ನವದೆಹಲಿ:ಕೇಂದ್ರ ಸರ್ಕಾರದ ಉದ್ದೇಶಿತ ಕೃಷಿ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಸಿಂಘು ಗಡಿಯಲ್ಲಿ ಎರಡು ದಿನಗಳ ಹಿಂದೆ ದಲಿತ ರೈತ ಲಕ್ಬೀರ್‌ ಸಿಂಗ್‌ ಎಂಬಾತನ ಕೈ ಕಾಲು ಕತ್ತರಿಸಿ, ನಂತರ ಜೀವ ಇರುವಾಗಲೇ, ರಕ್ತ ಸುರಿಯುತ್ತಿರುವಾಗಲೇ ಆತನನ್ನು ನೇಣುಗಂಬಕ್ಕೆ ಏರಿಸಿ ನಂತರ ಬರ್ಬರ ಹತ್ಯೆ ಮಾಡಲಾಗಿತ್ತು. ಆ ರೈತನ ಉಸಿರು ಇನ್ನೂ ಇರುವಾಗಲೇ ರಾಜಾರೋಷವಾಗಿ ಮಾತನಾಡಿದ್ದ ಪ್ರತಿಭಟನಾ ನಿರತ ‘ರೈತ’ (?), ಈತ ಸಿಖ್ ಪವಿತ್ರ ಗ್ರಂಥವನ್ನು ಅವಮಾನಿಸಿದ್ದಾನೆ. ಇನ್ನು ಕೆಲವೇ ನಿಮಿಷಗಳಲ್ಲಿ ಇವನನ್ನು ಕೊಲೆ ಮಾಡಲಿದ್ದೇವೆ ಎಂದು ಹೇಳಿ ನಂತರ ಕೊಲೆ ಮಾಡಿದ್ದ.
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯ ಹೆಸರಿನಲ್ಲಿ ಕಳೆದೊಂದು ವರ್ಷದಲ್ಲಿ ಆಗಿರುವ ಭಯಾನಕ ಘಟನೆಗಳ ಪೈಕಿ ಇದು ಅತ್ಯಂತ ಕ್ರೂರ, ಹೇಯ ಹಾಗೂ ಮನುಕುಲವೇ ತಲೆತಗ್ಗಿಸುವ ಘಟನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಘಟನೆ ಕುರಿತಂತೆ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಕೊಲೆಯಾದ ರೈತ ಲಕ್ಬೀರ್ ಸಿಂಗ್‌ನ ಕುಟುಂಬಸ್ಥರು.
ಕುಟುಂಬಸ್ಥರು ಹೇಳಿದ್ದೇನು?
ಲಕ್ಬೀರ್‌ ಸಿಂಗ್‌ ಕುಟುಂಬಸ್ಥರು ಈ ಘಟನೆ ಕುರಿತಂತೆ ಭಯಾನಕ ಸತ್ಯವನ್ನು ಹೇಳಿದ್ದಾರೆ. ಅದೇನೆಂದರೆ, ಲಕ್ಬೀರ್ ಸಿಂಗ್‌ಗೆ ಈ ಪ್ರತಿಭಟನೆಯೂ ಬೇಕಿರಲಿಲ್ಲ, ಅದರ ಬಗ್ಗೆ ಅರಿವೂ ಇರಲಿಲ್ಲ. ಆದರೆ ಹಣದ ಆಮಿಷ ಒಡ್ಡಿ ಪ್ರತಿಭಟನೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವರು. ಲಕ್ಬೀರ್ ಸಿಂಗ್ ಬಳಿಕ ಕೇವಲ 50 ರೂಪಾಯಿ ಇತ್ತು. ಚಬಾಲ್‌ನಲ್ಲಿ ಕೂಲಿ ಕೆಲಸಕ್ಕೆ ಹೋಗಲು ತಯಾರಿ ನಡೆಸಿದ್ದರು. ಆದರೆ ಇದೇ ವೇಳೆ ಪ್ರತಿಭಟನಾಕಾರರು ಬಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ನೀವು ಬಂದರೆ ನಿಮಗೂ ದುಡ್ಡು ಕೊಡುತ್ತೇವೆ ಎಂದರು. ಅವರ ಮಾತನ್ನು ನಂಬಿ ಲಕ್ಬೀರ್‌ ಹಣದ ಆಸೆಗೆ ಪ್ರತಿಭಟನೆ ಸ್ಥಳಕ್ಕೆ ಧಾವಿಸಿದರು ಎಂದು ಕುಟುಂಬಸ್ಥರು ಹೇಳುತ್ತಾರೆ.
