ನವದೆಹಲಿ:ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆಲ್ಲಾ ಮಸಿ ಬಳಿಯಬಹುದು ಎಂಬ ಟ್ವೀಟ್​ ಮಾಡಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ಧಿಯಾಗಿರುವ ಗ್ರೇಟಾ ಥನ್​ಬರ್ಗ್ ಶೇರ್​ ಮಾಡಿರುವ ಟೂಲ್​ಕಿಟ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.
ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್‌ ಡಾಕ್ಯುಮೆಂಟ್‌ ಅನ್ನು ಟ್ವೀಟ್‌ ಮಾಡಿದ್ದಳು. ನಂತರ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ಡಿಲೀಟ್‌ ಮಾಡಿದ್ದಾಳೆ. ಆದರೆ ಪೋಸ್ಟ್​ನ​ ಸ್ಕ್ರೀನ್​ಷಾಟ್​ ದಾಖಲೆ ರೂಪದಲ್ಲಿ ಸಿಕ್ಕಿದೆ. ಇದರ ಆಧಾರದ ಮೇಲೆ ಈಕೆ ಪೋಸ್ಟ್​ ಮಾಡಿರುವ ಟೂಲ್​ಕಿಟ್​ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.
First Information Report (FIR) filed against environmental activist@GretaThunbergby@DelhiPolice: u/s 153 A of IPC: Promoting enmity between various groups….acts prejudicial to maintaining harmony. Other sections may be added as evidence emerges. Deleted Cheat sheet evidence?
— GAURAV C SAWANT (@gauravcsawant)February 4, 2021

ಯಾವ್ಯಾವ ರೀತಿಯಲ್ಲಿ, ಹೇಗ್ಹೇಗೆ ಪ್ರತಿಭಟನೆ ಮಾಡಬೇಕು ಎಂದು ಪ್ರಚೋದನೆ ನೀಡುವ ದಾಖಲೆಗಳನ್ನು ಗ್ರೇಟಾ ಟ್ವೀಟ್​ ಮಾಡಿದ್ದಳು. ಇದರ ಹಿಂದಿರುವ ಶಕ್ತಿ ಯಾವುದು ಎಂದು ಇನ್ನಷ್ಟೇ ವಿಷಯ ಬೆಳಕಿಗೆ ಬರಬೇಕಿದೆ. ಟ್ವೀಟ್​ ಮಾಡಿರುವುದು ಯಾರನ್ನು ಓಲೈಸಲು ಹಾಗೂ ನಂತರ ಹೆದರಿ ಟ್ವೀಟ್​ ಡಿಲೀಟ್​ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
I still#StandWithFarmersand support their peaceful protest.No amount of hate, threats or violations of human rights will ever change that.#FarmersProtest
— Greta Thunberg (@GretaThunberg)February 4, 2021

ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಬರುವ ನಿಟ್ಟಿನಲ್ಲಿ ಈಕೆ ಮಾಡಿರುವ ಟ್ವೀಟ್​ನಿಂದಾಗಿ, ಗುಂಪು ಗುಂಪುಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡಿ, ಸಾಮರಸ್ಯ ಕದಡಲು ಷಡ್ಯಂತ್ರ ರಚಿಸಿರುವ ಆರೋಪದ ಮೇಲೆ ಟೂಲ್​ಕಿಟ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
We stand in solidarity with the#FarmersProtestin India.https://t.co/tqvR0oHgo0
— Greta Thunberg (@GretaThunberg)February 2, 2021

ಇಷ್ಟಾದರೂ ತನ್ನ ತಪ್ಪು ಏನೂ ಇಲ್ಲ ಎಂದಿರುವ ಗ್ರೇಟಾ, ಈಗಲೂ ನಾನು ಭಾರತದ ರೈತರ ಪರವಾಗಿ ಇದ್ದೇನೆ. ಯಾರೇ ನನ್ನ ವಿರುದ್ಧ ಪಿತೂರಿ ಮಾಡಿದರೂ ನಾನು ಭಾರತದ ರೈತರ ಪರವಾಗಿ ಇರುವುದರಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾಳೆ!
ಏನಿದು ವಿವಾದ? ಇಲ್ಲಿದೆ ನೋಡಿ ಡಿಟೇಲ್ಸ್​:ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…
ಅಣ್ಣಾಮಲೈ ಜೀವಕ್ಕೆ ಆಪತ್ತು- ವೈ ಪ್ಲಸ್​ ಭದ್ರತೆ ಒದಗಿಸಿದ ಸರ್ಕಾರ

ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…

ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

ವೈದ್ಯ ಪದವೀಧರರಿಗೆ ತಿಂಗಳೊಳಗೆ ಉದ್ಯೋಗ: ಗುಡ್​ ನ್ಯೂಸ್​ ಕೊಟ್ಟ ಆರೋಗ್ಯ ಸಚಿವರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − two =
Remember me
