ಹೈದರಾಬಾದ್:ಬೀಡಿ ತರಲೆಂದು ಹೋದ ಬಾಲಕ ಮನೆ ಸೇರಲು ತಡವಾದ ಕಾರಣಕ್ಕೆ ಕುಡುಕ ತಂದೆಯೊಬ್ಬ ಆತನನ್ನು ಜೀವಂತವಾಗಿ ಸುಟ್ಟು ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.
ಆರನೇ ತರಗತಿ ಓದುತ್ತಿರುವ ಬಾಲಕ ಚರಣ್​, ತಂದೆಯ ಈ ನಿರ್ದಯಿ ಕೃತ್ಯಕ್ಕೆ ಬಲಿಯಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಂಬಂಧ ಆರೋಪಿ ತಂದೆ ಬಾಲುವನ್ನು ಪೊಲೀಸರು ಬಂಧಿಸಿದ್ದಾರೆ.
ಕೂಲಿ ಕಾರ್ಮಿಕನಾಗಿರುವ ಬಾಲು ಇದೇ 17ರಂದು ಬೀಡಿ ತರಲೆಂದು ಮಗನನ್ನು ಅಂಗಡಿಗೆ ಕಳುಹಿಸಿದ್ದ. ಆದರೆ ಬಾಲಕ ವಾಪಸ್ ಬರಲು ತಡವಾಗಿದೆ. ಇದೇ ಕಾರಣಕ್ಕೆ ಈ ಕುಡುಕ ಅಪ್ಪನ ಸಿಟ್ಟು ನೆತ್ತಿಗೇರಿದೆ. ಅದರ ಜತೆಗೆ, ತನ್ನ ಮಗ ಸರಿಯಾಗಿ ಓದಿನ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ಸಿಟ್ಟು ಬೇರೆ. ಇದರಿಂದ ಮಗನನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ.
ಮಗನಿಗೆ ಬೀಳುತ್ತಿರುವ ಏಟನ್ನು ನೋಡಲಾಗದ ತಾಯಿ ಮಧ್ಯೆ ಪ್ರವೇಶ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಪಾಪಿ ತಂದೆ, ಪತ್ನಿಯನ್ನು ನೂಕಿ ಚರಣ್ ಮೇಲೆ ಟರ್ಪೆಂಟೇನ್ ಎಣ್ಣೆ ಸುರಿದಿದ್ದಾನೆ. ನಂತರ ಬೀಡಿ ಹತ್ತಿಸಿ ಅದೇ ಬೆಂಕಿಕಡ್ಡಿಯನ್ನು ಮಗನ ಮೇಲೆಸೆದು ಬೆಂಕಿ ಹಚ್ಚಿದ್ದಾನೆ.
ಬಾಲಕನ ಚೀರಾಟ ಕೇಳಿದ ಅಕ್ಕಪಕ್ಕದವರು ಧಾವಿಸಿ ಬಂದು ನೀರುಸುರಿದು ಬೆಂಕಿ ಆರಿಸುವಷ್ಟರಲ್ಲಿ ಬಾಲಕ ಶೇ.90 ರಷ್ಟು ಸುಟ್ಟ ಗಾಯಗಳಾಗಿದ್ದವು. ಕೂಡಲೇ ಆತನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದೇ ವೇಳೆ ತಂದೆ ಬಾಲುವನ್ನು ಪೊಲೀಸರು ವಶಕ್ಕೆ ಪಡೆದರು.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕನಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯರಾತ್ರಿ ಅವನು ಅಸುನೀಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 12 =
Remember me
