ಕೋಲ್ಕತಾ:ಕರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಧಾರಾವಾಹಿಗಳ ಶೂಟಿಂಗ್‌ ಸ್ಥಗಿತಗೊಂಡಿದೆ. ಇದರಿಂದಾಗಿ ಎಷ್ಟೋ ಮಂದಿಗೆ ಸದ್ಯ ಕೆಲಸವಿಲ್ಲದಾಗಿದೆ. ಇನ್ನು ಕೆಲವು ಕಲಾವಿದರ ಜೀವನಕ್ಕಾಗಿ ಚಿಕ್ಕಪುಟ್ಟ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ನಟ ಯಾವುದೇ ಉದ್ಯೋಗ ಸಿಗದೇ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಈ ಘಟನೆ ನಡೆದಿರುವುದು ಕೋಲ್ಕತಾದಲ್ಲಿ. ಬೆಂಗಾಲಿ ಧಾರಾವಾಹಿಯ ಪ್ರಸಿದ್ಧ ನಟ ಸುವೋ ಚಕ್ರವರ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 31 ವರ್ಷದ ಸುವೋ ಕೆಲಸ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನಿದ್ದೆ ಮಾತ್ರೆಯನ್ನು ನುಂಗಿ ಫೇಸ್ ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
31ನೇ ವಯಸ್ಸಿನಲ್ಲಿಯೂ ನಾನು ನಿರುದ್ಯೋಗಿಯಾಗಿದ್ದೇನೆ ಎಂದು ಅಮ್ಮ ಅಂದುಕೊಳ್ಳುವುದು ಬೇಡ, ಅಪ್ಪನನ್ನು ಕಳೆದುಕೊಂಡ ನಾವು ಪಿಂಚಣಿಯಲ್ಲಿ ಬದುಕುತ್ತಿದ್ದೇವೆ. ನಾನೊಬ್ಬ ಹೊರೆಯಾಗುವುದು ಬೇಡ. ಅದಕ್ಕಾಗಿಯೇ ಸಾಯಲು ಬಯಸಿದ್ದೇನೆ. ಮಹಡಿಯಿಂದ ಜಿಗಿಯುವುದು, ಕೈಯ ನರ ಕುಯ್ದುಕೊಳ್ಳುವುದು ಯಾವುದೂ ನನಗೆ ಇಷ್ಟವಿಲ್ಲ. ಆದ್ದರಿಂದ ಮಾತ್ರೆ ತಿಂದು ಸಾಯುತ್ತಿದ್ದೇನೆ ಎಂದು ಹೇಳಿ ಮಾತ್ರೆ ತೆಗೆದುಕೊಂಡಿದ್ದಾರೆ.
ಇದನ್ನು ಫೇಸ್‌ಬುಕ್‌ನಲ್ಲಿ ಗಮನಿಸಿದ ಸುವೋ ಸ್ನೇಹಿತ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಫೇಸ್ ಬುಕ್ ಲೈವ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರು ನಟನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತೆರಿಗೆ ಕಟ್ಟಲು ದುಡ್ಡಿಲ್ಲ- ಜಾಲತಾಣದಲ್ಲಿ ದುಃಖ ತೋಡಿಕೊಂಡ ನಟಿ ಕಂಗನಾ ಏನು ಹೇಳಿದ್ದಾರೆ ನೋಡಿ…

ಅಕ್ರಮ ಮದ್ಯ ಇಟ್ಟ ಗೋದಾಮಿಗೆ ರಾಯಚೂರು ಅಧಿಕಾರಿ ಕನ್ನ! ಎಣ್ಣೆ ಕದ್ದು ಮಾರಾಟ

ನಡುರಾತ್ರಿ ಕಟ್ಟಡ ಕುಸಿತ- ಸವಿನಿದ್ದೆಯಲ್ಲಿದ್ದವರ ದುರ್ಮರಣ: ಮಕ್ಕಳು ಸೇರಿದಂತೆ 11 ಮಂದಿ ಸಾವು

ದೇಹ ಪೂರ್ತಿ ತಿರುಗಿಸಿ ರಾಖಿಸಾವಂತ್‌ ವ್ಯಾಯಾಮ: ವಿಡಿಯೋ ಶೇರ್- ಅಲ್ಲೂ ಟ್ರೋಲ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + four =
Remember me
