ನಾಸಿಕ್ (ಮಹಾರಾಷ್ಟ್ರ): ಟೋಲ್ ಪ್ಲಾಜಾ ಒಂದರಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿ ಟ್ರಾಫಿಕ್​ ಜಾಮ್​ ಉಂಟು ಮಾಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.
ನಾಸಿಕ್ ಜಿಲ್ಲೆಯ ಪಿಂಪಲಗಾಂವ್ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಪತಿಯೊಂದಿಗೆ ಬಂದ ಮಹಿಳೆಯೊಬ್ಬರು ಟೋಲ್‌ ಪ್ಲಾಜಾದ ಮಹಿಳಾ ಸಿಬ್ಬಂದಿ ಜತೆ ಜಗಳಕ್ಕಿಳಿದಿದ್ದಾರೆ. ಟೋಲ್​ನಲ್ಲಿ ಹಣ ನೀಡುವ ಸಲುವಾಗಿ ಮಹಿಳೆ ಮತ್ತು ಟೋಲ್​ನ ಮಹಿಳಾ ಸಿಬ್ಬಂದಿ ನಡುವೆ​ ಜಗಳವಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರೂ ಜುಟ್ಟುಹಿಡಿದು ಜಗಳ ಮಾಡಿದ್ದಾರೆ. ಅದು ಸಾರ್ವಜನಿಕ ರಸ್ತೆ ಎನ್ನುವುದನ್ನೂ ಮರೆತು, ಪರಸ್ಪರ ಜುಟ್ಟು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಎಳೆದಾಡಿದ್ದಾರೆ.
ಅಲ್ಲಿ ಇದ್ದವರ ಪೈಕಿ ಕೆಲವರು ಜಗಳ ತಪ್ಪಿಸೋದಕ್ಕೆ ಬಂದರೂ ಅವರ ಮಾತನ್ನು ಮಹಿಳೆಯರು ಕೇಳಲಿಲ್ಲ. ಇನ್ನು ಕೆಲವರು ಜಗಳದ ಮಜ ನೋಡುತ್ತಾ ಇದ್ದರೆ ಮತ್ತೆ ಕೆಲವರು ವಿಡಿಯೋ ಮಾಡಿ ಈಗ ಹರಿಬಿಟ್ಟಿದ್ದಾರೆ. 2 ನಿಮಿಷ, 47 ಸೆಕೆಂಡ್​ನ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ವೈರಲ್​ ಆಗಿದೆ. ಈ ಮಹಿಳೆಯರ ಜಗಳದಿಂದಾಗಿ ಟೋಲ್‌ನಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)‘
ಇಲ್ಲಿದೆ ನೋಡಿ ವಿಡಿಯೋ:
A shocking incident has come to light that a fierce fight took place between women at the Pimpalgaon toll booth near Nashik.@IGPNashikRangepic.twitter.com/1PwGTugSqo— 𝕄𝕣.ℝ𝕒𝕛 𝕄𝕒𝕛𝕚 (@Rajmajiofficial)September 15, 2022
A shocking incident has come to light that a fierce fight took place between women at the Pimpalgaon toll booth near Nashik.@IGPNashikRangepic.twitter.com/1PwGTugSqo
ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಹಿಂದೂ ದೇಗುಲದ ಘಂಟೆ, ಶಂಖ, ತ್ರಿಶೂಲಗಳು ಪತ್ತೆ! ಎಲ್ಲೆಡೆ ಕೋಲಾಹಲ…
ಬುರ್ಖಾ ತೆಗೆಯುತ್ತಿದ್ದಂತೆಯೇ ಮೂರ್ಛೆ ಹೋಗೋ ಬೆಂಗಳೂರಿನ ಚಿನ್ನದಂಗಡಿವರು! ಬ್ಲ್ಯಾಕ್​ ಮ್ಯಾಜಿಕ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
