ಹೈದರಾಬಾದ್​:ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್​ರೇಪ್​ ಮಾಡಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ವಿಐಪಿ ಮಕ್ಕಳಿಗೆ ಫೈವ್​ಸ್ಟಾರ್​ ಹೋಟೆಲ್​ನ ಬಿರಿಯಾನಿ ನೀಡಲಾಗುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಹೈದರಾಬಾದ್​ನ ಜೂಬಿಲಿ ಹಿಲ್ಸ್‌ ಗ್ಯಾಂಗ್​ರೇಪ್​ ಎಂದೇ ಕರೆಯಲ್ಪಡುವ ಈ ಪ್ರಕರಣದಲ್ಲಿ 17 ವರ್ಷದ ಬಾಲಕಿಯ ಮೇಲೆ ಆಲ್​ ಇಂಡಿಯಾ ಮಜ್​ಲಿಸ್​-ಎ- ಇತ್ತೇಹಾದುಲ್​ ಮುಸ್ಲೀಮೀನ್​ (AIMIM) ಪಕ್ಷದ ಮುಖಂಡನ ಅಪ್ರಾಪ್ತ ಪುತ್ರ, ಟಿಆರ್‌ಎಸ್, ಅದರ ಮಿತ್ರಪಕ್ಷ ಎಂಐಎಂ ಪ್ರಮುಖ ನಾಯಕರ ಮಕ್ಕಳನ್ನು ಅರೆಸ್ಟ್​ ಮಾಡಲಾಗಿದೆ.
ಕಳೆದ ಮೇ 28 ರಂದು ಈ ಘಟನೆ ನಡೆದಿತ್ತು. ಬಾಲಕಿಯು ತನ್ನ ಸ್ನೇಹಿತರ ಜತೆಗೆ ಜೂಬಿಲಿ ಹಿಲ್ಸ್‌ನ ಪಬ್‌ಗೆ ಪಾರ್ಟಿಗೆಂದು ಹೋಗಿದ್ದಳು. ಸಂಜೆ 5.30 ರ ಸುಮಾರಿಗೆ, ಅವಳನ್ನು ಕೆಲವು ವ್ಯಕ್ತಿಗಳು ಕಾರಿನಲ್ಲಿ ಪಬ್‌ನಿಂದ ಹೊರಗೆ ಕರೆದೊಯ್ದರು, ನಂತರ, ಅತ್ಯಾಚಾರ ಮಾಡಿದ್ದರು. ಇದು ಪೂರ್ವನಿಯೋಜಿತವಾಗಿತ್ತು ಎನ್ನುವುದು ಬಾಲಕಿಯ ತಂದೆಯ ಆರೋಪ. ಏಕೆಂದರೆ ಈ ಎಲ್ಲಾ ಆರೋಪಿಗಳು ಕಾಂಡೋಮ್​ ಖರೀದಿ ಮಾಡಿ ಅಲ್ಲಿಗೆ ತಂದಿದ್ದರು. ಅತ್ಯಾಚಾರಕ್ಕೂ ಮುನ್ನ ಅದನ್ನು ಬಳಸಿದ್ದರು ಎನ್ನಲಾಗಿದೆ. ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಘಟನೆ ದೇಶಾದ್ಯಂತ ಭಾರಿ ಸುದ್ದಿಯಾಗಿತ್ತು. ಜನರ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ ಹೆಚ್ಚಿನವರು ವಿಐಪಿ ಮಕ್ಕಳೇ ಇದ್ದಾರೆ. ಇವರಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ದಿಶಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ ಚಾರ್ಲಪಲ್ಲಿ ಜೈಲಿನಲ್ಲಿ ಮೊದಲ ದಿನವೇ ಮಟನ್ ಬಿರಿಯಾನಿ ನೀಡಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ ಎಂದು ಕೇಳಿಬಂದಿದೆ.
ಆರೋಪಿಗಳಿಗೆ ಬಿರಿಯಾನಿ ಕೊಂಡೊಯ್ಯುತ್ತಿರುವ ಫೋಟೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಸ್ಪಷ್ಟನೆ ನೀಡಿದ್ದು, ಅದು ಆರೋಪಿಗಳಿಗೆ ಅಲ್ಲ, ಬದಲಿಗೆ ಪೊಲೀಸ್​ ಸಿಬ್ಬಂದಿಗೆ ಎಂದಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಓರ್ವ ಪೊಲೀಸ್​ ಅಧಿಕಾರಿ ವಿಭಿನ್ನ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರೋಪಿಗಳಿಗೆ ಮಾಮೂಲಿ ಊಟ ಬೇಡ ಎಂಬ ಕಾರಣಕ್ಕೆ ಬಿರಿಯಾನಿ ತರಬೇಕಾಯಿತು, ಆರೋಪಿಗಳ ಆರೋಗ್ಯ ಕಾಪಾಡುವುದು ಪೊಲೀಸರ ಜವಾಬ್ದಾರಿ, ಬಿರಿಯಾನಿ ಹಾಕುವುದು ರಾಜಾತಿಥ್ಯ ಅಲ್ಲ ಎಂದಿದ್ದಾರೆ!
ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
