ಶ್ರೀನಗರ:ಕಾಶ್ಮೀರ ಎಂದಿಗೂ ಭಾರತದ ಭಾಗವೇ. ಅದನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲ್ಲ. ಇದು ಸದಾ ಭಾರತದ ಭಾಗವಾಗಿಯೇ ಉಳಿಯಲಿದೆ. ನನ್ನನ್ನು ಗುಂಡು ಹಾಕಿ ಸಾಯಿಸಿದರೂ ಇದು ಬದಲಾಗಲ್ಲ, ಕಾಶ್ಮೀರ ಪಾಕಿಸ್ತಾನದ ಕೈವಶ ಆಗಲಾರದು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹೇಳಿದರು.
ಕಾಶ್ಮೀರದಲ್ಲಿ ನಡೆದ ಸಿಖ್ಖರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಾವು ಕೂಡ ಭಾರತದ ಭಾಗವೇ, ಭಾರತದ ಜತೆಗೇ ಉಳಿಯುತ್ತೇವೆ, ಪರಿಸ್ಥಿತಿ ಯಾವುದೇ ಕಾರಣಕ್ಕೂ ಬದಲಾಗಲು ಸಾಧ್ಯವಿಲ್ಲ ಎಂದರು. ಇಲ್ಲಿಯ ಶಿಕ್ಷಕ ಸುಪೀಂದರ್‌ ಕೌರ್‌ ಅವರನ್ನು ಉಗ್ರರು ಹೊಡೆದು ಸಾಯಿಸಿದ್ದರು. ಅವರ ಬಗ್ಗೆ ನಡೆಸಲಾಗಿದ್ದ ಸಂತಾಪ ಸೂಚಕ ಸಭೆಯಲ್ಲಿ ಫಾರೂಕ್‌ ಮಾತನಾಡುತ್ತಿದ್ದರು.
ಕೌರ್‌ ಅವರ ಸಾವಿಗೆ ಕಂಬನಿ ಮಿಡಿದ ಅವರು, ವಿದ್ಯಾರ್ಥಿಗಳಿಗೆ ಕಲಿಸುವ ಶಿಕ್ಷಕನನ್ನು ಕೊಲ್ಲುವುದು ಇಸ್ಲಾಂ ಸೇವೆ ಅಲ್ಲ. ಅವರು ಭೂತದ ಸೇವೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತದಾದ್ಯಂತ ದ್ವೇಷದ ಬಿರುಗಾಳಿ ತಿರುಗುತ್ತಿದ್ದು ಮುಸ್ಲಿಮರು, ಹಿಂದೂಗಳು ಮತ್ತು ಸಿಖ್ಖರ ಸಮುದಾಯಗಳನ್ನು ಒಡೆಯಲಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಿದೆ ಎಂದರು.
ಭಾರತವನ್ನು ಒಡೆಯುವ ರಾಜಕಾರಣ ನಡೆಯುತ್ತಲೇ ಇದೆ. ಅದನ್ನು ನಾವು ತಡೆಯಬೇಕಿದೆ. ಇಲ್ಲದಿದ್ದರೆ ಭಾರತ ಅಸ್ತಿತ್ವ ಕಳೆದುಕೊಳ್ಳುತ್ತದೆ. ನಾವೆಲ್ಲ ಒಂದಾಗಿ ಬದುಕಿದಾಗ ಮಾತ್ರ ನಮ್ಮ ದೇಶವನ್ನು ಉಳಿಸಲು ಸಾಧ್ಯ. 1990ರ ದಶಕದಲ್ಲಿ ಎಲ್ಲರೂ ಕಾಶ್ಮೀರ ತೊರೆದಾಗ ಸಿಖ್ಖರು ಮಾತ್ರ ಉಳಿದುಕೊಂಡರು. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ಧೈರ್ಯದಿಂದ ಹೋರಾಡಬೇಕು. ಮುಸ್ಲಿಮರು, ಸಿಖ್ಖರು, ಹಿಂದೂಗಳು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರೂ ಅವರ ವಿರುದ್ಧ ಹೋರಾಡಲು ಒಂದಾಗಬೇಕಿದೆ ಎಂದರು.
‘ಯತ್ನಾಳ್‌ರ ಸಿಡಿ ಬಿಡುಗಡೆಗೆ ಕ್ಷಣಗಣನೆ’- ಜಾಲತಾಣದ ತುಂಬ ಹರಿದಾಡ್ತಿದೆ ಪೋಸ್ಟ್‌: ದೂರು ದಾಖಲು

‘ನಾನು ಅಮ್ಮ ಆಗ್ಬೇಕು, ಶಕುಂತಲಾ ಬೇಗ ಮುಗಿಸಿ’ ಎಂದಿದ್ರು ಸಮಂತಾ: ಡಿವೋರ್ಸ್‌ಗೆ ನಿರ್ಮಾಪಕಿ ಅಚ್ಚರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
