ವಾಷಿಂಗ್ಟನ್:ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಭಾರತದ ಸುಮಾರು ಒಂದೂವರೆ ಸಾವಿರ ಗಣ್ಯರ ಮಾಹಿತಿಗಳನ್ನು ಚೀನಾ ಸಂಗ್ರಹಿ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಇದೀಗ ಚೀನಾದ ಭಾರಿ ವಂಚನೆಯೊಂದು ಬೆಳಕಿಗೆ ಬಂದಿದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಂದ ಧಿಕ್ಕಾರಕ್ಕೆ ಒಳಗಾಗಿರುವ ಈ ಕಮ್ಯುನಿಸ್ಟ್​ ರಾಷ್ಟ್ರ, ಇದೀಗ ವಿಶ್ವಾದ್ಯಂತ ಸರ್ಕಾರಗಳ ಪ್ರಮುಖ ಖಾತೆಗಳಿಗೆ ಕನ್ನ ಹಾಕಿದೆ. ಚೀನಾದ ಹ್ಯಾಕರ್‌ಗಳು ಭಾರತ ಸರ್ಕಾರದ ಏಳು ನೆಟ್‍ವರ್ಕ್‍ ಸೇರಿದಂತೆ ವಿಶ್ವದ 100ಕ್ಕೂ ಹೆಚ್ಚು ಕಂಪೆನಿಗಳ ಡೇಟಾಗಳಿಗೆ ಕನ್ನ ಹಾಕಿರುವುದಾಗಿ ತಿಳಿದುಬಂದಿದೆ.
ಈ ಹ್ಯಾಕರ್‌ಗಳು ಸರ್ಕಾರ ಮತ್ತು ಪ್ರತಿಷ್ಠಿತ ಸಂಸ್ಥೆಗಳಿಗೆ ಸಂಬಂಧಪಟ್ಟ ಮಾಹಿತಿಗಳಿಗೆ ಕನ್ನ ಹಾಕಿ ತಮ್ಮ ಅಕ್ರಮ ವೆಬ್‍ಸೈಟ್ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸಿದ್ದಾರೆ ಎಂದು ಬಯಲಾಗಿದೆ.
ಇದಾಗಲೇ ಅಮೆರಿಕ ಸರ್ಕಾರ, ಕಂಪ್ಯೂಟರ್ ಹ್ಯಾಕಿಂಗ್​ಗೆ ಸಂಬಂಧಿಸಿದಂತೆ ಚೀನಾದ ಐವರು ಪ್ರಜೆಗಳು ಮತ್ತು ಈ ಹ್ಯಾಕರ್​ಗಳಿಗೆ ಸಹಾಯ ಮಾಡಿರುವ ಆರೋಪದ ಮೇಲೆ ಮಲೇಷ್ಯಾದ ಇಬ್ಬರು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ.
ಇದನ್ನೂ ಓದಿ:ವಿಲ್​ ಬರೆಯದೇ ಪಾಲಕರು ತೀರಿಕೊಂಡರೆ ಹೆಣ್ಣುಮಕ್ಕಳಿಗೆ ಆಸ್ತಿ ಸಿಗತ್ತಾ?
ಚೀನಾದ ಐವರು ಹ್ಯಾಕರ್‌ಗಳು ಭಾರತ ಸರ್ಕಾರದ ಏಳು ನೆಟ್‍ವರ್ಕ್‍ಗಳು ಮತ್ತು ವಿಶ್ವದ 100ಕ್ಕೂ ಹೆಚ್ಚು ದೊಡ್ಡ ಸಂಸ್ಥೆಗಳ ದತ್ತಾಂಶ ಮಾಹಿತಿಗೆ ಕನ್ನ ಹಾಕಿದ್ದಾರೆ. ಆಯಾ ದೇಶಗಳಲ್ಲಿನ ಮಹತ್ವದ ಸಾಫ್ಟ್​ವೇರ್​ ಮತ್ತು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ಗೆ ಸಂಬಂಧಿಸಿದ ವಿವಿಧ ವ್ಯವಹಾರಗಳನ್ನು ಹ್ಯಾಕರ್‌ಗಳು ಕದ್ದಿದ್ದಾರೆ ಎಂದು ಅಮೆರಿಕ ಉಪ ಅಟಾರ್ನಿ ಜನರಲ್ ಜೆಫ್ರಿ ರೋಸೆನ್ ಹೇಳಿದ್ದಾರೆ.
ಆದರೆ ಇವರ ಜಾಲ ಬಹುದೊಡ್ಡದಿದ್ದು, ಕೆಲವರು ಈಗಾಲೇ ತಪ್ಪಿಸಿಕೊಂಡಿದ್ದಾರೆ. ಅವರನ್ನು ಹಿಡಿಯಲು ತಂತ್ರ ರೂಪಿಸಲಾಗಿದೆ ಎಂದು ರೋಸೆನ್​ ತಿಳಿಸಿದ್ದಾರೆ(ಏಜೆನ್ಸೀಸ್​)
ನನ್ನನ್ನು ಉಪಮುಖ್ಯಮಂತ್ರಿ ಮಾಡಮ್ಮಾ… ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು!

ಹೆಬ್ಬಾವನ್ನೇ ಮಾಸ್ಕ್​ ಆಗಿ ಧರಿಸಿ ಬಸ್​ ಹತ್ತಿದ: ಹೌಹಾರಿಹೋದ ಪ್ರಯಾಣಿಕರು!

ಇನ್ಮುಂದೆ 90 ನಿಮಿಷ ಕಿಮ್​ನ ಗುಣಗಾನ ಕಡ್ಡಾಯ- ಸಹೋದರಿಯಿಂದ ವಿಚಿತ್ರ ಆದೇಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 4 =
Remember me
