ಪುಣೆ:ಸೈಬರ್​ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇವುಗಳ ಕುರಿತು ಮಾಧ್ಯಮಗಳಲ್ಲಿ ಎಷ್ಟೇ ಮಾಹಿತಿ ನೀಡಿದರೂ, ಮೋಸದ ಜಾಲಕ್ಕೆ ಒಳಗಾಗಬೇಡಿ ಎಂದು ದಿನೇ ದಿನೇ ವರದಿಯಾಗುತ್ತಿದ್ದರೂ ಇದಕ್ಕೆ ಬಲಿಯಾಗುತ್ತಿರುವವರು ಹಲವರು. ಅದರಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್​ ವಂಚನೆಗೆ ಗುರಿಯಾಗುತ್ತಿರುವವರು ಮಹಿಳೆಯರು.
ಆದರೆ ಇದೀಗ ನಾಲ್ವರು ಶಾಸಕಿಯರು ಸೈಬರ್​ ವಂಚನೆಗೆ ಗುರಿಯಾಗಿರುವುದು ಬೆಳಕಿಗೆ ಬಂದಿದೆ. ಈ ನಾಲ್ವರು ಕೂಡ ಬಿಜೆಪಿ ಶಾಸಕಿಯರು. ಯುವಕನೊಬ್ಬನಿಗೆ ಕರುಣೆ ತೋರಿ ಮೋಸ ಹೋಗಿದ್ದಾರೆ ಇವರು.
ಆಗಿದ್ದೇನೆಂದರೆ, ತಾಯಿಯ ಅನಾರೋಗ್ಯದ ನೆಪ ಹೇಳಿ ಈ ಶಾಸಕಿಯರಿಗೆ ಟೋಪಿ ಹಾಕಿದ್ದಾನೆ ಪುಣೆಯ ಯುವಕ. ಎಲ್ಲರಿಗೂ ಕರೆ ಮಾಡಿರುವ ಈತ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಸಹಾಯ ಮಾಡಿ ಎಂದು ಗೋಗರೆದಿದ್ದಾನೆ. ಈತನ ಕಣ್ಣೀರಿಗೆ ಕರಗಿದ ಶಾಸಕಿಯರು ಗೂಗಲ್​ ಪೇ ಮೂಲಕ ಹಣ ನೀಡಿದ್ದಾರೆ. ನಂತರ ತಾವು ಮೋಸ ಹೋಗಿರುವುದು ತಿಳಿದುಬಂದಿದೆ.
ಮಾಧುರಿ ಮಿಸಾಲ್, ಶ್ವೇತಾ ಮಹಾಲೆ, ಮೇಘನಾ ಬೋರ್ಡಿಕರ್, ದೇವಯಾನಿ ಫರಾಂಡೆ ವಂಚನೆಗೊಳಗಾದವರು. ಮುಖೇಶ್ ರಾಥೋಡ್ ಎಂಬ ಯುವಕನೇ ಇವರನ್ನೆಲ್ಲಾ ಮೋಸ ಮಾಡಿದ್ದಾನೆ. ಸದ್ಯ ಶಾಸಕಿಯರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಯುವಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ನೋಡಿ ನಾನಿನ್ನೂ ಕನ್ಯೆ, ಸಿಕ್ಕೇಬಿಡ್ತು ಸರ್ಟಿಫಿಕೇಟ್​! ಹೀಗೆಲ್ಲಾ ನಡೀತಿದೆ ಕನ್ಯತ್ವ ಪರೀಕ್ಷೆ- ಪಾಸ್​ ಆದ್ರೆ ಪ್ರಮಾಣಪತ್ರ
ಪತ್ನಿಯನ್ನು ಎಟಿಎಂನಂತೆ ಬಳಸಿಕೊಳ್ಳುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್​ ಕೊಟ್ಟಿತು ಡಿವೋರ್ಸ್​
ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
