ಗಾಜಿಯಾಬಾದ್ ​(ಉತ್ತರ ಪ್ರದೇಶ):ಒಬ್ಬನ ಪ್ರಾಣವನ್ನು ಕಾಪಾಡಲು ಹೋಗಿ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿದ್ಯುತ್‌ ಕಂಬ ಮುಟ್ಟಿದುದರ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾರಿ ಮಳೆ ಸುರಿಯುತ್ತಿದ್ದಾಗ ಅಂಗಡಿವೊಂದರ ಮುಂದಿನ ಶೆಡ್​ನ ಕಂಬವೊಂದರಲ್ಲಿ ವಿದ್ಯುತ್​ ಪ್ರವಹಿಸಿದೆ. ಇದೇ ಸಂದರ್ಭದಲ್ಲಿ ಅಂಗಡಿಗೆ ಹೋಗಿದ್ದ ಮಕ್ಕಳಿಬ್ಬರು ಮಳೆಯಿಂದ ರಕ್ಷಣೆ ಪಡೆಯಲು ವಿದ್ಯುತ್‌ ಕಂಬ ಹಿಡಿದುಕೊಂಡಿದ್ದಾರೆ. ಆದರೆ ಅದರಲ್ಲಿ ವಿದ್ಯುತ್‌ ಸಂಚರಿಸುತ್ತಿದ್ದ ಕಾರಣ, ಅಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ.

ಇದನ್ನು ಅರಿಯದ ಬಾಲಕನೊಬ್ಬ ಅವರ ರಕ್ಷಣೆಗೆ ಧಾವಿಸಿದ್ದಾನೆ. ಅವನಿಗೂ ವಿದ್ಯುತ್‌ ತಗುಲಿದ್ದು, ಮೃತಪಟ್ಟಿದ್ದಾನೆ. ಇಷ್ಟಾದರೂ ಅಲ್ಲಿ ವಿದ್ಯುತ್‌ ಪ್ರಹರಿಸುತ್ತಿದೆ ಎಂಬುದು ತಿಳಿಯದೇ ಅವರ ರಕ್ಷಣೆಗೆ ಧಾವಿಸಿದ ಓರ್ವ ಮಹಿಳೆ ಮತ್ತು ಮತ್ತಿಬ್ಬರು ಕೂಡ ಮೃತಪಟ್ಟಿರುವ ಘಟನೆ ಇದಾಗಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಾಗಿದ್ದು ಇಬ್ಬರು ಒಂದೇ ಕುಟುಂಬದವರು ಎನ್ನಲಾಗಿದೆ.
VIDEO: ವಿಜಯಪುರದಲ್ಲಿ ಮತ್ತೆ ಮತ್ತೆ ಕೇಳಿಬರ್ತಿದೆ ಭೂಮಿಯೊಳಗಿಂದ ವಿಚಿತ್ರ ಶಬ್ದ: ಬೆಚ್ಚಿಬಿದ್ದಿರೋ ಜನತೆ

ಪ್ಲೀಸ್‌ ಗಂಡನಿಂದ ರಕ್ಷಿಸಿ ಎಂದರೂ ಕಿವಿಗೊಡದ ಪೊಲೀಸರು: ಹಲವಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
