ನವದೆಹಲಿ: ಉತ್ತರಪ್ರದೇಶ, ಪಂಜಾಬ್​, ಉತ್ತರಾಖಂಡ, ಮಣಿಪುರ, ಗೋವಾ ವಿಧಾನಸಭೆ ಚುನಾವಣೆಯ ಮತಎಣಿಕೆ ಇನ್ನೇನು ಅಂತಿಮ ಹಂತ ತಲುಪಿದ್ದು ಸ್ಪಷ್ಟ ಚಿತ್ರಣ ಲಭ್ಯವಾಗತೊಡಗಿದೆ. ಕೆಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆತಿದ್ದರೆ, ಇನ್ನು ಕೆಲವೆಡೆ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.
ಗೆಲುವು ಸಾಧಿಸುತ್ತಾರೆ ಎಂದುಕೊಂಡಿದ್ದ ಹಲವಾರು ಧುರೀಣರ ಕೈಯನ್ನು ಮತದಾರ ಹಿಡಿಯದ ಕಾರಣ, ಹೀನಾಯ ಸೋಲು ಅನುಭವಿಸಿದ್ದಾರೆ. ಸಂಜೆ 5 ಗಂಟೆಗೆ ಬಂದಿರುವ ಫಲಿತಾಂಶದ ಅನ್ವಯ ಸೋಲು ಅನುಭವಿಸಿರುವವರ ಲಿಸ್ಟ್​ ಇಲ್ಲಿದೆ:
ಕ್ಯಾಪ್ಟನ್​ ಅಮರೀಂದರ್​ ಸಿಂಗ್​ಪಂಜಾಬ್​ನ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆಮ್ ಆದ್ಮಿ ಪಾರ್ಟಿಯ ಎದುರು ಸೋಲನ್ನು ಕಂಡಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಅಜಿತ್ ಪಾಲ್ ಸಿಂಗ್ ಕೊಹ್ಲಿ ಅವರ ವಿರುದ್ಧ ಅಮರೀಂದರ್​ ಸಿಂಗ್​ ಪರಾಭವಗೊಂಡಿದ್ದಾರೆ.ಈ ಹಿಂದೆ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್​ (ಪಿಎಲ್​ಸಿ) ಕಟ್ಟಿಕೊಂಡಿದ್ದರು. ಅವರು ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಮತದಾರ ಅವರ ಕೈ ಹಿಡಿಯಲಿಲ್ಲ. 19,873 ಮತಗಳಿಂದ ಅವರು ಪರಾಭವ ಹೊಂದಿದ್ದಾರೆ.ಅಮರೀಂದರ್ ಸಿಂಗ್ ಅವರನ್ನು ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪಟ್ಟದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಹೈಕಮಾಂಡ್​​ನಿಂದ ತಮಗೆ ಅವಮಾನವಾಗಿದೆ, ತನ್ನ ಎದುರಾಳಿಯಾದ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿ ಅವರು ರಾಜೀನಾಮೆ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅವರ ಪಕ್ಷ ಚುನಾವಣೆಯನ್ನು ಎದುರಿಸಿತ್ತು.
ಪುಷ್ಕರ್​ ಸಿಂಗ್​ ಧಾಮಿ
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಪರಾಭವಗೊಂಡಿದ್ದಾರೆ. ಉತ್ತರಾಖಂಡದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದರೂ ಸಿಎಂ ಆಗಿದ್ದ ಧಾಮಿ ಸೋಲನ್ನು ಅನುಭವಿಸಿದ್ದಾರೆ.
ನವಜೋತ್ ಸಿಂಗ್​ ಸಿಧುಪಂಜಾಬ್​ ಕಾಂಗ್ರೆಸ್​ನಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ನವಜೋತ್​ ಸಿಂಗ್​ ಸಿಧು ಆಪ್​ ಅಭ್ಯರ್ಥಿ ವಿರುದ್ಧ ಸಿಧು 6,750 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಚರಣ್​ಜಿತ್​ ಸಿಂಗ್​ ಚನ್ನಿದಲಿತ ಸಮುದಾಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೊಂದಿಗೆ ಕಣಕ್ಕಿಳಿದಿದ್ದ ಚರಣ್‌ಜಿತ್​ ಎರಡೂ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದಾರೆ.
ಉತ್ಪಲ್​ ಪರಿಕ್ಕರ್​:ಕೇಂದ್ರದ ಸಚಿವರಾಗಿದ್ದ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್​ ಪರಿಕ್ಕರ್ ಬಿಜೆಪಿಯಿಂದ ಮುನಿಸಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ತಮ್ಮ ತಂದೆಯ ಬಳಿಕ ತಾವೇ ಪಕ್ಷದ ಉತ್ತರಾಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಅವರಿಗೆ ಪಕ್ಷ ಟಿಕೆಟ್​ ನೀಡದಿದ್ದ ಹಿನ್ನೆಲೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಆದರೆ ಅವರು ಸೋತಿದ್ದಾರೆ.
ಹರೀಶ್​ ರಾವತ್​:ಕಾಂಗ್ರೆಸ್‌ ಹಿರಿಯ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್​ ರಾವತ್​ 14 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಸ್ವಾಮಿ ಪ್ರಸಾದ್​ ಮೌರ್ಯಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್​ ಮೌರ್ಯ ಚುನಾವಣೆಗೂ ಮುನ್ನ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದರು. ಅವರಿಗೂ ಭಾರಿ ಏಟು ಬಿದ್ದಿದೆ. ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.
ಮಾಳ್ವಿಕಾ ಸೂದ್ಕರೊನಾ ಸಮಯದಲ್ಲಿ ಆಪದ್ಬಾಂಧವ ಎಂದು ಗುರುತಿಸಿಕೊಂಡಿದ್ದ ​ಸೋನು ಸೂದ್ ತಾವು ರಾಜಕೀಯವಾಗಿ ಗುರುತಿಸಿಕೊಳ್ಳುವುದಿಲ್ಲ ಎಂದು ವಾಗ್ದಾನ ಮಾಡುತ್ತಲೇ ಸಹೋದರಿ ಮಾಳ್ವಿಕಾ ಸೂದ್ ಅವರನ್ನು ಕಣಕ್ಕಿಳಿಸಿ ರಾಜಕೀಯ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈಗ ಮಾಳ್ವಿಕಾ ಅವರಿಗೆ ಸೋಲುಂಟಾಗಿದೆ. ಕಾಂಗ್ರೆಸ್​ಗೆ ಸೇರ್ಪಡೆಯಾಗಿ ಇವರು ಪಂಜಾಬ್​ನ ಮೊಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಸುಖಬೀರ್ ಸಿಂಗ್ ಬಾದಲ್​:ಪಂಜಾಬ್​ನ ಪ್ರಭಾವಿ ನಾಯಕ, ಶಿರೋಮಣಿ ಅಕಾಲಿಕ ದಳ ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್​ ಅವರು ಚುನಾವಣೆಯಲ್ಲಿ ಆಪ್​ ವಿರುದ್ಧ ಸೋಲನುಭವಿಸಿದ್ದಾರೆ.
ಕೃಷಿ ಕಾಯ್ದೆ ಪ್ರತಿಭಟನೆಯಿಂದ ವಿಶ್ವದ ಗಮನ ಸೆಳೆದಿದ್ದ ಲಖೀಂಪುರ ಖೇರಿಯ ಎಂಟೂ ಕ್ಷೇತ್ರಗಳಲ್ಲಿ ಲೆಕ್ಕಾಚಾರ ಉಲ್ಟಾ ಪಲ್ಟಾ!

ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ

ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
