು ಮೃತಪಡಲಿಲ್ಲ, ವಾಪಸ್​ ಬರುತ್ತಾರೆ, ಕೋಮಾಕ್ಕೆ ಜಾರಿದ್ದಾರೆ ಎಂದು ನಂಬಿದ ಕುಟುಂಬಸ್ಥರು ಮನೆಯಲ್ಲಿಯೇ ಗಂಗಾಜಲವನ್ನು ಕುಡಿಸುತ್ತಾ ಇರಿಸಿಕೊಂಡಿದ್ದಾರೆ.
ವಿಮಲೇಶ್ ಕುಮಾರ್ ಕಳೆದ ಒಂದೂವರೆ ವರ್ಷಗಳಿಂದ ಕಚೇರಿಗೆ ಹಾಜರಾಗುತ್ತಿಲ್ಲ. ಅವರು ಎಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಆಗ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವು ಮನೆಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿದರೂ ಕುಟುಂಬಸ್ಥರು ಮಾತ್ರ, ಇಲ್ಲ ಅವರು ಜೀವಂತವಾಗಿದ್ದಾರೆ ಎಂದಿದ್ದಾರೆ. ಅವರನ್ನು ನಂಬಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಗಿ ಬಂದಿತ್ತು.
ಪತಿ ಕೋಮಾದಿಂದ ಹೊರ ಬರಲಿ ಎಂದು ಪ್ರತಿದಿನ ಬೆಳಗ್ಗೆ ಕುಮಾರ್ ಅವರ ದೇಹಕ್ಕೆ ಪತ್ನಿ ಗಂಗಾಜಲ ಸಿಂಪಡಿಸುತ್ತಿದ್ದರು. ಅಲ್ಲದೇ, ನೆರೆಹೊರೆಯವರಿಗೂ ವಿಮಲೇಶ್ ಕುಮಾರ್ ಕೋಮಾದಲ್ಲಿದ್ದಾರೆ ಎಂದು ಕುಟುಂಸ್ಥರು ತಿಳಿಸಿದ್ದರು. ಆಗಾಗ್ಗೆ ಆಕ್ಸಿಜನ್ ಸಿಲಿಂಡರ್​ಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಅದನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಲೇಶ್ ಅವರ ಪತ್ನಿ ಮಾನಸಿಕವಾಗಿ ಬಳಲುತ್ತಿರುವಂತೆ ತೋರುತ್ತದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಕಾನ್ಪುರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​)
ಪ್ರೇಮ ವಿವಾಹವಾದ ಮಗಳು-ಅಳಿಯನನ್ನೇ ಕೊಂದ ಪಾತಕಿಗಳು: ಅಪ್ಪ, ಅಮ್ಮ ಸೇರಿದಂತೆ ಸಹೋದರರಿಗೂ ಗಲ್ಲು ಶಿಕ್ಷೆ

VIDEO: ಆಮೀರ್​ ಪುತ್ರಿ ಐರಾ ಖಾನ್​ ಎಂಗೇಜ್​ಮೆಂಟ್​: 2 ವರ್ಷಗಳ ಡೇಟಿಂಗ್​ ಬಳಿಕ ಸಿನಿಮಾ ಸ್ಟೈಲ್​ನಲ್ಲಿ ಪ್ರಪೋಸ್​!

ಅಪ್ಪ ಮಗಳನ್ನೇ ಮದ್ವೆಯಾಗ್ಬೋದು! ಹಿಜಾಬ್​ ವಿರುದ್ಧ ಬಿರುಗಾಳಿ ಎದ್ದಿರೋ ಇರಾನ್​ನಲ್ಲಿ ಹೇಸಿಗೆ ಹುಟ್ಟಿಸುವ ಕಾನೂನು…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × three =
Remember me
