ಹಿಂದೂ- ಮುಸ್ಲಿಮರುಸೇರಿ ಅನೇಕ ಹಬ್ಬಗಳನ್ನು ಒಟ್ಟಿಗೇ ಮಾಡುವ ಸಂಪ್ರದಾಯ ಹಲವು ಊರುಗಳಲ್ಲಿ ಕಾಣಸಿಗುತ್ತದೆ. ಹಿಂದೂಗಳು ಮುಸ್ಲಿಮರ ಹಬ್ಬವನ್ನು, ಮುಸ್ಲಿಮರು ಹಿಂದೂಗಳ ಹಬ್ಬವನ್ನು ಜತೆಜತೆಯಲ್ಲಿಯೇ ಸೇರಿ ಆಚರಿಸಿ ಭಾತೃತ್ವ ಮೆರೆಯುವುದು ತಲೆತಲಾಂತರಗಳಿಂದಲೂ ನಡೆದುಬಂದಿದೆ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬರು ಕ್ರಿಸ್​ಮಸ್​ ಸಂಭ್ರವವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದು ತಮ್ಮ ಜೀವನದ ಮೊದಲ ಕ್ರಿಸ್​ಮಸ್​ ಎಂದು ಬರೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾನದಲ್ಲಿ ಸಕತ್​ ವೈರಲ್​ ಆಗಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
Growing up, my Muslim family never celebrated Christmas. This year I am not going home, because pandemic, so my roommates are teaching me how to have my first proper Christmas.
I am approaching this with anthropological precision.
Here are a few observations.pic.twitter.com/1WARv5nax4
— Mohammad Hussain (@MohammadHussain)December 19, 2020

ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್‌ 20ರಂದು ಈ ಟ್ವೀಟ್ ಮಾಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ನನ್ನ ತವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕ್ರಿಸ್‌ಮಸ್‌ ಬಗ್ಗೆ ತನ್ನೆಲ್ಲಾ ಚಿಂತನೆಗಳನ್ನು ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಜತೆಗೆ ಕ್ರಿಸ್​ಮಸ್​ ಟ್ರೀ ಯನ್ನು ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.
ನನ್ನದು ಮುಸ್ಲಿಂ ಕುಟುಂಬ. ಇದುವರೆಗೆ ಒಮ್ಮೆಯೂ ಕ್ರಿಸ್‌ಮಸ್ ಆಚರಿಸಿಲ್ಲ. ಈ ವರ್ಷ ಕೋವಿಡ್​ನಿಂದಾಗಿ ಇಲ್ಲೇ ಇರಬೇಕಾಗಿ ಬಂದಿದೆ. ಆದ್ದರಿಂದ ನನ್ನ ಸ್ನೇಹಿತರಿಂದ ಕ್ರಿಸ್‌ಮಸ್ ಆಚರಿಸುವುದು ಹೇಗೆ ಎಂದು ಕಲಿಯುತ್ತಿದ್ದೇನೆ ಎಂದು ಮೊಹಮ್ಮದ್ ಹೇಳಿಕೊಂಡಿದ್ದಾರೆ.
ನವೆಂಬರ್‌ ಮಧ್ಯದಿಂದ ಆರಂಭಗೊಂಡು ಜನವರಿ ಆರಂಭದವರೆಗೂ ಸಾಗುವ ಕ್ರಿಸ್‌ಮಸ್ ವೈಭವದ ವಿವಿಧ ಮಜಲುಗಳ ಬಗ್ಗೆ ಮೊಹಮ್ಮದ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

ಲಸಿಕೆಯಲ್ಲಿ ಹಂದಿಮಾಂಸ: ಅಲ್ಲಿಯವರು ಓಕೆ ಎಂದರು, ಇಲ್ಲಿಯವರು ಇದು ‘ಹರಾಂ’ ಎಂದರು

ಭಾರತದ ವಿಮಾನವನ್ನೇ ಹೈಜಾಕ್​ ಮಾಡಿಸಿದ್ದ ಮೋಸ್ಟ್​ ವಾಂಟೆಡ್​ ಉಗ್ರನನ್ನು ಬಿಡುಗಡೆ ಮಾಡಿದ ಪಾಕ್​

ಇಂಜಿನಿಯರಿಂಗ್​ ಮುಗಿಸಿದ್ದೀರಾ? ಹೈಸ್ಪೀಡ್ ರೈಲು ಸಂಸ್ಥೆಯಲ್ಲಿದೆ ಭರಪೂರ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
