ತೈವಾನ್:ಇಲ್ಲೊಬ್ಬ ಭೂಪ ತನ್ನ ಪತ್ನಿಗೆ ಮೂರು ಬಾರಿ ವಿಚ್ಛೇದನ ಕೊಟ್ಟು ನಾಲ್ಕು ಬಾರಿ ಅವಳನ್ನೇ ಮದುವೆಯಾದ ವಿಚಿತ್ರ ಘಟನೆ ತೈವಾನ್​ನಲ್ಲಿ ನಡೆದಿದೆ.ತೈವಾನ್‌ನ ತೇಪಿ ಬ್ಯಾಂಕ್‌ವೊಂದರಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿ ಇಂಥದ್ದೊಂದು ವಿಚಿತ್ರ ಕೇಸ್​ನಲ್ಲಿ ಸಿಲುಕಿಕೊಂಡು, ಹೀಗೆ ಪದೇ ಪದೇ ಮದುವೆಯಾದ ತಪ್ಪಿಗೆ 20 ಸಾವಿರ ಡಾಲರ್​ ದಂಡ ಹಾಕಿಸಿಕೊಂಡಿದ್ದಾನೆ.
ಅಷ್ಟಕ್ಕೂ ಈತ ಹೀಗೆ ಮಾಡಲು ಕಾರಣ ಬ್ಯಾಂಕ್​ನಿಂದ ರಜೆ ಪಡೆಯಲು! ರಜೆಗೂ ಪದೇ ಪದೇ ಮದುವೆಯಾಗುವುದಕ್ಕೂ ಏನು ಸಂಬಂಧ ಎಂದು ಕೇಳುವಿರಾ? ತೈವಾನ್​ನಲ್ಲಿ ಬ್ಯಾಂಕ್​ ಸಿಬ್ಬಂದಿಗೆ ಮದುವೆಗೆಂದು ಎಂಟು ದಿನಗಳ ರಜೆ ಸಿಗುತ್ತದೆ. ಈ ಸಮಯದಲ್ಲಿ ತೆಗೆದುಕೊಳ್ಳುವ ರಜೆಗೆ ಯಾವುದೇ ರೀತಿಯಲ್ಲಿ ಸಂಬಳ ಕಟ್​ ಆಗುವುದಿಲ್ಲ. ಆದ್ದರಿಂದ ಹೀಗೆ ಮಾಡಿದ್ದಾನೆ .
ಈತ ಮೊದಲ ಬಾರಿ ಮದುವೆಯಾಗಿ ಎಂಟು ದಿನ ರಜೆ ಪಡೆದುಕೊಂಡ. ಆದರೆ ಅವನಿಗೆ ಮತ್ತಷ್ಟು ರಜೆ ಬೇಕಿತ್ತು. ಆದ್ದರಿಂದ ಪತ್ನಿಗೆ ಡಿವೋರ್ಸ್​ ಕೊಟ್ಟು ಪುನಃ ಮದುವೆಯಾಗಿ ಎಂಟು ದಿನ ರಜೆ ಪಡೆದ. ಹೀಗೆ ಮೂರು ಬಾರಿ ಅವಳಿಗೆ ಡಿವೋರ್ಸ್​ ಕೊಟ್ಟು ನಾಲ್ಕು ಬಾರಿ ಮದುವೆಯಾಗಿ 32 ದಿನ ರಜೆ ಪಡೆಯುವಲ್ಲಿ ಯಶಸ್ವಿಯಾದ!
ಈತ ಮೊದಲು ಮದುವೆಯಾಗಿದ್ದು ಕಳೆದ ವರ್ಷ ಏಪ್ರಿಲ್​ 6 ರಂದು. 8 ದಿನಗಳ ರಜೆ ಮುಗಿಯುತ್ತಿದ್ದಂತೆ, ತನ್ನ ಪತ್ನಿಗೆ ಡಿವೋರ್ಸ್ ನೀಡಿ ಮರು ಮದುವೆಯಾಗಿ ಮತ್ತೆ 8 ದಿನಗಳ ರಜೆ ಪಡೆದುಕೊಂಡಿದ್ದಾನೆ. ಹೀಗೆ ಅದೇ ಪತ್ನಿಗೆ ಮೂರು ಬಾರಿ ವಿಚ್ಛೇದನ ನೀಡಿ, ನಾಲ್ಕು ಬಾರಿ ಮದುವೆಯಾಗಿದ್ದಾನೆ.
ಐದನೇ ಬಾರಿ ಇದನ್ನು ಮುಂದುವರಿಸಲು ಯೋಚಿಸಿದ್ದ. ಆದರೆ ಬ್ಯಾಂಕ್​ ಮ್ಯಾನೇಜರ್​ಗೆ ಸಂದೇಹ ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ರಜೆ ನೀಡಲು ನಿರಾಕರಿಸಿದಾದ ಬ್ಯಾಂಕ್ ವಿರುದ್ದವೇ ಕೇಸ್ ಹಾಕಿದ!
ಕಾರ್ಮಿಕ ಇಲಾಖೆ ಇದರ ವಿಚಾರಣೆ ನಡೆಸಿದಾಗ ಈತ ಮಾಡಿರುವ ಮೋಸದಾಟ ಬೆಳಕಿಗೆ ಬಂದು 20 ಸಾವಿರ ಡಾಲರ್​ ದಂಡ ವಿಧಿಸಿದೆ.
ಪತ್ನಿಯನ್ನು ನೋಡಿದರೆ ಮೃತ ಪ್ರೇಯಸಿಯೇ ಕಾಣುತ್ತಾಳೆ: ಏನು ಮಾಡಲಿ?

ಮುಟ್ಟೋರೇ ಇಲ್ಲ ಎಂದು ಕೊರಗ್ತಿರೋ ಸೋಂಕಿತರಿಗೆ ಹೀಗೆ ಬೆಚ್ಚಗಿನ ಸ್ವರ್ಶ ನೀಡಿದ್ತಾರೆ ಈ ನರ್ಸ್​!

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳೆಯರಿಂದ 34 ಹುದ್ದೆಗಳಿಗೆ ಅರ್ಜಿ ಆಹ್ವಾನ

ದ್ವೇಷಕ್ಕೆ ಉರುಳಿತು 10 ಹೆಣ! ಆರು ಮಂದಿಯ ಇರಿದು ಕೊಂದರು- ನಾಲ್ವರನ್ನು ಸಜೀವವಾಗಿ ಸುಟ್ಟರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 1 =
Remember me
