ಉದಯಪುರ (ರಾಜಸ್ಥಾನ): ಮದುವೆಯಾಗುತ್ತಾನೆ ಎಂದು ನಂಬಿಸಿದ, ಅವನನ್ನು ನಾನು ನಂಬಿಬಿಟ್ಟೆ ಎಂದಿರುವ ಯುವತಿಯೊಬ್ಬರು ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ರಾಜಸ್ಥಾನದ ಗೋಗುಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರತಾಪ್‌ ಲಾಲ್‌ ಭೀಲ್ ವಿರುದ್ಧ ಈ ದೂರು ದಾಖಲಾಗಿದೆ. ಸುಖರ್​ ಪೊಲೀಸ್​ ಠಾಣೆಯಲ್ಲಿ 35 ವರ್ಷದ ಯುವತಿ ದಾಖಲು ಮಾಡಿರುವ ದೂರಿನ ಅನ್ವಯ ಶಾಸಕನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.
ಮಧ್ಯಪ್ರದೇಶದ ಯುವತಿಯಾಗಿರುವ ಸಂತ್ರಸ್ತೆ ‘ಶಾಸಕ ಭೀಲ್​ ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅದನ್ನು ನಾನು ನಂಬಿದೆ. ಹೀಗೆ ಹೇಳಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ’ ಎಂದು ದೂರು ನೀಡಿದ್ದಾರೆ.
‘ಈ ಹಿನ್ನೆಲೆಯಲ್ಲಿ ಗುರುವಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಿ, ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ’ ಎಂದು ಉದಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಪಚಾರ್ ಹೇಳಿದ್ದಾರೆ.
‘ದೂರು ನೀಡಿರುವ ಸಂತ್ರಸ್ತೆ ಹಾಗೂ ಶಾಸಕರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲವು ವರ್ಷಗಳಿಂದ ಇವರಿಬ್ಬರೂ ಸಂಪರ್ಕದಲ್ಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ದರಿಂದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪ್ರಾಪ್ತೆ ಸ್ವ ಇಚ್ಛೆಯಿಂದ ಮದುವೆಯಾದರೆ ಗಂಡನ ಜತೆ ಇರಬಹುದೆ? ಹೈಕೋರ್ಟ್​ ಏನು ಹೇಳಿದೆ ನೋಡಿ…

ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

ಒಂದೇ ಗಂಟೆಯಲ್ಲಿ ₹365 ಕೋಟಿ ದುಡಿಯುವ ಆಸೆಯೆ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಚಾಲೆಂಜ್​!

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 3 =
Remember me
