ಕಾಬುಲ್‌:ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಜೀವಭಯಕ್ಕೆ ಹೆದರಿ ವಿಮಾನದಲ್ಲಿ ಹೋಗಲು ಪ್ರಾಣವನ್ನೇ ಪಣಕ್ಕಿಟ್ಟ ವಿಡಿಯೋ ಇದಾಗಲೇ ವೈರಲ್‌ ಆಗಿತ್ತು. ಅದೇ ಬೆನ್ನಲ್ಲಿ ವಿಮಾನದ ಮೇಲ್ಬಾಗದಲ್ಲಿ ಏರಿ, ವಿಮಾನ ಮೇಲೆ ಏರಿದಾಗ ಬಿದ್ದು ನಾಲ್ವರು ಮೃತಪಟ್ಟಿರುವ ಭಯಾನಕ ವಿಡಿಯೋ ಕೂಡ ವೈರಲ್‌ ಆಗಿತ್ತು.
ದುರದೃಷ್ಟ ಎಂದರೆ, ಈ ರೀತಿ ಮೃತಪಟ್ಟಿರುವವರ ಪೈಕಿ ಒಬ್ಬ ಅಂತಾರಾಷ್ಟ್ರೀಯ ಫುಟ್‌ಬಾಲ್‌ ತಾರೆ ಝಾಕಿ ಅನ್ವರಿ. ಅಮೆರಿಕ ಸೇನಾ ವಿಮಾನದಿಂದ ಬಿದ್ದು ಮೃತನಾದವನಲ್ಲಿ ಇವನೂ ಒಬ್ಬನು ಎಂದು ತಿಳಿದುಬಂದಿದೆ. 19 ವರ್ಷದ ಝಾಕಿ ಅನ್ವರಿ ತಾಲಿಬಾನಿಗಳ ಭೀತಿಯಿಂದ ವಿಮಾನದ ಲ್ಯಾಂಡಿಂಗ್ ಗೇರ್ ಹತ್ತಿ ಜೀವ ಕಳೆದುಕೊಂಡಿರುವುದಾಗಿ ಆಫ್ಘನ್ ರಾಷ್ಟ್ರೀಯ ಫುಟ್​ಬಾಲ್ ತಂಡ ದೃಢ ಪಡಿಸಿದೆ. ಈ ಕುರಿತ ಸುದ್ದಿಯನ್ನು ತನ್ನ ಫೇಸ್​ಬುಕ್​​ ಪೇಜ್​ನಲ್ಲಿ ಹಂಚಿಕೊಂಡಿದೆ. ಆಫ್ಘಾನಿಸ್ತಾನ ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ನಿರ್ದೇಶನಾಲಯ ಝಾಕಿ ಅನ್ವರಿ ಸಾವನ್ನು ದೃಢಪಡಿಸಿದೆ.
ಉದಯೋನ್ಮುಖ ಆಟಗಾರನಾಗಿದ್ದ ಝಾಕಿ ಅನ್ವರಿ ಈ ಚಿಕ್ಕ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದನು ಎಂದು ಅದು ಹೇಳಿದೆ. ಆತನ ಸಾವಿಗೆ ​ಸಾರ್ವಜನಿಕರು, ಸ್ನೇಹಿತರು ಮತ್ತು ಫುಟ್​ಬಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಝಾಕಿ ಅಫ್ಘಾನಿಸ್ತಾನದ ರಾಷ್ಟ್ರೀಯ ಯುವ ತಂಡಕ್ಕೆ ಆಯ್ಕೆಯಾಗಿದ್ದು, ಇಲ್ಲಿಯವರೆಗೆ ಅನೇಕ ಪಂದ್ಯಗಳನ್ನು ಆಡಿದ್ದಾನೆ.
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತುವ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮತ್ತು ವಿಮಾನ ಹತ್ತಿದ ನಂತರ ನಡೆದ ಅವಘಡಗಳಲ್ಲಿ ಸುಮಾರು 10 ಮಂದಿ ಮೃತಪಟ್ಟಿದ್ದಾರೆ.
Our deepest condolences go out to the family, friends and teammates of young Afghan national team footballer Zaki Anwari, who reportedly died in a fall from a U.S. plane at Kabul airport on Monday.pic.twitter.com/2DgulUw1HD
— FIFPRO (@FIFPRO)August 19, 2021

VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

ಉದ್ಯೋಗಸ್ಥೆ ಎನ್ನುವ ಕಾರಣಕ್ಕೆ ಕಣ್ಣುಕಿತ್ತರು, ಮಹಿಳೆಯರನ್ನು ಕೊಂದು ದೇಹ ನಾಯಿಗೆ ಎಸೆಯುತ್ತಾರೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:7 − 4 =
Remember me
