ಇಸ್ಲಾಮಾಬಾದ್‌:ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಾಕಿಸ್ತಾನದ ಬಹುತೇಕ ಪ್ರದೇಶಗಳು ಮುಳುಗಿ ಹೋಗಿವೆ. ಹಿಂದೆಂದಿಗಿಂತಲೂ ಭೀಕರ ಸ್ವರೂಪದ ಪ್ರವಾಹವನ್ನು ಈ ದೇಶ ಎದುರಿಸುತ್ತಿದೆ. ಇದಾಗಲೇ 1400 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದಾರೆ.
ಭೀಕರ ಪ್ರವಾಹವು 80 ಜಿಲ್ಲೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ನಡುವೆಯೇ ಪ್ರವಾಹವು ಕೋವು ಸೌಹಾರ್ದತೆಗೂ ಕಾರಣವಾಗಿದೆ. ಪ್ರವಾಹದಿಂದ ಬಹುತೇಕ ಮುಳುಗಿ ಹೋಗಿರುವ ಬಲೂಚಿಸ್ತಾನದಲ್ಲಿ, ಹಿಂದೂ ದೇವಾಲಯವೊಂದರಲ್ಲಿ ನಿರ್ಗತಿಕರಿಗೆ ಆಶ್ರಯ ನೀಡಲಾಗಿದೆ. 500ಕ್ಕೂ ಅಧಿಕ ಮಂದಿಗೆ ಇಲ್ಲಿ ಆಶ್ರಯ ನೀಡಲಾಗಿದ್ದು, ಊಟ- ವಸತಿ ಸೌಕರ್ಯ ಕಲ್ಪಿಸಲಾಗಿದೆ. ಅವರ ಜತೆ ಜಾನುವಾರುಗಳಿಗೂ ಇಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಕಚ್ಚಿ ಜಿಲ್ಲೆಯ ಜಲಾಲ್ ಖಾನ್ ಗ್ರಾಮದಲ್ಲಿರುವ ಬಾಬಾ ಮಧೋದಾಸ್ ಮಂದಿರವು ಎತ್ತರದ ಪ್ರದೇಶದಲ್ಲಿದ್ದು, ಪ್ರವಾಹಕ್ಕೆ ಸಿಲುಕದೇ ಸುರಕ್ಷಿತವಾಗಿ ಉಳಿದ ಹಿನ್ನೆಲೆಯಲ್ಲಿ ಮುಸ್ಲಿಂ ಸಮಯದಾಯದವರಿಗೂ ಇಲ್ಲಿ ಆಶ್ರಯ ಕಲ್ಪಿಸಲಾಗಿದ್ದು, ಜೀವ ಉಳಿಸಿಕೊಳ್ಳಲು ಹಿಂದೂ ದೇವಾಲಯದ ಮೊರೆ ಹೋಗಿದ್ದಾರೆ. ನಾರಿ, ಬೋಲನ್ ಮತ್ತು ಲೆಹ್ರಿ ನದಿಗಳ ಪ್ರವಾಹದಿಂದಾಗಿ ಈ ಪ್ರಾಂತ್ಯವು ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಆಶ್ರಯ ಒದಗಿಸಲು ಬಾಬಾ ಮಧುದಾಸ್ ಮಂದಿರದ ಬಾಗಿಲು ತೆರೆಯಲಾಗಿದೆ.
ಸ್ಥಳೀಯರು ಹೇಳುವ ಪ್ರಕಾರ, ಬಾಬಾ ಮಧೋದಾಸ್ ಅವರು ವಿಭಜನಾಪೂರ್ವ ಹಿಂದೂ ಸಂತರಾಗಿದ್ದು, ಈ ಪ್ರದೇಶದ ಮುಸ್ಲಿಮರು ಮತ್ತು ಹಿಂದೂಗಳು ಯಾವುದೇ ಜಾತಿ ಭೇದವಿಲ್ಲದೇ ಇವರನ್ನು ಆರಾಧಿಸುತ್ತಾರೆ. ಹೀಗಾಗಿ ದೇವಾಲಯ ಕೂಡ ಯಾವುದೇ ಭೇದವಿಲ್ಲದೇ ಎಲ್ಲರಿಗೂ ಆಶ್ರಯ ನೀಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)
ಪವಾಡ ಎಂದರೆ ಇದೇನಾ? ಮೂರೂವರೆ ಗಂಟೆ ಹೃದಯ ನಿಂತೇ ಹೋದರೂ ಬದುಕಿದ ಮಹಿಳೆ!
ಕಿಸ್​ ಕೊಟ್ಟು ಕೋಟಿ ಕೋಟಿ ರೂ. ಗಿಫ್ಟ್​ ಪಡೆದ ‘ರಕ್ಕಮ್ಮ’ ನಟಿಗೆ ಶುರುವಾಯ್ತು ಸಂಕಷ್ಟ- ವಿಚಾರಣೆ ಆರಂಭ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen + 13 =
Remember me
