ಹೈದರಾಬಾದ್​:ಒಬ್ಬನನ್ನು ರಕ್ಷಿಸಲು ಹೋಗಿ ಇಬ್ಬರು ಕಂದಮ್ಮಗಳು ಸೇರಿದಂತೆ ನಾಲ್ವರು ವಿದ್ಯುತ್​ ಶಾಕ್​ಗೆ ಒಳಗಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ವಿದ್ಯುತ್​ ತಗುಲಿ ಮೃತಪಟ್ಟರೆ, ಅಜ್ಜಿಯ ಮನೆಯಲ್ಲಿದ್ದ ಐದು ವರ್ಷದ ಮಗು ಮಾತ್ರ ಬದುಕುಳಿದಿದ್ದು, ಇದೀಗ ಅನಾಥವಾಗಿದೆ.
ಬೀಡಿ ವರ್ಕರ್ಸ್​ ಕಾಲೋನಿಯ ನಿವಾಸಿಯಾಗಿರುವ ಆಟೋ ಚಾಲಕ ಅಹಮ್ಮದ್ ಅವರ ಕುಟುಂಬದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಅಹಮ್ಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮತ್ತು ಅದ್ನಾನ್ (3) ಮೃತಪಟ್ಟಿದ್ದಾರೆ. ಅಜ್ಜಿ ಮನೆಗೆ ಹೋಗಿದ್ದ ಫೈಜಾನ್ (5) ಬದುಕುಳಿದಿದ್ದಾನೆ.
ಆಗಿದ್ದೇನು?ಕಳೆದ ಕೆಲವು ದಿನಗಳಿಂದ ಕಾಮರೆಡ್ಡಿ ಜಿಲ್ಲೆಯಲ್ಲಿ ವರುಣ ಆರ್ಭಟ ಜೋರಾಗಿದೆ. ಅಹಮ್ಮದ್​ ಕುಟುಂಬವು ಹುಲ್ಲಿನ ಮನೆಯಲ್ಲಿ ವಾಸವಾಗಿತ್ತು. ಮನೆಯ ಗೋಡೆಗೆ ಕಬ್ಬಿಣದ ತಂತಿ ಕಟ್ಟಲಾಗಿತ್ತು. ಇದರ ಮೇಲೆ ಅವರು ಬಟ್ಟೆ ಒಣಸುತ್ತಿದ್ದರು. ಆದರೆ ಮಳೆಯ ಕಾರಣದಿಂದಾಗಿ ಗೋಡೆ ಒದ್ದೆಯಾಗಿದ್ದು, ಕಬ್ಬಿಣದ ತಂತಿಗೆ ವಿದ್ಯುತ್​ ಪ್ರಹರಿಸುತ್ತಿತ್ತು.
ಇದನ್ನು ತಿಳಿಯದ ಪರ್ವೀನ್​ ಅವರು ತಂತಿಯ ಮೇಲೆಯೇ ಬಟ್ಟೆ ಒಣಗಿಸಲು ಹೋಗಿದ್ದಾರೆ. ಆಗ ಅವರಿಗೆ ವಿದ್ಯುತ್​ ತಗುಲಿದೆ. ಅವರು ಜೋರಾಗಿ ಕಿರುಚಿಕೊಂಡಾಗ ಪತ್ನಿಯನ್ನು ರಕ್ಷಿಸಲು ಅಹಮ್ಮದ್​ ಮುಂದಾಗಿದ್ದಾರೆ. ಪತ್ನಿಯನ್ನು ಹಿಡಿದುಕೊಳ್ಳುತ್ತಿದ್ದಂತೆಯೇ ಅವರಿಗೂ ವಿದ್ಯುತ್​ ತಗುಲಿಬಿಟ್ಟಿದೆ. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಮನೆಯಲ್ಲಿಯೇ ಇದ್ದರು. ಅಪ್ಪ-ಅಮ್ಮನಿಗೆ ಏನೋ ಆಯಿತೆಂದು ಹೆದರಿ ಅವರು ಅಪ್ಪ-ಅಮ್ಮನನ್ನು ಹಿಡಿದುಕೊಂಡಿದ್ದಾರೆ. ಆಗ ವಿದ್ಯುತ್​ ತಗುಲಿ ಮಕ್ಕಳೂ ಮೃತಪಟ್ಟಿದ್ದಾರೆ!
ಹೀಗೆ ಅಪ್ಪ-ಅಮ್ಮ ಮತ್ತು ಇಬ್ಬರು ಮಕ್ಕಳು ಒಟ್ಟಿಗೇ ಮೃತಪಟ್ಟಿದ್ದಾರೆ. ಇವರ ಕೂಗಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬಂದು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ನಾಲ್ವರನ್ನೂ ಆಸ್ಪತ್ರೆಗೆ ಸಾಗಿಸಿದರೂ ನಾಲ್ವರೂ ಅದಾಗಲೇ ಮೃತಪಟ್ಟಿದ್ದರು.
ಮೃತರ ಕುಟುಂಬಕ್ಕೆ ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ. ಜತೆಗೆ ಅಜ್ಜಿಯ ಮನೆಯಲ್ಲಿ ಇದ್ದು ಪ್ರಾಣ ಉಳಿಸಿಕೊಂಡಿರುವ ಐದು ವರ್ಷದ ಫೈಜಾನ್​ನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.
‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ? ಶಾಸಕನ ಪುತ್ರ, ಸಹೋದರನ ಸುತ್ತ ಅಕ್ರಮದ ಘಾಟು- ಬಾಯಿಬಿಟ್ಟ ಕಿಂಗ್​ಪಿನ್​

ಬುಡಕಟ್ಟು ವಿದ್ಯಾರ್ಥಿಗಳ ಹಣ ದೇಶವಿರೋಧಿ ಚಟುವಟಿಕೆಗೆ? ಮೇಧಾ ಪಾಟ್ಕರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

ಬ್ಲಾಕ್​ಬಸ್ಟರ್​ ಸಿನಿಮಾ ‘ಪುಷ್ಪಾ’ ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 3 =
Remember me
