ಲಖನೌ:ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಎಲ್ಲಾ ಲೆಕ್ಕಾಚಾರಗಳನ್ನು, ವಿರೋಧ ಪಕ್ಷಗಳು ಇಷ್ಟು ವರ್ಷ ನಡೆಸಿಕೊಂಡು ಬಂದಿದ್ದ ತಂತ್ರ, ಕುತಂತ್ರಗಳನ್ನೆಲ್ಲಾ ಮೀರಿ ಮತದಾರ ಬಿಜೆಪಿಯ ಕೈಹಿಡಿದಿದ್ದಾನೆ. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅದೇನೆಂದರೆ, ಮಾರ್ಚ್​ 10ರಂದು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಾರ್ಚ್​ 11ರಂದು ಅಧಿಕಾರ ಸ್ವೀಕಾರ ಶುರುವಾಗಲಿದೆ. ಕೆಲ ದಿನಗಳ ಹಿಂದೆ ಮಾರ್ಚ್​ 11ರ ದಿನದ ಕುರಿತು ಯೋಗಿ ಆದಿತ್ಯನಾಥ ಅವರು ಎಚ್ಚರಿಕೆ ನೀಡಿರುವ ವಿಡಿಯೋ ಇದಾಗಿದೆ.
ಗೂಂಡಾಗಳಿಗೆ, ಭೂಮಾಫಿಯಾ, ಮರಳು ಮಾಫಿಯಾ ಸೇರಿದಂತೆ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಮಾರ್ಚ್​ 11 ಅಂತಿಮ ದಿನ. ನಿಮ್ಮೆಲ್ಲಾ ಆಟಗಳು ಅಂದಿನಿಂದ ನಡೆಯುವುದಿಲ್ಲ ಎಂದು ಯೋಗಿ ಆದಿತ್ಯನಾಥ ಅವರು ಖಡಕ್​ ಎಚ್ಚರಿಕೆಯನ್ನು ಈ ವಿಡಿಯೋ ಮೂಲಕ ನೀಡಿದ್ದಾರೆ.
ಗೂಂಡಾಗರ್ದಿ ಮಾಡುವವರೇ, ಭೂಮಾಫಿಯಾ, ಮರಳುಮಾಫಿಯಾ ಸೇರಿದಂತೆ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರೇ, ಬಡವರ ಭೂಮಿಯನ್ನು ಆಕ್ರಮಿಸಿಕೊಂಡು ತೊಂದರೆ ಕೊಡುವವರೇ… ಎಲ್ಲರೂ ಕಿವಿ ತೆರೆದು ಕೇಳಿಸಿಕೊಳ್ಳಿ. ಮಾರ್ಚ್​ 11ರಿಂದ ನಿಮ್ಮ ಕೌಂಟ್​ಡೌನ್​ ಶುರು. ಅಲ್ಲಿಂದ ನಿಮ್ಮ ಆಟ ನಡೆಯುವುದಿಲ್ಲ. ಸುಮ್ಮನೇ ಎಲ್ಲರೂ ಬಾಯಿ ಮುಚ್ಚಿಕೊಂಡು ಇದ್ದರೆ ಚೆನ್ನಾಗಿರುತ್ತೀರಾ, ಅದನ್ನು ಬಿಟ್ಟು ನಿಮ್ಮ ಕ್ರಿಮಿನಲ್​ ಚಟುವಟಿಕೆಯನ್ನು ಮುಂದುವರಿಸಿದರೆ ಅದೇ ಕೊನೆ. ಇದು ನಿಮಗೆ ನೀಡುತ್ತಿರುವ ಅಂತಿಮ ಎಚ್ಚರಿಕೆ ಎಂದು ಯೋಗಿ ಆದಿತ್ಯನಾಥ ಅವರು ಹೇಳಿದ್ದು, ಈ ವಿಡಿಯೋ ಜಾಲತಾಣದಲ್ಲಿ ಭಾರಿ ಶೇರ್​ ಆಗುತ್ತಿದೆ.
ಇಲ್ಲಿದೆ ಕೇಳಿ ವಿಡಿಯೋ…
ಗೂಂಡಾಗಳಿಗೆ, ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನೀಡುತ್ತಿರುವ ವಾರ್ನಿಂಗ್pic.twitter.com/jSJ2bemuSI
— Vijayavani (@VVani4U)March 10, 2022

ಏಳೇಳು ದಾಖಲೆಗಳ ಸರದಾರ ಯೋಗಿ ಆದಿತ್ಯನಾಥ: 37 ವರ್ಷಗಳಲ್ಲಿ ಅಧಿಕಾರ ಉಳಿಸಿಕೊಂಡ ಮೊದಲ ಸಿಎಂ

ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

ಕೃಷಿ ಕಾಯ್ದೆ ಪ್ರತಿಭಟನೆಯಿಂದ ವಿಶ್ವದ ಗಮನ ಸೆಳೆದಿದ್ದ ಲಖೀಂಪುರ ಖೇರಿಯ ಎಂಟೂ ಕ್ಷೇತ್ರಗಳಲ್ಲಿ ಲೆಕ್ಕಾಚಾರ ಉಲ್ಟಾ ಪಲ್ಟಾ!

ಅಂತಿಮ ಹಂತ ತಲುಪಿದ ಪಂಚರಾಜ್ಯ ಫಲಿತಾಂಶ: ಸೋತ ಧುರೀಣರಾರು? ಇಲ್ಲಿದೆ ಲಿಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − five =
Remember me
