ಮಥುರಾ:ಈ ಚಿತ್ರದಲ್ಲಿ ಕಾಣುತ್ತಿರುವ ಭಯಾನಕ ಕೊಲೆಪಾತಕಿಯ ಹೆಸರು ಶಬನಂ. ಸೆಷನ್ಸ್‌ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೂ ಗಲ್ಲುಶಿಕ್ಷೆಯೇ ಈಕೆಗೆ ಗತಿಯಾಗಿದೆ. ಕೊನೆಯದಾಗಿ ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿರುವ ಕಾರಣ, ಇದೀಗ ನೇಣಿಗೆ ಕೊರಳು ನೀಡಲು ಸಿದ್ಧವಾಗಿದ್ದಾಳೆ ಈ ಕೊಲೆಗಾತಿ.
ಇವಳನ್ನು ನೇಣುಗಂಬಕ್ಕೆ ಏರಿಸಲು ಮಥುರಾ ಜೈಲು ಸಕಲ ಸಿದ್ಧತೆ ನಡೆಸಿದೆ. ಕುತೂಹಲದ ಸಂಗತಿ ಎಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಲ್ಲುಶಿಕ್ಷೆ ಅನುಭವಿಸುತ್ತಿರುವ ಮೊದಲ ಮಹಿಳೆ ಈಕೆ.
ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿದ್ದ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಅವರೇ ಶಬನಮ್​ಳನ್ನೂ ನೇಣಿಗೇರಿಸಲಿದ್ದಾರೆ. ಆಕೆಯನ್ನು ನೇಣಿಗೇರಿಸುವ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಆದರೆ ಶೀಘ್ರದಲ್ಲಿಯೇ ಡೆತ್‌ವಾರೆಂಟ್‌ ಜಾರಿಯಾಗಲಿರುವ ಕಾರಣದಿಂದ ಗಲ್ಲುಶಿಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈ ಮೂಲಕ ಈಕೆ ಪ್ರಥಮ ಕೈದಿ ಎನಿಸಲಿದ್ದಾಳೆ. ಈಕೆಯ ಜತೆ ಈಕೆಯ ಪ್ರೇಮಿ ಸಲೀಂ ಕೂಡ ಗಲ್ಲುಶಿಕ್ಷೆಗೆ ಒಳಗಾಗಲಿದ್ದಾನೆ.
ಅಷ್ಟಕ್ಕೂ ಯಾರೀ ಶಬನಂ?ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಬವಾಂಖೇಡಿ ಎಂಬ ಗ್ರಾಮದ ಶಬನಂ ಮಾಡಿರುವ ಕೃತ್ಯ ಎಂದರೆ, ಏಳು ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ! 2008ರ ಏಪ್ರಿಲ್‌ 14 ಮತ್ತು 15ರ ಮಧ್ಯರಾತ್ರಿ ನೆನಪಿಸಿಕೊಂಡರೆ ಗ್ರಾಮಸ್ಥರು ಇಂದಿಗೂ ಬೆಚ್ಚಿ ಬೀಳುತ್ತಾರೆ.ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು ಈಕೆ. ಅಷ್ಟಕ್ಕೂ ಇಂಥದ್ದೊಂದು ಕೃತ್ಯ ಎಸಗಲು ಕಾರಣ, ಈಕೆಯ ಲವ್‌ ಸ್ಟೋರಿ.
