ಕರಾಚಿ:ಈ ಯುವಕನ ಹೆಸರು ಅಡ್ನಾನ್​. ಇದಾಗಲೇ ಈತನಿಗೆ ಮೂವರು ಹೆಂಡತಿಯರು. ಅಂದ ಮೇಲೆ ಈತ ಯುವಕ ಹೇಗಾದ ಎಂದು ಕೇಳಬೇಡಿ. ನಿಜಕ್ಕೂ ಈತ ಯುವಕನೇ. ಏಕೆಂದರೆ ಇವನ ವಯಸ್ಸು ಕೇವಲ 20!
20 ವಯಸ್ಸಿಗೆ ಮೂರು ಮದುವೆನಾ ಎನ್ನಿಸಬಹುದು. ಆದರೆ ಇದು ನಿಜ. ಮೊದಲ ವಿವಾಹವಾದಾಗ ಇವನಿಗೆ ಕೇವಲ 16 ವರ್ಷ. ಎರಡನೆಯದು ಆದಾಗ 18, ಮೂರನೆಯದಾದಾಗ 19, ಈಗ 20. ಅಂದಹಾಗೆ ಇವನೀಗ ನಾಲ್ಕನೇ ಮದುವೆಗೆ ತಯಾರಿ ನಡೆಸಿದ್ದಾನೆ.
ಅಂದಹಾಗೆ ಈತ ಪಾಕಿಸ್ತಾನದ ಸಿಯಾಲ್‌ಕೋಟ್‌ನವ. ಈತನೇನೋ ನಾಲ್ಕನೆಯವಳನ್ನು ಹುಡುಕುತ್ತಿದ್ದಾನೆ. ಇದಕ್ಕೆ ಉಳಿದ ಮೂವರು ಜಗಳವಾಡುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಏಕೆಂದರೆ ನಾಲ್ಕನೆಯ ಮದುವೆಗೆ ಮೂವರೂ ಸಹಕರಿಸುತ್ತಿದ್ದಾರಂತೆ. ತಮ್ಮ ಗಂಡ ಇನ್ನೊಂದು ಮದುವೆಯಾಗಲಿ ಎಂದು ನಾಲ್ಕನೆಯವಳಿಗಾಗಿ ಅವರೇ ಹುಡುಕುತ್ತಿದ್ದಾರಂತೆ.
ಇದನ್ನೂ ಓದಿ:ಮದ್ವೆಗೆ ಹುಡುಗಿ ಸಿಕ್ಕಿಲ್ಲ, ಸಿಕ್ಕೋಳೂ ಒಪ್ಲಿಲ್ಲವೆಂದು ರಾಯಭಾರಿ ಕಚೇರಿಗೆ ಬಾಂಬ್​ ಹಾಕೋ ಪ್ಲ್ಯಾನ್​ ಮಾಡೋದಾ?
ಹೀಗೆಂದು ಖುದ್ದು ಅಡ್ನಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ತನ್ನ ಎಲ್ಲ ಹೆಂಡತಿಯರೂ ಅನ್ಯೋನ್ಯವಾಗಿದ್ದಾರೆ. ಯಾವತ್ತಿಗೂ ಜಗಳವಾಡುವುದಿಲ್ಲ. ಮನೆಗೆಲಸಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಎಲ್ಲರ ಜತೆಯೂ ನಾನು ಬಹಳ ಟೈಂ ಕೊಡಲು ಆಗುವುದಿಲ್ಲ ಎಂಬ ಬೇಸರ ಬಿಟ್ಟರೆ ಎಲ್ಲರೂ ಆರಾಮಾಗಿ ಇದ್ದಾರೆ ಎನ್ನುತ್ತಾನೆ ಅಡ್ನಾನ್​!
ಈತನಿಗೆ ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ. ಆದರೆ ಪ್ರತಿ ಮದುವೆಯಾದಾಗಲೂ ಅವನ ಆದಾಯ ಏರುತ್ತಲೇ ಸಾಗಿದೆಯಂತೆ. ಅದಕ್ಕಾಗಿ ಇನ್ನೂ ಹೆಚ್ಚು ಮದುವೆಯಾಗುವ ಆಸೆ ಎನ್ನುತ್ತಾನೆ ಅಡ್ನಾನ್​.
ಅಂದ ಹಾಗೆ ಇವನ ಒಂದು ಕೋರಿಕೆ ಎಂದರೆ ನಾಲ್ಕನೆಯವಳಾಗಿ ಬರುವವಳು ಎಸ್​ ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇರುವವಳು ಆಗಿರಬೇಕಂತೆ. ಏಕೆಂದರೆ ಎಸ್​ ಈತನಿಗೆ ಶುಭದಾಯಕವಂತೆ. ಇವನ ಅವನ ಹೆಂಡತಿಯರ ಹೆಸರು ಶುಂಬಲ್, ಶಬಾನಾ ಮತ್ತು ಶಾಹಿದಾ. ಅರ್ಥಾತ್​ ಎಲ್ಲರೂ ಎಸ್​ ಅಕ್ಷರದಿಂದಲೇ ಆರಂಭವಾಗುವವರು. ಇದು ಅವನಿಗೆ ಶುಭ ಕೊಟ್ಟಿದ್ದು, ನಾಲ್ಕನೆಯವಳೂ ಹಾಗೇ ಇರಬೇಕು ಎಂದಿದ್ದಾನೆ.
ಏಳು ಜಿಲ್ಲೆ ದಾಟಿ ಬಂದ.. 3 ಸಾವಿರ ಕಿ.ಮೀ. ಸುತ್ತಿ ಬಂದ.. ಚೆಲುವ ಹುಲಿರಾಯ…

ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
