ನವದೆಹಲಿ :ಈರುಳ್ಳಿ ಸಲಾಡ್​ಗಾಗಿ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಚಾಕುವಿನಿಂದ ಚುಚ್ಚಿ ಭಯಾನಕ ರೀತಿಯಲ್ಲಿ ಗಾಯಗೊಳಿಸಿದ ಘಟನೆ ದಕ್ಷಿಣ ದೆಹಲಿಯ ಫತೇಪುರ ಬೇರಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಈರುಳ್ಳಿಗಾಗಿ ನಡೆದ ಜಗಳ ಇದಾಗಿದೆ.
ಡಿಸೆಂಬರ್ 8ರಂದು ಈ ಘಟನೆ ನಡೆದಿದೆ. ಆರೋಪಿ ರಿಯಾಸಾತ್ ಅಲಿ (59) ಮತ್ತು ಪವನ್ (60) ಅವರು ದಕ್ಷಿಣದ ದೆಹಲಿಯ ಫತೇಪುರ್ ಬೇರಿಯ ಎಸ್‌ಬಿ ಫಾರ್ಮ್‌ಗೆ ಗೋಡೌನ್‌ನಲ್ಲಿ ಕೆಲಸ ಮಾಡಲು ಹೋಗಿದ್ದರು. ಕೆಲಸದ ನಂತರ, ಇಬ್ಬರೂ ಇತರರೊಂದಿಗೆ ರಾತ್ರಿ ಊಟಕ್ಕೆ ಕುಳಿತಿದ್ದಾರೆ. ಈ ಸಮಯದಲ್ಲಿ ಈರುಳ್ಳಿ ಸಲಾಡ್ ಹಂಚಿಕೊಳ್ಳುವ ಬಗ್ಗೆ ಅಲಿ ಮತ್ತು ಪವನ್ ನಡುವೆ ತೀವ್ರ ವಾಗ್ವಾದ ನಡೆದಿದೆ,
ಹೆಚ್ಚುವರಿ ಈರುಳ್ಳಿ ಕೇಳಿದ್ದಾನೆ. ಆದರೆ ಅದಾಗಲೇ ಈರುಳ್ಳಿ ಖರ್ಚಾಗಿದ್ದರಿಂದ ಈರುಳ್ಳಿ ಉಳಿದಿಲ್ಲ ಎಂದು ಪವನ್ ಹೇಳಿದ್ದಾರೆ. ಕೋಪದಿಂದ, ಅಲಿ ತನ್ನ ಪಕ್ಕದಲ್ಲಿ ಇದ್ದ ಅಡುಗೆ ಚಾಕುವಿನಿಂದ ಪವನನ್ನು ಅನೇಕ ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಪವನ್​ ಬಿದ್ದಾಗ, ಅಲಿ ಅಲ್ಲಿಂತ ಹೋಗಿದ್ದಾನೆ. ನಂತರ ಸ್ಥಳೀಯರು ಬಂದು ನೋಡಿದಾಗ, ಪೊಲೀಸರಿಗೆ ಕರೆ ಮಾಡಿದ್ದಾರೆ. ಆಸ್ಪತ್ರೆಗೆ ಪವನ್​ ಅವರನ್ನು ಸಾಗಿಸಲಾಯಿತು. ಚಾಕುವಿನ ಇರಿತ ಎಷ್ಟು ಇತ್ತೆಂದರೆ ಪವನ್​ ಅವರ ಕರುಳು ಮತ್ತು ದೇಹದ ಇತರ ಅಂಗಗಳು ಹೊರಕ್ಕೆ ಬಂದಿದ್ದವು.
ವೈದ್ಯರು ಚಿಕಿತ್ಸೆ ನೀಡಿದ್ದು, ಸದ್ಯ ಪವನ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳದ ಸಮೀಪವಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ದಕ್ಷಿಣ ಪೊಲೀಸ್ ಉಪ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.
ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

ಕೃಷಿ ಕಾನೂನು ಜಾರಿ: ಕೇಂದ್ರಕ್ಕೆ ‘ಸುಪ್ರೀಂ’ ಮಹತ್ವದ ಸೂಚನೆ- ರೈತರಿಗೂ ಕಿವಿಮಾತು

ಸೆಕ್ಸ್​, ಬೆತ್ತಲೆ ಫೋಟೋ ಕದ್ದುಮುಚ್ಚಿ ನೋಡ್ತೀರಿ, ನನ್ನ ದೇಹಕ್ಕೆ ವಿವಾದ ಯಾಕೆ ಎಂದ ಮಿಲಿಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − five =
Remember me