ಮೊದಲೇ ಸಲೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಈಕೆಯ ಮದುವೆ ಬೇರೆಯವರ ಜತೆ ಆಗಿತ್ತು ಆದರೆ ಮದುವೆಯಾದ ಮೇಲೂ ಸಲೀಂನನ್ನು ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕೊಲೆ ಮಾಡಿದ್ದಳು. ಇದಕ್ಕೆ ಕಾರಣ, ಆಕೆಯ ಕುಟುಂಬದವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ. ಕೊಲೆ ಮಾಡಿದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಶಬನಂ, ನಿರುದ್ಯೋಗಿ ಪ್ರೇಮಿ ಸಲೀಂ ಜತೆ ಸಂಚು ರೂಪಿಸಿ ಮನೆಯರಿಗೆ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿದ್ದಳು. ನಂತರ ಮನೆಗೆ ಬಂದ ಸಲೀಂ ಏಳು ಮಂದಿಯ ಕುತ್ತಿಗೆ ಸೀಳಿದ್ದ.
ಆದ್ದರಿಂದ ಈಕೆ ತಂದೆ ಮಾಸ್ಟರ್ ಶೌಕತ್, ತಾಯಿ ಹಶ್ಮಿ, ಸಹೋದರರಾದ ಅನೀಸ್ ಮತ್ತು ರಶೀದ್, ಅತ್ತಿಗೆ ಅಂಜುಮ್ ಮತ್ತು ಅವರ ಸಹೋದರಿ ರಬಿಯಾ ಹಾಗೂ ಸೋದರಳಿಯ ಅರ್ಶ್‌ನನ್ನು ಕೊಲೆ ಮಾಡಿದ್ದಳು. ಇದಕ್ಕೆ ಸಲೀಂ ಸಹಕರಿಸಿದ್ದ.
ಈ ಹಿನ್ನೆಲೆಯಲ್ಲಿ ಆಕೆಗೆ ಎಲ್ಲಾ ಕೋರ್ಟ್‌ಗಳೂ ಮರಣದಂಡನೆ ವಿಧಿಸಿದ್ದವು. ಸುಪ್ರೀಂಕೋರ್ಟ್‌ ಕೊನೆಗೆ ರಾಷ್ಟ್ರಪತಿ ಕ್ಷಮಾದಾನದ ವರೆಗೆ ಹೋದರೂ ಈಕೆಗೆ ಬಿಡುಗಡೆ ಸಿಗಲಿಲ್ಲ. ಮರಣದಂಡನೆಯೇ ಗತಿಯಾಯ್ತು. ಇದೀಗ ನೇಣುಗಂಬ ಸಿದ್ಧಗೊಂಡಿದ್ದು, ಈಕೆ ಮತ್ತು ಪ್ರೇಮಿಗಾಗಿ ಕಾದಿದೆ.
ಶಬನಂ, ಸಲೀಂಗೆ ಸಣ್ಣ ಮಗುವಿದೆ. ಇಬ್ಬರಿಗೂ ಗಲ್ಲುಶಿಕ್ಷೆಯಾದರೆ ಮಗು ಅನಾಥವಾಗುವುದು ಎಂದು ಪ್ರಕರಣದ ಅಮಿಕಸ್‌ ಕ್ಯೂರಿ ದುಷ್ಯಂತ್‌ ಪರಾಶರ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ಕೋರ್ಟ್‌ ಮಾನ್ಯ ಮಾಡಲಿಲ್ಲ.
ಮೊದಲು ಎಲ್ಲದ್ದಕ್ಕೂ ಓಕೆ ಅಂತಿದ್ದವಳು ಈಗೀಗ ಬೇಡ ಬೇಡ ಅಂತಿದ್ದಾಳೆ- ಮದುವೆಯಾದರೆ ಸುಖವಾಗಿರುವೆನೆ?

ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

ಅವರನ್ನು ಬಿಟ್ಟು ಬದುಕಿರಲಾರೆ- ಆದರೆ ಅವರು ಇಬ್ಬರು ಮಕ್ಕಳ ತಂದೆ; ಪ್ಲೀಸ್‌ ದಾರಿ ತೋರಿ…

‘ನೆನಪಿದೆಯೇ ಮೊದಲಾ ಡೇಟಿಂಗ್‌’ ಎಂದ ದಂಪತಿ ಕೊಟ್ಟ ಟಿಪ್ಸ್‌‌ ನೋಡಿ ಕಣ್‌ಕಣ್‌ಬಿಟ್ಟ ಹೋಟೆಲ್‌ ಸಿಬ್ಬಂದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 1 =
Remember me
