ಭೋಪಾಲ್‌:ಮಗಳ ಶಿಕ್ಷಣಕ್ಕೆಂದು ಹಣ ಪಡೆದು ಅದನ್ನು ತೀರಿಸಲು ಸಾಧ್ಯವಾಗದೇ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಸಂಜೀವ್‌ ಜೋಷಿ (45), ಪತ್ನಿ ಅರ್ಚನಾ (44), ಸಂಜೀವ್‌ ಅವರ ತಾಯಿ ನಂದಿನಿ (67), ಮಕ್ಕಳಾದ ಗ್ರೀಷ್ಮಾ (19), ಪೂರ್ವಿ (16) ಎಂದು ಗುರುತಿಸಲಾಗಿದೆ.
ಮೃತ ಸಂಜೀವ್‌ ಆಟೋ ಮೊಬೈಲ್‌ ಬಿಡಿ ಭಾಗಗಳ ಶಾಪ್‌ ಇಟ್ಟುಕೊಂಡಿದ್ದರು ಹಾಗೂ ಇವರ ಪತ್ನಿ ಅರ್ಚನಾ ದಿನಸಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅರ್ಚನಾ ಅವರು ಮಗಳ ಶಿಕ್ಷಣಕ್ಕಾಗಿ ಬಬ್ಲಿ ಎಂಬಾಕೆಯಿಂದ 3.70 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಪಾವತಿಸಲು ಸಾಧ್ಯವಾಗದ್ದರಿಂದ ಬಬ್ಲಿ, ಆಕೆಯ ಮಗಳಾದ ರಾಣಿ, ಪರಿಮಳಾ ಹಾಗೂ ಆಕೆಯ ಸಹೋದರಿ ಉರ್ಮಿಳಾ ಬಂದು ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಸಾಯುವ ಮುನ್ನ ಸಂಜೀವ್‌ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ದಿನವೂ ಸಾರ್ವಜನಿಕವಾಗಿ ಅವಮಾನ ಎದುರಿಸುವ ಬದಲು ಸಾಯುವುದೇ ಮೇಲೆಂದು ನಿರ್ಧರಿಸಿ ವಿಷ ಸೇವಿಸಿದುದಾಗಿ ಅವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲ ಮಹಿಳೆಯರನ್ನು ಬಂಧಿಸಲಾಗಿದೆ.
ಹಾಗೂ ಹೀಗೂ ಮಾಡಿ 80 ಸಾವಿರ ರೂಪಾಯಿಗಳನ್ನು ಕಳೆದ ವಾರ ಈ ದಂಪತಿ ಬಬ್ಲಿಗೆ ನೀಡಿದ್ದರು. ಆದರೆ ಇದು ತಾನು ಕೊಟ್ಟಿರುವ ಹಣದ ಬಡ್ಡಿಯಷ್ಟೇ. ಅಸಲು ಸಂಪೂರ್ಣವಾಗಿ ನೀಡಬೇಕು ಎನ್ನುತ್ತಿದ್ದ ಬಬ್ಲಿ ಹಾಗೂ ಇತರರು, ಸಂಜೀವ್‌ ಅವರ ಮನೆಗೆ ಪದೇ ಪದೇ ಬಂದು ಹಿಂಸೆ ಕೊಡುತ್ತಿದ್ದರು. ಇದರಿಂದ ಬೇಸತ್ತ ಇಡೀ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿ ವಿಷ ಸೇವಿಸಿರುವುದಾಗಿ ಪೊಲೀಸ್‌ ಅಧಿಕಾರಿ ಅಜಯ್‌ ನಾಯರ್‌ ಹೇಳಿದ್ದಾರೆ.
ಘಟನೆ ಸಂಬಂಧ ಪಿಪ್ಲಾನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಪ್ರೀತಿಗೆ ಪಾಲಕರ ವಿರೋಧ- ಕೈಕೈ ಹಿಡಿದು ಕಪಿಲಾ ನದಿಗೆ ಹಾರಿದ ಚಾಮರಾಜನಗರದ ಅಪ್ರಾಪ್ತರು!

VIDEO: ಆಸ್ತಿ ಪಡೆದು ಹೆತ್ತವರನ್ನು ಬೀದಿಗೆ ತಳ್ಳಿದ ಪುತ್ರರು! ರಕ್ಷಣೆ ಕೊಟ್ಟ ಪುತ್ರಿಯರಿಗೂ ಚಿತ್ರಹಿಂಸೆ ನೀಡಿದ ‘ವಂಶೋದ್ಧಾರಕರು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 3 =
Remember me
