ರಾಯ್ಪುರ (ಛತ್ತೀಗಢ):ಛತ್ತೀಸಗಢದ ರಾಯ್ಪುರ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಜನಜಂಗುಳಿ. ತಾಮುಂದು… ನಾಮುಂದು ಎಂದು ಜನ ಮುಗಿಬಿದ್ದಿದ್ದರು. ಬನ್ನಿ… ಬನ್ನಿ… ಸಿಕ್ಕಷ್ಟು ಮೀನನ್ನು ಬಾಚ್ಕೊಳಿ ಎಂದು ಮತ್ಸ್ಯಪ್ರಿಯರು ಹರ್ಷೋದ್ಗಾರ ಮಾಡುತ್ತಿದ್ದರು.
ಇದಕ್ಕೆ ಕಾರಣ, ಮೀನುಗಳನ್ನ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಉರುಳಿ ಬಿದದ್ದು. ಲಾರಿ ಉರುಳಿದ ರಭಸಕ್ಕೆ ಅದರಲ್ಲಿದ್ದ ಮೀನುಗಳೆಲ್ಲ ರಸ್ತೆ ತುಂಬಾ ಬಿದ್ದಿತ್ತು. ನೀರಿನಿಂದ ಹೊರಬಂದು ಚಟಪಡಿಸುತ್ತಿದ್ದ ಈ ತಾಜಾ ಮೀನನ್ನು ಕಂಡು ಜನರು ದೌಡಾಯಿಸಿ ಸಿಕ್ಕಷ್ಟು ಬಾಚಿಕೊಳ್ಳತೊಡಗಿದರು.
रायपुर के मंदिर हसौद इलाके में हाइवे पर मछलियों से भरी पिकअप गाड़ी पलट गई, हादसे में कोई हताहत तो नहीं हुआ,जैसे- तैसे ड्राइवर ने खुद को बाहर निकाला। लेकिन, तब तक रास्ते पर बिखरी मछलियों को लेकर कुछ लोग भाग गए@ndtv@ndtvindiapic.twitter.com/mT6tOTFC7K
— Anurag Dwary (@Anurag_Dwary)January 28, 2021

ಒಂದು ಗಂಟೆಗೂ ಹೆಚ್ಚು ಕಾಲ ಜನರು ಇಲ್ಲಿ ಬರುತ್ತಿದ್ದ ಕಾರಣ, ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಇಂಥ ಸುದ್ದಿಗಳು ಹರಡಲು ತಡವಾಗುವುದೇ ಇಲ್ಲವಲ್ಲ… ಕ್ಷಣ ಮಾತ್ರದಲ್ಲಿ ಸುತ್ತಮುತ್ತಲಿನ ಜನರ ಕಿವಿಗೆ ಪುಕ್ಕಟೆ ತಾಜಾ ತಾಜಾ ಮೀನು ಸಿಗುತ್ತಿರುವ ಸುದ್ದಿ ತಿಳಿದದ್ದೇ ತಡ ಓಡೋಡಿ ಕೈಗೆ ಸಿಕ್ಕ ಬ್ಯಾಗ್​ಗಳನ್ನು, ಪಾತ್ರೆಗಳನ್ನು ಹಿಡಿದುಬಂದು ಮೀನು ತುಂಬಿಸಿಕೊಂಡು ಸಂತೃಪ್ತರಾಗಿ ಹೋದರು.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಬಂದ ಬಳಿಕ ಜನರು ಮೀನು ಬಾಚಿಕೊಳ್ಳುವ ಕೆಲಸ ನಿಲ್ಲಿಸಬೇಕಾಯ್ತು. ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲಕ್ಕೆತ್ತಲಾಗಿದ್ದು ಅಳಿದುಳಿದ ಮೀನುಗಳನ್ನು ವಾಪಸ್​ ಲಾರಿಗೆ ತುಂಬಿ ರಾಯ್ಪುರಕ್ಕೆ ಕಳುಹಿಸಲಾಯಿತು.
ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

ಕೇಸು ಇದ್ದದ್ದು ತಿಳಿಯದೇ ಜಮೀನು ಕೊಂಡೆವು- ಈಗ ಆಸ್ತಿಯಲ್ಲಿ ಯಾವ ಹಕ್ಕೂ ಇಲ್ಲವೆ?

VIDEO: ದೆಹಲಿ ಹಿಂಸಾಚಾರ: ನಟ ದೀಪ್​ ಸಿಧು ಎಸ್ಕೇಪ್​, ಎಫ್​ಐಆರ್​ ದಾಖಲು

ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್​ಎ ಪರೀಕ್ಷೆ ಮಾಡಿಸಬಹುದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
