ನವದೆಹಲಿ:ಬಿಜೆಪಿ ನಾಯಕ, ಮಾಜಿ ಸಂಸದ ಜೀತೇಂದ್ರ ರೆಡ್ಡಿ ಅವರ ಮನೆಯಿಂದ ನಾಲ್ವರು ಸಿಬ್ಬಂದಿಯನ್ನು ಅಪಹರಣ ಮಾಡಲಾಗಿದ್ದು, ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ತೆಲಂಗಾಣ-ಆಂಧ್ರಪ್ರದೇಶದ ಮಾಜಿ ಸಂಸದರೂ ಆದ ಜೀತೇಂದ್ರ ರೆಡ್ಡಿ ಅವರ ದೆಹಲಿಯಲ್ಲಿ ಇರುವ ನಿವಾಸದಿಂದ ಈ ಸಿಬ್ಬಂದಿಯನ್ನು ಅಪಹರಿಸಲಾಗಿದೆ. ಕಾರು ಚಾಲಕ ಸೇರಿ ನಾಲ್ವರನ್ನು ಅಪಹರಣ ಮಾಡಲಾಗಿದೆ.
ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಕಾರು ಚಾಲಕ ತಾಪಾ ಮತ್ತು ಸಿಬ್ಬಂದಿ ಮುನ್ನೂರು ರವಿ ಸೇರಿ ನಾಲ್ವರ ತಲೆಗೆ ಬಂದೂಕು ಇಟ್ಟು ಅಪಹರಿಸಿದ್ದು ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳೆದ ಸೋಮವಾರದಂದು (ಫೆ.28) ಈ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಖುದ್ದು ಜೀತೇಂದ್ರ ರೆಡ್ಡಿ ತಮ್ಮ ಟ್ವೀಟ್​ ಮಾಡಿದ್ದಾರೆ. ಅವರು ಸಿಸಿಟಿವಿಯ ದೃಶ್ಯಗಳ ಸಮೇತ ಶೇರ್​ ಮಾಡಿದ್ದಾರೆ. ನನ್ನ ಖಾಸಗಿ ಕಾರಿನ ಚಾಲಕ ತಾಪಾ ಮತ್ತು ಸಾಮಾಜಿಕ ಕಾರ್ಯಕರ್ತ ಮುನ್ನೂರು ರವಿ ಸೇರಿದಂತೆ ನಾಲ್ವರನ್ನು ಅಪಹರಣ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ನ್ಯಾಯ ಕೊಡಿಸುವ ವಿಶ್ವಾಸ ಹೊಂದಿದ್ದೇನೆ ಎಂದು ಅವರು ಟ್ವಿಟರ್​ನಲ್ಲಿ ಹೇಳಿದ್ದಾರೆ.
Shocking incident at my residence in Delhi. My personal driver Shri Thapa and social activist Shri Ravi Munnur were kidnapped last night. I have filed a complaint with the concerned police department. Hoping for quick action and speedy justice.@DelhiPolicepic.twitter.com/HdWDHhR1Qb
— AP Jithender Reddy (@apjithender)March 1, 2022

ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

ಗ್ರಾಪಂ ಸದಸ್ಯನ ಜತೆ ಕಾಮದಾಟ: ಪ್ರಶ್ನಿಸಿದ್ದ ಮಗನನ್ನೇ ಕೊಲೆ ಮಾಡಿದಳಾ ಪಾಪಿ ತಾಯಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
