ನವದೆಹಲಿ:ಭಾರತದ ಕ್ರಿಕೆಟ್ ದಂತಕತೆ ಎಂದೇ ಖ್ಯಾತಿ ಗಳಿಸಿರುವ ಸುನಿಲ್​ ಗಾವಸ್ಕರ್​ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅಸಂಖ್ಯ ಅಭಿಮಾನಿ ಬಳಗವನ್ನು ಪಡೆದಿರುವ ಇವರು, ಕ್ರಿಕೆಟಿಗ ವಿರಾಟ್​ ಕೊಹ್ಲಿ ವಿರುದ್ಧ ಅಸಭ್ಯ ಪದ ಬಳಕೆ ಮಾಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ 6ನೇ ಪಂದ್ಯದ ವೇಳೆ ಕೆಟ್ಟ ಪದ ಬಳಕೆ ಮಾಡಿರುವ ಗಾವಸ್ಕರ್​ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಎಸೆಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ.
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಗಾವಸ್ಕರ್​, ಕೊಹ್ಲಿ ಕುರಿತು ನೀಡಿದ ಹೇಳಿಕೆ ಇದಾಗಿದೆ.
https://twitter.com/Don_Mateo13/status/1309165145051090948
ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಬಾರಿ ಬಿಟ್ಟಿದ್ದರು. ಬಳಿಕ ಬ್ಯಾಟಿಂಗ್ ವೇಳೆ ಕ್ರೀಸ್​ಗೆ ಬಂದ ಕೊಹ್ಲಿ ಕೇವಲ 1 ರನ್‌ ಅಷ್ಟೇ ಮಾಡಿ ವಿಕೆಟ್ ಒಪ್ಪಿಸಿದರು. ಇದು ಬೆಂಗಳೂರಿಗೆ ಮುಳುವಾಯಿತು.
ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗಾವಸ್ಕರ್​, ಕೊಹ್ಲಿ ಅವರನ್ನು ಟೀಕಿಸುವ ಭರದಲ್ಲಿ, ‘Inhone lockdown me to bas Anushka ki gendon ki practice ki hai’ (ಲಾಕ್​ಡೌನ್​ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಎನ್ನುವ ಅಸಭ್ಯ ಕಮೆಂಟ್​ ಮಾಡಿದ್ದಾರೆ.
ಇದೀಗ ಭಾರಿ ಟೀಕೆಗೆ ಗುರಿಯಾಗಿದೆ. ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಹಾಕಬೇಕೆಂದು ಅನೇಕರು ಟ್ವಿಟರ್‌ ಮೂಲಕ ಒತ್ತಾಯಿಸುತ್ತಿದ್ದಾರೆ.
ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

ಡ್ರಗ್ಸ್​ ಕೇಸ್​: ಮಾಧ್ಯಮಗಳಿಗೆ ನಿರೂಪಕಿ ಅನುಶ್ರೀ ಮಾಡಿಕೊಂಡರೊಂದು ಮನವಿ…

ಪಾಕಿಗಳಿಂದ ಅಪಹರಣಗೊಂಡು 73 ವರ್ಷದ ಬಳಿಕ ತವರನ್ನು ಕಂಡವಳ ಕಣ್ಣೀರ ಕಥೆಯಿದು…

ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 20 =
Remember me
