ಡೆಹ್ರಾಡೂನ್:ಇವರ ಹೆಸರು ದಿಲ್‌ರಾಜ್‌ ಕೌರ್‌. ದೇಶದ ಮೊದಲ ಪ್ಯಾರಶೂಟರ್‌ ಎಂಬ ಹೆಗ್ಗಳಿಕೆ ಇವರದ್ದು. ಒಂದೆರಡು ಬಾರಿಯಲ್ಲ, 28 ಬಾರಿ ಚಿನ್ನದ ಪದಕ ಗೆದ್ದವರು ಇವರು. ಆದರೆ ಇದೀಗ ಜೀವನ ನಿರ್ವಹಣೆ ಕಷ್ಟವಾಗಿ ಬೀದಿಗಿಳಿದಿದ್ದಾರೆ. ರಸ್ತೆ ಬದಿಯಲ್ಲಿ ಬಿಸ್ಕತ್, ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ!
ಡೆಹ್ರಾಡೂನ್‌ನ ದಿಲ್‌ರಾಜ್‌ 2005ರಲ್ಲಿ ಕ್ರೀಡಾ ಜೀವನ ಆರಂಭಿಸಿದರು. ಸತತ 15 ವರ್ಷ ಭಾರತವನ್ನು ಪ್ರತಿನಿಧಿಸಿ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿದ್ದಾರೆ. 28 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಆದರೆ ಈಗ ಬೀದಿ ವ್ಯಾಪಾರಿಯಾಗಿದ್ದಾರೆ.
‘ಈವರೆಗೆ 28 ಚಿನ್ನದ ಪದಕ, 8 ಬೆಳ್ಳಿ ಮತ್ತು 3 ಕಂಚಿನ ಪದಕ ಪಡೆದಿದ್ದೇನೆ. ಆದರೂ ನನಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ರಾಜ್ಯದ ಪ್ಯಾರಾಶೂಟಿಂಗ್ ಕ್ರೀಡಾ ಇಲಾಖೆಯೊಂದಿಗೆ ತಿಳಿಸಿದಾಗ ನನಗೆ ಯಾವುದೇ ನೆರವು ಸಿಕ್ಕಿಲ್ಲ. ನಾನು ನನ್ನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ನನಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಮನವಿ ಮಾಡಿಕೊಂಡಿದ್ದೆ ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ. ಆದ್ದರಿಂದ ಹೀಗೆ ಕಷ್ಟಪಡುವಂತಾಗಿದೆ. ಯಾರಿಗೂ ಬರಬಾರದು ಇಂಥ ಸ್ಥಿತಿ’ ಎಂದು ದಿಲ್‌ರಾಜ್‌ ನೋವು ತೋಡಿಕೊಂಡಿದ್ದಾರೆ.
ಗಾಳಿಪಟದ ದಾರ ಕುತ್ತಿಗೆಗೆ ಉರುಳು: ತಪ್ಪಿಸಿಕೊಳ್ಳಲು ಹೋದ ಬೈಕ್‌ ಸವಾರನ ಬೆರಳುಗಳು ಕಟ್‌!

ಪತ್ನಿ ಮಾತು ಕೇಳಿ ಮಕ್ಕಳಿಗೆ ಮೈತುಂಬಾ ಬರೆ! ಸುಟ್ಟುಹೋದ ಶರೀರ- ನೋಡಲಾಗುತ್ತಿಲ್ಲ ಕಂದಮ್ಮಗಳ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + thirteen =
Remember me
