ಮುಂಬೈ :ಮದುವೆಯಾದ ಮೇಲೆ ಗಂಡ ಸೆಕ್ಸ್​ನಲ್ಲಿ ತೊಡಗಿಸಿಕೊಂಡರೆ ಅದು ಬಲವಂತದ ಸಂಭೋಗ ಎನ್ನಲಾಗದು ಎನ್ನುವಂಥ ತೀರ್ಪೊಂದನ್ನು ಮುಂಬೈ ಸೆಷನ್ಸ್​ ಕೋರ್ಟ್​ ನೀಡಿದೆ.
ಪದೇ ಪದೇ ಪತಿ ತನ್ನ ಮೇಲೆ ಪತಿ ಬಲವಂತದಿಂದ ಸಂಭೋಗ ಮಾಡುತ್ತಿದ್ದಾರೆ. ಇದರಿಂದಾಗಿ ಸೊಂಟದಿಂದ ಕೆಳಭಾಗ ಪಾರ್ಶ್ವಪೀಡಿತವಾಗಿದೆ ಎನ್ನುವುದು ಮಹಿಳೆಯ ವಾದವಾಗಿತ್ತು. ಗಂಡ ಈ ರೀತಿ ಮೇಲಿಂದ ಮೇಲೆ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪತಿ ವಿರುದ್ಧ ಆಕೆ ಕೇಸ್​ ದಾಖಲು ಮಾಡಿದ್ದಳು. ಪತಿಯ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ತನ್ನನ್ನು ಬಂಧಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಪತಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ ಮೊರೆ ಹೋಗಿದ್ದ. ಪತಿಯಾಗಿರುವ ಕಾರಣ, ಇದನ್ನು ಬಲವಂತದ ಲೈಂಗಿಕ ಕ್ರಿಯೆ ಎನ್ನಲಾಗದು ನ್ಯಾಯಾಧೀಶೆ ಸಂಜಾಶ್ರೀ ಜೆ ಘರಾತ್ ಹೇಳಿದ್ದಾರೆ. ‘ಪತಿ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗ ಮಾಡಿದ್ದಾರೆ ಎಂದು ಆರೋಪಿಸಿರುವುದು ಸರಿಯಲ್ಲ. ಪತಿಯಾಗಿರುವುದರಿಂದ ಅವನು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡಿದ್ದಾನೆ ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಾಧೀಶೆ ಅಭಿಪ್ರಾಯ ಪಟ್ಟಿದ್ದಾರೆ.
2020ರ ನವೆಂಬರ್ ತಿಂಗಳಿನಲ್ಲಿ ಇವರ ಮದುವೆಯಾಗಿದೆ. ಮದುವೆಯ ನಂತರ ತನ್ನ ಪತಿ ಮತ್ತು ಅವನ ಕುಟುಂಬ ಕಿರುಕುಳ ಕೊಡಲು ಶುರು ಮಾಡಿದ್ದು, ಹಣಕ್ಕಾಗಿ ಒತ್ತಾಯಿಸಿದ್ದರು. ಸಾಲದು ಎಂಬುದಕ್ಕೆ ಪ್ರತಿಬಾರಿಯೂ ಗಂಡ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಎಂದು ಮಹಿಳೆ ಆರೋಪಿಸಿದ್ದರು. ಕಳೆದ ಜನವರಿಯಲ್ಲಿ ಮುಂಬೈ ಸಮೀಪದ ಮಹಾಬಲೇಶ್ವರ ಎಂಬ ಗಿರಿಧಾಮಕ್ಕೆ ಹೋಗಿದ್ದ ವೇಳೆಯೂ ಬಲವಂತದಿಂದ ಸೆಕ್ಸ್​ ಮಾಡಿದ್ದಾರೆ. ನಂತರ ತುಂಬಾ ಸುಸ್ತಾಯಿತು. ವೈದ್ಯರಲ್ಲಿ ಪರೀಕ್ಷಿಸಿದಾಗ ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿರುವುದು ತಿಳಿದಿದೆ ಎಂದು ಮಹಿಳೆ ಹೇಳಿದ್ದರು.
ಆದರೆ ಇದನ್ನು ಬಲವಂತದ ಲೈಂಗಿಕ ಕ್ರಿಯೆ ಎನ್ನಲಾಗದು ಎಂದ ನ್ಯಾಯಾಧೀಶೆ ಪತಿಗೆ ಜಾಮೀನು ನೀಡಿದ್ದಾರೆ.
ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

ಗೆಳತಿಗೆ ಡಿಫರೆಂಡ್​ ಆಗಿ ಇಂಪ್ರೆಸ್​ ಮಾಡಲು ತಾಯಿಯ ಚಿತಾಭಸ್ಮ ತಂದ ಪ್ರೇಮಿ- ಮುಂದೇನಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
