ನವದೆಹಲಿ:ರೈತರ ಪ್ರತಿಭಟನೆ ಎಂದುಕೊಂಡು ಅವರ ಹೆಸರಿನಲ್ಲಿ ಒಂದಿಷ್ಟು ಮಂದಿ ನಿನ್ನೆ ದೆಹಲಿಯಲ್ಲಿ ಹಿಂಸಾಚಾರ ನಡೆಸಿರುವ ಘಟನೆ ನಡೆದಿದೆ. ಪಂಜಾಬ್‌ನ ಪ್ರತಿ ಹಳ್ಳಿಯಿಂದಲೂ ಸಾವಿರಾರು ರೂಪಾಯಿ ಡೀಸೆಲ್‌ ಹಾಕಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಬಂದವರು ಉದ್ದೇಶಪೂರ್ವಕವಾಗಿ ಹಿಂಸೆಗೆ ಇಳಿದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಏಳು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಪೂರ್ವ ಜಿಲ್ಲೆ ಮತ್ತು ದ್ವಾರಕಾದಲ್ಲಿ ತಲಾ ಮೂರು ಮತ್ತು ಶಹದಾರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಜನರ ವಿರುದ್ಧ ಎಫ್‌ಐಆರ್ ದಾಖಲಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
#WATCH| Delhi: Protestors attacked Police at Red Fort, earlier today.#FarmersProtestpic.twitter.com/LRut8z5KSC
— ANI (@ANI)January 26, 2021

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು, ಅದಕ್ಕಾಗಿ ಕೆಲವೊಂದು ಷರತ್ತುಗಳನ್ನೂ ವಿಧಿಸಲಾಗಿತ್ತು. ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಂತೆ ಮಾಡಿದ್ದ ಇವರು, ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಕಂಡಕಂಡಲ್ಲಿ ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ.
ಬ್ಯಾರಿಕೇಡ್‌ಗಳನ್ನು ಮುರಿದ ಇವರು, ಭದ್ರತಾ ವಾಹನಗಳನ್ನು ಹೊಡೆದುರುಳಿಸಿದರು. ಅಲ್ಲದೆ ಕೆಂಪು ಕೋಟೆಯಲ್ಲಿ ಸಂಘದ ಧ್ವಜವನ್ನು ಹಾರಿಸಿದ್ದಾರೆ. ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಪ್ರತಿಭಟನಾಕಾರರು ಮೃತಪಟ್ಟಿದ್ದರು.
ದೆಹಲಿ ಪೊಲೀಸರ ಜೊತೆಗೆ ಹಲವು ಸುತ್ತಿನ ಮಾತುಕತೆಯ ಬಳಿಕ ಟ್ರ್ಯಾಕ್ಟರ್ ಪೆರೇಡ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ಆಹ್ವಾನ ನೀಡಿದ್ದವು. ಅಲ್ಲದೆ ಶಾಂತಿಯುತ ಪ್ರತಿಭಟನೆಗಾಗಿ ನಿರ್ದಿಷ್ಟ ಮಾರ್ಗ ಹಾಗೂ ಸಮಯ ನಿಗದಿಪಡಿಸಲಾಗಿತ್ತು. ಹಲವು ಬಾರಿ ಮನವಿ ಮಾಡಿದರೂ ರೈತರು ಅದನ್ನು ಲೆಕ್ಕಿಸದೆ ಬ್ಯಾರಿಕೇಡ್‌ಗಳನ್ನು ಮುರಿದು ಹಿಂಸಾಚಾರಕ್ಕೆ ತಿರುಗಿದರು ಎಂದು ಪೊಲೀಸರು ಹೇಳಿದ್ದಾರೆ.
ಕೆಂಪುಕೋಟೆಗೆ ನುಗ್ಗಿದ ರೈತರು ತಮ್ಮ ಸಂಘದ ಧ್ವಜವನ್ನು ಹಾರಿಸಿದರು. ಕೊನೆಗೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಲಂಚ ಆರೋಪ: ಆಪ್ತ ಕಾರ್ಯದರ್ಶಿಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್‌.ಅಶೋಕ್‌

ಪತ್ನಿಯ ಮೇಲಿನ ಸೇಡಿಗೆ 16 ಮಂದಿಯ ರೇಪ್‌- ಮರ್ಡರ್‌! ‘ಆಗಂತುಕ’ ಸಿನಿಮಾ ನೆನಪಿಸುವ ಘಟನೆ

ಒಂದೆಡೆ ಮಾಜಿ ಗಂಡ, ಇನ್ನೊಂದೆಡೆ ಪ್ರೇಮಿ, ಮತ್ತೊಂದೆಡೆ ಕುಟುಂಬದವರು… ಯಾರನ್ನು ಆರಿಸಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + nineteen =
Remember me
