ಮೀಜಿ (ಜಪಾನ್‌):ಮುಂದೊಂದು ದಿನ ಹೀಗೆಲ್ಲಾ ಆಗ್ಬೋದು ಅಂತ ಎಷ್ಟೋ ಬಾರಿ ಯಾರೂ ಅಂದುಕೊಂಡಿರೋದೇ ಇಲ್ಲ, ಅಂಥ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆ ಬರ್ತಿವೆ. ಕೇವಲ ಕನಸಿನಲ್ಲಿ ಮಾತ್ರ ಇಂಥದ್ದೆಲ್ಲಾ ಸಾಧ್ಯ ಎಂದುಕೊಂಡರೆ ನಿಜವಾಗಿಯೂ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದೀಗ ಅಂಥದ್ದೇ ಒಂದು ಅಸಾಧ್ಯ ಎನ್ನುವ ತಂತ್ರಜ್ಞಾನವೊಂದನ್ನು ರೂಪಿಸಲಾಗಿದೆ. ಅದೇನೆಂದರೆ ಟಿ.ವಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಆಹಾರಗಳನ್ನು ಅದರ ಸ್ಕ್ರೀನ್‌ ನೆಕ್ಕಿ ಟೇಸ್ಟ್‌ ಮಾಡಬಹುದಾಗಿದೆ!ಮೊಬೈಲ್‌ಗಳಲ್ಲಿ ತಿಂಡಿ ತಿನಿಸುಗಳನ್ನು ನೋಡಿದಾಗ, ಅವುಗಳನ್ನೆಲ್ಲಾ ಡೌನ್‌ಲೋಡ್ ಮಾಡಿಕೊಂಡು ತಿನ್ನುವಂತೆ ಆಗಬಾರದಾ ಎಂದು ಬಹುತೇಕ ಎಲ್ಲರೂ ಅಂದುಕೊಂಡಿರುವುದು ಉಂಟು. ಅಂಥ ತಂತ್ರಜ್ಞಾನ ಮುಂದೊಂದು ದಿನ ಬಂದರೂ ಅಚ್ಚರಿಯಿಲ್ಲ. ಆದರೆ ಅದರ ಆರಂಭಿಕ ಹಂತ ಎನ್ನುವಂತೆ ಟಿ.ವಿ.ಯಲ್ಲಿ ಇರುವ ಆಹಾರಗಳನ್ನು ಟೇಸ್ಟ್‌ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ.ಹೊಸಹೊಸ ತಂತ್ರಜ್ಞಾನ ಎಂದಾಕ್ಷಣ ನೆನಪಾಗುವುದು ಜಪಾನಿಗರೇ ಎನ್ನುವುದು ಹೊಸ ವಿಷಯವೇನಲ್ಲ. ಈಗಲೂ ಜಪಾನಿನ ತಂತ್ರಜ್ಞರು ಇಂಥದ್ದೊಂದು ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.ಜಪಾನ್‌ನ ಮೀಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹೋಮಿ ಮಿಯಾಶೀಥಾ ಎನ್ನುವವರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಟಿವಿ ಪರದೆಯ ಮೇಲೆ ಬರುವ ಹಲವು ವಿಧವಾದ ಆಹಾರದ ರುಚಿಗಳನ್ನು ಅದರ ಪರದೆಯನ್ನು ನೆಕ್ಕುವ ಮೂಲಕ ಟೇಸ್ಟ್‌ ಮಾಡಬಹುದು ಎನ್ನುತ್ತಾರೆ ಇವರು.ಈ ತಂತ್ರಜ್ಞಾನಕ್ಕೆ ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಹೆಸರು ಇಡಲಾಗಿದೆ. ಒಂದು ನಿರ್ದಿಷ್ಟ ಆಹಾರದ ರುಚಿ ನೀಡುವುದಕ್ಕಾಗಿ 10 ಫ್ಲೇವರ್ ಡಬ್ಬಿಗಳನ್ನು ಬಳಕೆ ಮಾಡಲಾಗುತ್ತದೆ. ಇದು ನಂತರದಲ್ಲಿ ಟಿ.ವಿ ಪರದೆಯ ಮೇಲೆ ಮೂಡಲಿದ್ದು ಬಳಕೆದಾರರು ರುಚಿ ನೋಡಬಹುದಾಗಿದೆ. ಮನೆಯಲ್ಲೇ ಕುಳಿತು ರೆಸ್ಟೋರೆಂಟ್‌ಗಳಲ್ಲಿ ತಿನ್ನುವ ಅನುಭವವನ್ನು ನೀಡುವುದಕ್ಕಾಗಿ ಇಂಥದ್ದೊಂದು ಟಿವಿಯನ್ನು ತಯಾರಿಸಲಾಗಿದೆ. ಇದಕ್ಕಾಗಿ 30 ವಿದ್ಯಾರ್ಥಿಗಳ ತಂಡ ಒಂದು ವರ್ಷದವರೆಗೆ ಅವಿರಿತವಾಗಿ ದುಡಿದಿದೆ ಎಂದಿದ್ದಾರೆ.ಅಂದಹಾಗೆ ಈ ಟಿ.ವಿಯ ಬೆಲೆ 875 ಡಾಲರ್‌. ರೂಪಾಯಿಗಳಲ್ಲಿ ಹೇಳುವುದಾದರೆ ಸುಮಾರು 65,700 ರೂಪಾಯಿಗಳು. ಹೀಗೆ ಅಭಿವೃದ್ಧಿ ಪಡಿಸಿರುವ ಟಿ.ವಿಯಲ್ಲಿ ಟೇಸ್ಟಿಂಗ್ ಗೇಮ್‌ಗಳು, ಕ್ವಿಜ್ ಸೇರಿದಂತೆ ಹಲವಾರು ಆ್ಯಪ್‌ಗಳನ್ನು ನೀಡಲಾಗಿದೆ.
ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು
ಅದಿತಿಯನ್ನು ಗುಟ್ಟಾಗಿ ಮದುವೆಯಾದ ‘ದೇವೋಂಕೆ ದೇವ್ ಮಹಾದೇವ್’-​ ವಿವಾಹದ ಫೋಟೋ ವೈರಲ್‌
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 9 =
Remember me
