ನವದೆಹಲಿ:ಬಾಲಿವುಡ್​ಗೂ ಡ್ರಗ್ಸ್​ ನಂಟು ಅಂಟಿರುವ ವಿವಾದ ಇದೀಗ ಬೇರೆ ಬೇರೆ ಸ್ವರೂಪ ತಾಳುತ್ತಿದೆ. ಖ್ಯಾತ ನಿರ್ದೇಶಕ ಕರಣ್​ ಜೋಹರ್​ ಏರ್ಪಡಿಸಿದ್ದ ಪಾರ್ಟಿಯಲ್ಲಿ ಘಟಾನುಘಟಿ ನಟ-ನಟಿಯರು ಡ್ರಗ್ಸ್​ ಸೇವನೆ ಮಾಡಿದ್ದರು ಎಂದು ಶಿರೋಮಣಿ ಅಖಾಲಿ ದಳದ ಮುಖಂಡ ಮಂಜಿಂದರ್‌ ಸಿಂಗ್‌ ಸಿರ್ಸಾ ದೂರು ದಾಖಲು ಮಾಡಿದ್ದಾರೆ.
ಈ ಕುರಿತು ವಿಡಿಯೋವನ್ನು ಕೂಡ ಅವರು ದೂರಿನ ಜತೆ ನೀಡಿದ್ದಾರೆ. ಮಾದಕ ವಸ್ತು ನಿಯಂತ್ರಣ ಬ್ಯೂರೋ ಮುಖ್ಯಸ್ಥರಾದ ರಾಕೇಶ್‌ ಆಸ್ತಾನ ಅವರನ್ನು ದೆಹಲಿಯಲ್ಲಿ ಭೇಟಿಯಾಗಿರುವ ಮಂಜಿಂದರ್‌ ಸಿಂಗ್‌ ಸಿರ್ಸಾ ದೂರು ನೀಡಿದ್ದಾರೆ.
ಈ ಹಿಂದೆ ಕರಣ್‌ ಜೋಹರ್‌ ಅವರು ಪಾರ್ಟಿ ಏರ್ಪಡಿಸಿದ್ದರು. ಅದರಲ್ಲಿ ಹಿಂದಿ ಚಿತ್ರರಂಗದ ಅನೇಕ ನಟ-ನಟಿಯರು ಭಾಗವಹಿಸಿದ್ದರು. ಅವರೆಲ್ಲರೂ ಡ್ರಗ್ಸ್‌ ಸೇವನೆ ಮಾಡಿದ್ದರು ಎಂದು ಮಂಜಿಂದರ್‌ ಸಿಂಗ್‌ ಆರೋಪಿಸಿದ್ದಾರೆ. 2019ರಲ್ಲಿ ಈ ಪಾರ್ಟಿ ನಡೆದಿತ್ತು ಎನ್ನಲಾಗಿದೆ.
I met Sh. Rakesh Asthana, Chief of@narcoticsbureauat BSF head quarter, Delhi regarding submission of complaint for investigation & action against film Producer@karanjohar& others for organizing drug party at his residence in MumbaiThat party video must be investigated into!pic.twitter.com/QCK2GalUQq
— Manjinder Singh Sirsa (@mssirsa)September 15, 2020

ವರುಣ್‌ ಧವನ್‌, ಅರ್ಜುನ್‌ ಕಪೂರ್‌, ದೀಪಿಕಾ ಪಡುಕೋಣೆ, ಮಲೈಕಾ ಅರೋರಾ, ಶಾಹಿದ್‌ ಕಪೂರ್‌, ವಿಕ್ಕಿ ಕೌಶಾಲ್‌, ಮುಂತಾದವರು ಭಾಗವಹಿಸಿದ್ದರು. ಆ ಪಾರ್ಟಿಯ ವಿಡಿಯೋಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಅದರಲ್ಲಿದ್ದ ಕಲಾವಿದರ ವರ್ತನೆಯನ್ನು ಗಮನಿಸಿರುವ ಸಿಂಗ್‌ ಅವರು ಇದರ ತನಿಖೆ ಆಗಬೇಕು ಎಂದು ಹೇಳಿದ್ದಾರೆ.
‘ಈ ವಿಡಿಯೋದಲ್ಲಿ ಕಾಣುತ್ತಿರುವ ಎಲ್ಲ ಮುಖಗಳನ್ನು ನೆನಪಿಟ್ಟುಕೊಳ್ಳಿ. ಡ್ರಗ್ಸ್‌ ಪಾರ್ಟಿಮಾಡಿದ್ದಾಗಿ ಜೈಲಿಗೆ ಹೋಗುವ ತಯಾರಿ ಮಾಡಿಕೊಳ್ಳಲಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.
ಕರೊನಾ ಬಂದಿದೆ, ಬದುಕಿರಲಾರೆ ಎಂದು ಪತ್ನಿಗೆ ಹೇಳಿ ಮನೆಬಿಟ್ಟವ ಇನ್ನೊಬ್ಬಳ ತೆಕ್ಕೆಯಲ್ಲಿ ಸಿಕ್ಕಿಬಿದ್ದ!

ಗೋಮಾಂಸದ ಕುರಿತು ಟ್ವೀಟ್​ ವಿವಾದ: ಕಂಗನಾ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​

ಪೇಟಿಎಂ​ ಬ್ಯಾನ್​ ಮಾಡಿದ ಗೂಗಲ್ ಪ್ಲೇಸ್ಟೋರ್​- ಕಾರಣ ಏನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + thirteen =
Remember me
