ನೋಯ್ಡಾ:ಪಂಚರಾಜ್ಯಗಳ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಎಲ್ಲಾ ಪಕ್ಷಗಳೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ತಂತ್ರ ನಡೆಸುತ್ತಿವೆ. ಅದರಲ್ಲಿಯೂ ಉತ್ತರ ಪ್ರದೇಶ ಚುನಾವಣೆಯ ಬಹು ಪ್ರತಿಷ್ಠಿತ ಎನಿಸಿಕೊಂಡಿದೆ. ಕರೊನಾ ಪ್ರಚಾರಕ್ಕೆ ತಡೆಯುಂಟು ಮಾಡುತ್ತಿದ್ದರೂ ಅಭ್ಯರ್ಥಿಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ಈ ನಡುವೆಯೇ ಉತ್ತರ ಪ್ರದೇಶದ ನೋಯ್ಡಾದಲ್ಲಿ ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮನೆಮನೆಗೆ ಪ್ರಚಾರ ಕಾರ್ಯದಲ್ಲಿ ತೊಡಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೋಯ್ಡಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಂಖೂರಿ ಪಾಠಕ್ ಪರ ಕಾಂಗ್ರೆಸ್ ಮುಖಂಡರು ಪ್ರಚಾರ ನಡೆಸುತ್ತಿದ್ದರು. ಕೋವಿಡ್‌ನಿಂದಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಲು ಹೇಳಲಾಗಿದೆ. ಆದರೆ ಇವುಗಳನ್ನು ಉಲ್ಲಂಘಿಸಿ ಭೂಪೇಶ್‌ ಪ್ರಚಾರ ಕಾರ್ಯ ಕೈಗೊಂಡಿದ್ದರಿಂದ ಅವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.
ಕರೊನಾ ನಿಯಂತ್ರಿಸಲು ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುವ ಆದೇಶಗಳ ಉಲ್ಲಂಘಿಸಿರುವ ಹಿನ್ನೆಲೆ ಸಹಾಯಕ ಡಿಸಿಪಿ ಗೆ ಜಿಲ್ಲಾ ಚುನಾವಣಾಧಿಕಾರಿ ಬರೆದ ಪತ್ರ ಆಧರಿಸಿ ದೂರು ದಾಖಲಾಗಿದೆ.
VIDEO: ಕರೊನಾ ನಿಜಕ್ಕೂ ತೊಲಗಿ ಹೋಗುತ್ತಾ? ಅಮೆರಿಕದ ಪ್ರಸಿದ್ಧ ವೈರಾಲಜಿಸ್ಟ್‌ ನೀಡಿದ್ದಾರೆ ನೆಮ್ಮದಿಯ ಸುದ್ದಿ…

‘ಮೇಡಂ ಬ್ಲೌಸ್‌ ಧರಿಸಿ ವಿಮಾನ ಹತ್ತಿ, ಇಲ್ಲದಿದ್ರೆ ಹೊರ ಹೋಗಿ’ ಎಂದ ಏರ್‌ಲೈನ್ಸ್‌: ಶಾಕ್‌ನಲ್ಲಿ ಮಾಜಿ ಭುವನ ಸುಂದರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eleven =
Remember me
