ವಾಷಿಂಗ್ಟನ್​:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಹೆಸರಿನಲ್ಲಿ ಹಲವರು ಹಿಂಸಾಚಾರಕ್ಕೆ ಇಳಿದಿದ್ದರೆ, ಇನ್ನು ಕೆಲವು ನಿಜವಾದ ರೈತರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕಾನೂನುಗಳು ರೈತರ ಪರವಾಗಿರುವುದಾಗಿ ಕೇಂದ್ರ ಸರ್ಕಾರ ಎಷ್ಟೇ ಹೇಳುತ್ತಿದ್ದರೂ, ಹಲವಾರು ಸುತ್ತಿನ ಮಾತುಕತೆ ನಡೆಯುತ್ತಿದ್ದರೂ ಅದು ಫಲಪ್ರದವಾಗಿಲ್ಲ.
ಅದೇ ಇನ್ನೊಂದೆಡೆ, ಅಮೆರಿಕ ಈಗ ರೈತರಿಗಾಗಿ ತಂದಿರುವ ಈ ಕೃಷಿ ಕಾನೂನಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜತೆಗೆ, ಇದಕ್ಕೇನಾದರೂ ವಿರೋಧವಿದ್ದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡುವ ಮೂಲಕ ಹಾಗೂ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ.
.ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಹೆಚ್ಚಿಸುವ ಮತ್ತು ಹೆಚ್ಚಿನ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸುವ ಕ್ರಮಗಳನ್ನು ತಾನು ಸ್ವಾಗತಿಸುವುದಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದಾರೆ. ಭಾರತ ಆರಂಭಿಸಿದ ಕೃಷಿ ಸುಧಾರಣೆಗಳ ಮಹತ್ವವನ್ನು ಮನಗಂಡು ಈ ಮಾತನ್ನು ಹೇಳುತ್ತಿರುವುದಾಗಿ ಅವರು ನುಡಿದಿದ್ದಾರೆ.
https://twitter.com/SabrinaSiddiqui/status/1357096054257291264
ಆದ್ದರಿಂದ ಈ ಕೃಷಿ ಕಾಯ್ದೆಗಳನ್ನು ತಾವು ಸ್ವಾಗತಿಸುತ್ತಿದ್ದೇವೆ. ಖಾಸಗಿ ಬಂಡವಾಳ ಹೂಡಿಕೆ ಮತ್ತು ರೈತರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಆಕರ್ಷಿಸುವ ಕೃಷಿ ವಲಯದ ಸುಧಾರಣೆ ಇದಾಗಿದ್ದು, ಇದನ್ನು ನಮ್ಮ ಸಂಪೂರ್ಣ ಸಹಮತವಿದೆ. ಏನೇ ಸಮಸ್ಯೆ ಇದ್ದರೂ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಿ ಎಂದು ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ರೈತರ ಹೆಸರಿನಲ್ಲಿ ನವದೆಹಲಿಯಲ್ಲಿ ಹಲವು ಕಿಡಿಗೇಡಿಗಳು ನಡೆಸಿರುವ ಹಿಂಸಾಚಾರಕ್ಕೆ ಬೈಡೆನ್​ ಸರ್ಕಾರ ವಿಷಾದ ವ್ಯಕ್ತಪಡಿಸಿದೆ. ಶಾಂತಿಯುತ ಪ್ರತಿಭಟನೆಗಳನ್ನು ಪ್ರಜಾಪ್ರಭುತ್ವದ ಹೆಗ್ಗುರುತು. ಭಾರತ ಸರ್ಕಾರದ ಈ ಕಾನೂನು ಕೃಷಿ ವಲಯದಲ್ಲಿ ಸುಧಾರಣೆ ತರಲಿದೆ. ವಿದೇಶಿಗರೂ ಸೇರಿದಂತೆ ಭಾರತದಲ್ಲಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಭಾರತದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಅಮೆರಿಕದ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರಯಾಣದ ವೇಳೆ ವಾಹನಗಳ ಢಿಕ್ಕಿ- ಎಲ್ಲೆಡೆ ಆತಂಕದ ಛಾಯೆ

ಒಮ್ಮೊಮ್ಮೆ ಜೀವನ ಸಾಕಾಗಷ್ಟು ಸುಸ್ತಾಗುತ್ತದೆ, ಇದು ಮುಟ್ಟು ನಿಲ್ಲುವ ಲಕ್ಷಣವೆ?

‘ಎಂ’ ಅಕ್ಷರದವರನ್ನು ಟೀಕಿಸೋ ಭರದಲ್ಲಿ ಕಾಲ ಮೇಲೆ ಚಪ್ಪಡಿ ಹಾಕಿಕೊಂಡ ರಾಹುಲ್‌ಗಾಂಧಿ!

ಏರ್‌ಟೆಲ್‌ಗೆ ಕನ್ನ! ಲಕ್ಷಾಂತರ ಮಂದಿಯ ಖಾಸಗಿ ಮಾಹಿತಿ ಸೋರಿಕೆ- ಗ್ರಾಹಕರ ‘ಜಾತಕ’ ಹ್ಯಾಕರ್ಸ್‌ ಕೈಯಲ್ಲಿ?

ಪತ್ನಿ, ಪ್ರೇಮಿ ಹಾಗೂ ಶವ…! ಪತಿಯ ಮೃತದೇಹದೊಂದಿಗೆ ಆ ಹತ್ತು ದಿನಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