ಈ ಕುರಿತು ಮಾತನಾಡಿದ ತಂಗಿ ರಾಜ್ ಕೌರ್‌, ನನ್ನ ಅಣ್ಣ ಲಕ್ಬೀರ್ ಸಿಖ್ ಪವಿತ್ರ ಗ್ರಂಥವನ್ನು ಅವಮಾನಿಸುವ ವ್ಯಕ್ತಿಯಲ್ಲ. ಆದರೆ ಸುಮ್ಮನೇ ಆರೋಪ ಹೊರಿಸಿ ಹತ್ಯೆ ಮಾಡಲಾಗಿದೆ. ಪ್ರತಿಭಟನೆ ಅರಿವು ಆಗಲೀ, ಕೃಷಿ ಕಾಯ್ದೆಯ ಬಗ್ಗೆ ತಿಳಿವಳಿಕೆಯಾಗಲೀ ಇರದವರನ್ನು ಕೂಡ ಹಣದ ಆಮಿಷ ಒಡ್ಡಿ ಕರೆದುಕೊಂಡು ಹೋಗಲಾಗುತ್ತಿದೆ. ಈಗ ನನ್ನ ಅಣ್ಣನನ್ನು ಹೀನಾಯವಾಗಿ ಕೊಲೆ ಮಾಡಲಾಗಿದೆ. ನಮಗೆ ನ್ಯಾಯಬೇಕು’ ಎಂದು ಅಳಲು ತೋಡಿಕೊಂಡಿದ್ದಾರೆ. ಲಕ್ಬೀರ್ ಸಿಂಗ್ ಪತ್ನಿ ಹಾಗೂ ಇಬ್ಬರು ಪುತ್ರಿಯರಂತೂ ಕಂಗೆಟ್ಟು ಹೋಗಿದ್ದಾರೆ.
ಈ ನಡುವೆ ಲಕ್ಬೀರ್ ಸಿಂಗ್‌ನನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ನಿಹಾಂಗ್ ಸಿಖ್ ಸಮುದಾಯಕ್ಕೆ ಸೇರಿದ ಸರವಜಿತ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇದರ ಹಿಂದಿರುವ ಸತ್ಯಾಸತ್ಯತೆ ಹೊರಬರಬೇಕಿದೆ.
ಈತ ಶರಣಾಗುತ್ತಿದ್ದಂತೆಯೇ, ತಮ್ಮ ಬುಡಕ್ಕೆ ಬೆಂಕಿ ಹತ್ತಬಾರದು ಎನ್ನುವ ಕಾರಣಕ್ಕೆ ವಿವಿಧ ರೈತ ಸಂಘಟನೆಗಳು ರೈತ ಪ್ರತಿಭಟನೆಗೂ ಕೊಲೆಗೂ ಸಂಬಂಧವಿಲ್ಲ ಎಂದು ಹೇಳಿಕೆ ಕೊಡಲು ಶುರು ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಪ್ರತಿಭಟನೆ ಹೆಸರಲ್ಲಿ ಕಳೆದೊಂದು ವರ್ಷಗಳಿಂದ ನೀಚ ಕೃತ್ಯಗಳನ್ನು ಎಸಗಲಾಗುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ.
‘ಯತ್ನಾಳ್‌ರ ಸಿಡಿ ಬಿಡುಗಡೆಗೆ ಕ್ಷಣಗಣನೆ’- ಜಾಲತಾಣದ ತುಂಬ ಹರಿದಾಡ್ತಿದೆ ಪೋಸ್ಟ್‌: ದೂರು ದಾಖಲು

ಆನ್‌ಲೈನ್‌ನಲ್ಲಿ ಲುಡೋ ಆಡ್ತಾ ಲವ್‌ನಲ್ಲಿ ಬಿದ್ದ ಮಕ್ಕಳು! ಮದ್ವೆಯಾಗಲು ಮನೆಬಿಟ್ಟ ಬಾಲಕಿ: ಮುಂದಾದದ್ದು ದುರಂತ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seven − two =
Remember me
