ಶ್ರೀನಗರ: ಶರಣಾಗತರಾಗುವಂತೆ ಭಾರತೀಯ ಸೇನೆ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿ ಗುಂಡಿನ ಸುರಿಮಳೆಗೈದ ನಾಲ್ವರು ಉಗ್ರರನ್ನು ಯೋಧರು ಸದೆಬಡಿದು ಹೊಡೆದುರುಳಿಸಿರುವ ಘಟನೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ನಸುಕಿನ ವೇಳೆ ಈ ಘಟನೆ ನಡೆದಿದೆ. ಶೋಪಿಯಾನ್ ಜಿಲ್ಲೆಯ ಮಣಿಹಾಲ್ ಪ್ರದೇಶವನ್ನು ಸುತ್ತುವರಿದ ಜಮ್ಮು-ಕಾಶ್ಮೀರ ವಲಯ ಪೊಲೀಸರು, ಸಿಆರ್​ಪಿಎಫ್ ಮತ್ತು ಸೇನೆ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಹೊಡೆದುರುಳಿಸಿದ್ದಾರೆ.
ಈ ಭಾಗದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಉಗ್ರರು ಅಡಿಗಿರುವ ತಾಣಕ್ಕೆ ಆರಂಭಕ್ಕೆ ಮುತ್ತಿಗೆ ಹಾಕಲಾಯಿತು. ನಂತರ ಅಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಶರಣಾಗುವಂತೆ ಕೇಳಿಕೊಳ್ಳಲಾಗಿದೆ. ಆದರೆ ಇದಕ್ಕೆ ಒಪ್ಪದ ಉಗ್ರರು ಅದಕ್ಕೆ ಗುಂಡಿನ ದಾಳಿ ನಡೆಸಿದ್ದಾರೆ. ರಕ್ಷಣಾತ್ಮಕವಾಗಿ ಭದ್ರತಾ ಪಡೆ ಎನ್​ಕೌಂಟರ್​ ಮಾಡಿದ್ದು, ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಮೃತ ಉಗ್ರರಲ್ಲಿ ಇಬ್ಬರನ್ನು ಲಷ್ಕರ್ ಎ ತಯಬಾ ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂದು ಗುರುತಿಸಲಾಗಿದೆ. ಮೃತ ಉಗ್ರರ ಬಳಿಯಿಂದ ಎ.ಕೆ ರೈಫಲ್ ಮತ್ತು ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವರದಿ ಎನ್​ಕೌಂಟರ್ ಮುಂದುವರಿದಿದೆ ಎಂದು ಶ್ರೀನಗರ ಸೇನಾ ವಕ್ತಾರ ತಿಳಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಉಗ್ರರೊಂದಿಗೆ ಯೋಧರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಶೋಪಿಯಾನ್‌ನ ರಾವಲ್ಪೋರಾ ಪ್ರದೇಶದಲ್ಲಿ ಕಳೆದ ವಾರ ಮೂರು ದಿನ ನಡೆದ ಎನ್‌ಕೌಂಟರ್‌ನಲ್ಲಿ ಉನ್ನತ ಕಮಾಂಡರ್ ವಿಲಾಯತ್ ಲೋನ್ ಅಲಿಯಾಸ್ ಸಜ್ಜಾದ್ ಅಫ್ಘಾನಿ ಸೇರಿದಂತೆ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು.
ಥೂ…ನನ್ನಷ್ಟು ದೊಡ್ಡ ಕತ್ತೆ ಯಾರೂ ಇಲ್ಲ… ನಾನೇ ದೊಡ್ಡ ಕತ್ತೆ… ಎಂದು ಹಣೆ ಚಚ್ಚಿಕೊಂಡ ಮಮತಾ ಬ್ಯಾನರ್ಜಿ!

ಬಾಂಬ್​ ಸ್ಫೋಟದಲ್ಲೂ ಆರೋಪಿ; ಆತ್ಮಹತ್ಯೆ ಕೇಸ್, ಭ್ರಷ್ಟಾಚಾರದಲ್ಲೂ ಹೆಸರು ! ಗೃಹ ಸಚಿವ ಸ್ಥಾನಕ್ಕೆ ಬಂತಾ ಕುತ್ತು?

‘ಮೇ 1ರಂದು ನಾಲ್ಕು ಕೊಲೆ- ಸಿ.ಟಿ ರವಿ ಕೊಲೆಯಾದ್ರೆ ನಾನ್​ ಉಳೀತೇನೆ, ನನ್ನ ಕೊಲೆಯಾದ್ರೆ ಅವ್ರು ಉಳೀತಾರೆ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − three =
Remember me
