ನವದೆಹಲಿ:ಕಳೆದ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿರುವುದೂ ಅಲ್ಲದೇ, ಭಾರಿ ಗಲಭೆ ಸೃಷ್ಟಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ಒಂದೊಂದೇ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗುತ್ತಿವೆ.
ಇವೆಲ್ಲಾ ಪೂರ್ವನಿಯೋಜಿತ ಕೃತ್ಯವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಪಿತೂರಿ ಎನ್ನುವುದು ಇದಾಗಲೇ ತನಿಖೆಯಿಂದ ಸಾಬೀತಾಗಿದ್ದು, ಇದರ ಹೊರತಾಗಿಯೂ ಕೆಲವು ಮಾಹಿತಿಗಳು ಲಭ್ಯವಾಗಿವೆ. ಈ ಕುರಿತು ಪೊಲೀಸರು ಚಾರ್ಜ್‌ಷೀಟ್‌ ಸಲ್ಲಿಕೆ ಮಾಡಿದ್ದು ಈ ಕರಾಳ ದಿನಕ್ಕಾಗಿ ರೈತರ ಹೆಸರಿನಲ್ಲಿ ಹೇಗೆಲ್ಲಾ ಪಟ್ಟಬದ್ಧ ಹಿತಾಸಕ್ತಿಗಳು ಗಲಭೆ ಸೃಷ್ಟಿಸಿದ್ದವು, ಅದಕ್ಕಾಗಿ ಎಷ್ಟೆಷ್ಟು ಹಣ ಮಂಜೂರಾಗಿತ್ತು ಎಂಬೆಲ್ಲಾ ವಿವರಗಳು ಹೊರಬಿದ್ದಿವೆ.
ಕೆಂಪು ಕೋಟೆ ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದವರಿಗೆ 50 ಲಕ್ಷ ರೂಪಾಯಿ ಮೊತ್ತ ನಿಗದಿ ಮಾಡಲಾಗಿತ್ತು. ಈ ಕುರಿತು ಆರೋಪಿ ಇಕ್‌ಬಾಲ್‌ ಸಿಂಗ್‌ನ ಮಗಳು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ತಮಗೆ ಈ ಕಾರ್ಯಕ್ಕೆ 50 ಲಕ್ಷ ರೂಪಾಯಿ ಸಿಕ್ಕಿರುವ ವಿಷಯ ತಿಳಿಸಿದ್ದು, ಅದರ ದಾಖಲೆಗಳು ದೊರೆತಿವೆ, ಇದರಿಂದ ಸತ್ಯ ಹೊರಬಂದಿದೆ ಎಂದು ಚಾರ್ಜ್‌ಷೀಟ್‌ನಲ್ಲಿ ದಾಖಲೆ ಸಹಿತವಾಗಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡಲು ಕೆಂಪುಕೋಟೆಗೆ ಹೇಗೆಲ್ಲಾ ಸ್ಕೆಚ್‌ ಹಾಕಲಾಗಿತ್ತು ಎಂಬ ಬಗ್ಗೆಯೂ ವಿವರಣೆ ನೀಡಲಾಗಿದೆ. ನಟ ದೀಪ್‌ ಸಿಧು ಇದರ ರೂವಾರಿಯಾಗಿದ್ದು, ಎಲ್ಲಾ ಸ್ಕೆಚ್‌ ಹಿಂದೆ ಈತನ ಕೈವಾಡವಿದೆ. ನಿಜವಾಗಿಯೂ ರೈತರಿಗೇ ತೊಂದರೆ ಆಗುತ್ತಿದೆ ಎಂದು ಜನಸಾಮಾನ್ಯರು ಅಂದುಕೊಳ್ಳಲಿ ಎನ್ನುವ ಕಾರಣಕ್ಕೆ ವೃದ್ಧರನ್ನು ಪ್ರತಿಭಟನೆಗಾಗಿ ಸಜ್ಜುಗೊಳಿಸಲಾಗಿತ್ತು.
ನವೆಂಬರ್, ಡಿಸೆಂಬರ್‌ನಲ್ಲಿಯೇ ಕೆಂಪು ಕೋಟೆ ಗಲಭೆಗೆ ಪಿತೂರಿ ರೂಪಿಸಲಾಗಿತ್ತು. ಇದಕ್ಕೆ ಇಂಬುಕೊಡಲು ಎಂಬಂತೆ ಇದೇ ಅವಧಿಯಲ್ಲಿ ಟ್ರ್ಯಾಕ್ಟರ್‌ನ ವಿಪರೀತ ಖರೀದಿಯಾಗಿವೆ. 2020ರ ನವೆಂಬರ್‌ನಲ್ಲಿ ಟ್ರ್ಯಾಕ್ಟರ್‌ಗಳ ಖರೀದಿ ಶೇ.43 ಹಾಗೂ ಡಿಸೆಂಬರ್‌ನಲ್ಲಿ ಶೇ.94ರಷ್ಟು ಹೆಚ್ಚಾಗಿದೆ. ಹರಿಯಾಣದಲ್ಲೂ ಕೂಡ ಇದೇ ಅವಧಿಯಲ್ಲಿ ಟ್ರ್ಯಾಕ್ಟರ್‌ ಸಂಖ್ಯೆ ಏರಿದೆ ಎಂದು ಚಾರ್ಜ್‌ಷೀಟ್‌ನಲ್ಲಿ ಉಲ್ಲೇಖವಾಗಿದೆ.
ಅವರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ- ‘ಮೂರ್ಖರ ವಿಜ್ಞಾನ’ದ ಪ್ರತಿಭಟನೆಗೆ ಬಾಬಾ ರಾಮ್‌ದೇವ್‌ ಪ್ರತಿಕ್ರಿಯೆ

ಹೀಗೂ ಇರ್ತಾರೆ! ತಲೆಬುರುಡೆ ಓಪನ್‌ ಮಾಡಿ ಕತ್ತರಿ ಹಾಕಿದರೂ ಜೋಕ್‌ ಮಾಡುತ್ತಿದ್ದ ರೋಗಿ…

ದುಬೈ ಟು ಮುಂಬೈ- 18 ಸಾವಿರ ರೂಪಾಯಿಯಲ್ಲಿ ರೋಚಕ ಅನುಭವ: ಒಂಟಿ ಪ್ರಯಾಣಿಕನಿಗಾಗಿ ಉರಿದದ್ದು 17 ಟನ್ ಇಂಧನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
