ಟೆಕ್ಸಾಸ್‌ (ಅಮೆರಿಕ):ಮಳೆ ಬರುವಾಗ ಆಲಿಕಲ್ಲು ಬೀಳುವುದು ಸರ್ವೇ ಸಾಮಾನ್ಯ. ಕೆಲವೊಂದು ವೇಳೆ ಬಂಡೆಯಾಕಾರದ ಆಲಿಕಲ್ಲುಗಳೂ ಬಿದ್ದು ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿರುವುದು ಇದೆ. ಆದರೆ ಆಕಾಶದಿಂದ ಮೀನುಗಳು ಉದುರುತ್ತವೆ, ಮೀನಿನ ಮಳೆಯಾಗುತ್ತಿದೆ ಎಂದರೆ ನಂಬುವಿರಾ?
ಶೀರ್ಷಿಕೆಯಷ್ಟೇ ನೋಡಿ, ಇದು ಫೇಕ್‌ ನ್ಯೂಸ್‌ ಎಂದು ಕಮೆಂಟ್‌ ಮಾಡುವವರೇ ಹೆಚ್ಚು. ಆದರೆ ನಿಜವಾಗಿಯೂ ಮೀನುಗಳು ಆಕಾಶದಿಂದ ಉದುರಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಳೆ ಜೋರಾಗಿ ನದಿಗಳು ಉಕ್ಕಿ ಹರಿದು ಅಲ್ಲಿಂದ ಮೀನುಗಳು ರಸ್ತೆಗೆ ಬರುವುದು ಸಾಮಾನ್ಯ. ಆದರೆ ಈ ಘಟನೆ ಹಾಗಲ್ಲ, ನಿಜಕ್ಕೂ ಮೀನಿನ ಮಳೆಯಾಗಿದ್ದು ಇದರ ವಿಡಿಯೋ ಭಾರಿ ವೈರಲ್‌ ಆಗಿದೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಸಿಎನ್​ಬಿಸಿ ಈ ಕುರಿತು ವರದಿ ಮಾಡಿದೆ. ಟೆಕ್ಸಾಸ್‌ನಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆನೀರಿನ ಜತೆಗೆ ಮೀನುಗಳು ಬಿದ್ದಿವೆ. ರಸ್ತೆಯ ತುಂಬ ಮೀನುಗಳ ವಿಲವಿಲ ಒದ್ದಾಡುತ್ತಿರುವುದನ್ನು ಕಾಣಬಹುದಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. 4ರಿಂದ 5 ಇಂಚಿನ ಬಿಳಿ ಬಣ್ಣದ ಮೀನುಗಳು ದಾರಿಯ ಮಧ್ಯೆ ಅಲ್ಲಲ್ಲಿ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಹಾಗಂತ ಮೀನುಗಳ ಮಳೆ ಈ ಹಿಂದೆಯೂ ಬಿದ್ದಿದೆಯಂತೆ. 2017ರಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಪ್ರಾಥಮಿಕ ಶಾಲೆಯೊಂದರ ಮೇಲೆ ನೂರಾರು ಮೀನುಗಳು ಮಳೆಯಂತೆ ಬಿದ್ದ ಘಟನೆ ವರದಿಯಾಗಿತ್ತು. ಇದರ ಜತೆಗೆ ಕಪ್ಪೆಗಳ ಮಳೆಯೂ ಬಿದ್ದಿರುವುದಾಗಿ ಹೇಳಲಾಗಿದೆ.
ಭಾರಿ ಪ್ರವಾಹದ ವೇಳೆ ಪುಟ್ಟ ಜೀವಿಗಳು ಮುಳುಗಿ ಹೋಗುತ್ತವೆ. ನಂತರ ಬಲವಾದ ಗಾಳಿ ಬೀಸಿ ಮಳೆ ಬಂದಾಗ ಆಳದಲ್ಲಿರುವ ಜೀವಿಗಳು ಮೇಲೆ ಬಂದು ಮಳೆಯಂತೆ ಬೀಳುತ್ತವೆ ಎಂದಿದ್ದಾರೆ ನ್ಯಾಷನಲ್​ ಜಿಯೋಗ್ರಫಿಯ ತಜ್ಞರು.
ಇದರ ವಿಡಿಯೋ ಇಲ್ಲಿದೆ ನೋಡಿ:
Yep. It rained fish at my house too.pic.twitter.com/NRfT8veXT9— Camille Warren (@camillecwarren)December 30, 2021
Yep. It rained fish at my house too.pic.twitter.com/NRfT8veXT9
Sign in to your account
Please enter an answer in digits:one × 3 =
Remember me
