ಚಂಡೀಗಢ:ಅತ್ಯಂತ ಭಯಾನಕ ಎನ್ನುವ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಕಾಲುವೆ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹರಿಯಾಣಧ ಕರ್ನಲ್ ಜಿಲ್ಲೆಯ ನಲಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಶೀಲ್ ಕುಮಾರ್ ಎಂಬಾತ ಇಂಥದ್ದೊಂದು ಹೀನ ಕೃತ್ಯವನ್ನು ಎಸಗಿದ್ದಾನೆ. ತನ್ನ 3, 5 ಹಾಗೂ 8 ವರ್ಷದ ಮೂವರು ಮಕ್ಕಳನ್ನು ಕಾಲುವೆಗೆ ತಳ್ಳಿದ್ದಾನೆ.
ಕಳೆದ ಸೋಮವಾರ ಮನೆಯಿಂದ ಕಾಣೆಯಾಗಿದ್ದ ಮಕ್ಕಳಿಗಾಗಿ ಮಕ್ಕಳ ತಾಯಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಎಲ್ಲೂ ಸಿಗಲಿಲ್ಲ. ಈ ಮಧ್ಯೆಯೇ ಮನೆಗೆ ಬಂದ ಗಂಡ ತಾನು ಮಾಡಿರುವ ಕೃತ್ಯದ ಬಗ್ಗೆ ಹೆಂಡತಿಗೆ ತಿಳಿಸಿದ್ದಾನೆ!ಸುಶೀಲ್​ ಕುಮಾರ್​ ಹಣ್ಣು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾನೆ. ಮೂವರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಕಾಲುವೆಗೆ ತಳ್ಳಿದ್ದಾನೆ. ಅದನ್ನು ನೋಡಿದ್ದ ಸ್ಥಳೀಯರು ಮಕ್ಕಳನ್ನು ಬಚಾವ್​ ಮಾಡುವ ಕಾರ್ಯ ಮಾಡಿದ್ದರೂ ಪ್ರಯೋಜನ ಆಗಿಲಿಲ್ಲ.
ಇದನ್ನೂ ಓದಿ:ಕಣ್ಣಿನ ಕೆಳಗಿರುವ ಕಪ್ಪು ವರ್ತುಲ: ವೈದ್ಯರು ಹೇಳಿರುವ ಪರಿಹಾರ ಇಲ್ಲಿದೆ…
ಪೊಲೀಸರು ಸುಶೀಲ್​ನನ್ನು ಬಂಧಿಸಿ ಬಾಯಿ ಬಿಡಿಸಿದಾಗ ತನ್ನ ಪತ್ನಿಗೆ ಅಕ್ರಮ ಸಂಬಂಧವಿದ್ದು, ಈ ಹಿನ್ನೆಲೆಯಲ್ಲಿ ತಮ್ಮಿಬ್ಬರ ನಡುವೆ ಜಗಳವಾಗುತ್ತಿತ್ತು. ಆಕೆಯ ಮೇಲಿನ ಸೇಡಿನಿಂದಾಗಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮಕ್ಕಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕುಂಜ್‍ಪುರ ಪೊಲೀಸ್ ಠಾಣೆ ಸ್ಟೇಷನ್ ಹೌಸ್ ಆಫೀಸರ್ ಮುನೀಶ್ ಕುಮಾರ್ ತಿಳಿಸಿದ್ದಾರೆ.
ಲ್ಯಾಂಡ್​ಲೈನ್​ನಿಂದ ಮೊಬೈಲ್​ಗೆ ಕರೆ: ಬದಲಾಗಿದೆ ನಿಯಮ- ಜ.1ರಿಂದ ಜಾರಿ

ಕರೊನಾ ಪತ್ತೆಗೆ​ ಬರುತ್ತಿವೆ ನಾಯಿಗಳು! ನೀಡಲಿವೆ ರಿಸಲ್ಟ್​ ಭಾರಿ ಫಾಸ್ಟ್​…

ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 20 =
Remember me
