ಲಖನೌ:ಕರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಸಾಗಿದೆ. ಕ್ಷಣ ಕ್ಷಣಕ್ಕೂ ಈ ವೈರಸ್‌ ತನ್ನ ಎರಡನೆಯ ಅಲೆಯ ಮೂಲಕ ಭೀತಿ ಸೃಷ್ಟಿಸುತ್ತಿದೆ. ವೈರಸ್‌ನಿಂದ ಮೃತಪಟ್ಟರೆ, ಭಯದಿಂದ ಅವರ ಕುಟುಂಬಸ್ಥರೇ ಆಸ್ಪತ್ರೆಯ ಕಡೆ ಸುಳಿಯದ, ಶವಗಳನ್ನು ತೆಗೆದುಕೊಂಡ ಹೋಗದ ಘಟನೆಗಳಿಗೆ ಲೆಕ್ಕವೇ ಇಲ್ಲ.
ಇಂಥ ಸ್ಥಿತಿಯ ನಡುವೆ ಇಲ್ಲೊಬ್ಬ ಮಹಿಳೆ ಕರೊನಾ ಸೋಂಕಿತರ ಶವವನ್ನು ಉಚಿತವಾಗಿ ಸ್ಮಶಾನಕ್ಕೆ ಕೊಂಡೊಯ್ಯುವ ಸೇವೆಯಲ್ಲಿ ನಿರತರಾಗಿದ್ದಾರೆ! ‌
ಲಖನೌದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಶವಗಳನ್ನು ಉಚಿತವಾಗಿ ಕೊಂಡೊಯ್ಯುವ ಸೇವೆಯಿಂದ ಇಂಥದ್ದೊಂದು ಸೇವೆ ಆರಂಭಿಸಿರುವ ಕರೊನಾ ವಾರಿಯರ್‌ ಹೆಸರು ವರ್ಷಾ ವರ್ಮಾ. ಮೃತಪಟ್ಟವರ ಸಂಬಂಧಿಯನ್ನು ಚಿತಾಗಾರದ ಬಳಿ ಕರೆದುಕೊಂಡು ಹೋಗಿ ಕೊನೆಯದಾಗಿ ಮುಖದ ದರ್ಶನ ಮಾಡಿಸುತ್ತಿದ್ದಾರೆ ಕೂಡ. ಯಾರೇ ಕರೆ ಮಾಡಿದರೂ ಅವರಿಗೆ ಸಹಾಯ ಮಾಡುತ್ತಾರೆ ಇವರು.
ಕೆಲ ದಿನಗಳ ಹಿಂದೆ ವರ್ಷಾ ಅವರ ಸ್ನೇಹಿತರೊಬ್ಬರು ಮೃತಪಟ್ಟಿದ್ದರು, ಆಗ ಆಸ್ಪತ್ರೆಯಿಂದ ಶವ ಸಾಗಿಸಲು ವಾಹನವಿಲ್ಲದೆ ಪರದಾಡುವಂತಾಯಿತು, ಅದನ್ನು ನೋಡಿದ ವರ್ಷಾ ಇಂಥದ್ದೊಂದು ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಒಂದು ಕಾರನ್ನು ಪಡೆದಿರುವ ವರ್ಷಾ ಅದಕ್ಕಾಗಿ ಚಾಲಕರನ್ನು ನೇಮಿಸಿದ್ದಾರೆ.
ನಮ್ಮಮ್ಮ ಕ್ಯಾಟ್‌ವಾಕ್‌ ಮಾಡುತ್ತಿದ್ದಾರೆ- ಹೃದಯಸ್ಪರ್ಶಿ ವಿಡಿಯೋ ಹಂಚಿಕೊಂಡ ನಟಿ ರಾಖಿ ಸಾವಂತ್‌

ನಾನು ಆಫೀಸ್‌ಗೆ ಹೋಗ್ತಿದ್ದಂತೆಯೇ ಅವಳೂ ಎಂಗೇಜು, ನನ್ನ ಗಂಡನೂ ಬಿಜಿ… ಸಂಸಾರ ಹೇಗೆ ಸರಿಪಡಿಸಲಿ?

15 ಮಂದಿ ಜತೆ ಬಂದ ಹ್ಯಾರೀಸ್‌ ಪುತ್ರ ನಳಪಾಡ್‌ ಹೀಗೆಲ್ಲಾ ಮಾಡಿದ್ರು… ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
