ಚೆನ್ನೈ:ಪಿ.ಟಿ.ಉಷಾ (57) ಹೆಸರು ಕೇಳದವರೇ ಇಲ್ಲವೇನೋ. ಒಂದು ಕಾಲದಲ್ಲಿ ಮಿಂಚಿನ ಓಟದಲ್ಲಿ ವಿಶ್ವ ದಾಖಲೆ ಮಾಡಿ ಭಾರತದ ಹೆಸರನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದ ಅಥ್ಲೀಟ್​ ಇವರು. 1976 ರಿಂದ 2000ನೇ ಇಸವಿಯವರೆಗೆ ತಮ್ಮ 24 ವರ್ಷಗಳ ಕ್ರೀಡಾ ಬದುಕಿನಲ್ಲಿ ಉಷಾ 103 ಅಂತಾರಾಷ್ಟ್ರೀಯ ಹಾಗೂ 1042 ರಾಷ್ಟ್ರೀಯ ಪದಕಗಳನ್ನು ಮುಡಿಗೇರಿಸಿಕೊಂಡು ಭಾರತದ ಸ್ಥಾನವನ್ನು ಉತ್ತುಂಗಕ್ಕೆ ಏರಿಸಿದವರು ಇವರು.
ಆದರೆ ಇದೇ ಕ್ರೀಡಾತಾರೆಯ ವಿರುದ್ಧ ಇದೀಗ ಭಾರಿ ವಂಚನೆ ಆರೋಪ ಕೇಳಿಬಂದಿದೆ.
ಮಾಜಿ ಅಥ್ಲೀಟ್​ ಜೆಮ್ಮಾ ಜೋಸೆಫ್‌ ಎನ್ನುವವರು ಉಷಾ ವಿರುದ್ಧ ದೂರು ದಾಖಲು ಮಾಡಿದ್ದು, ಉಷಾ ತಮಗೆ ಅನ್ಯಾಯ ಮಾಡಿರುವುದಾಗಿ ಹೇಳಿದ್ದಾರೆ. ಬಿಲ್ಡರ್ ಒಬ್ಬರ ಜತೆ ಸೇರಿ ಉಷಾ ತಮಗೆ ವಂಚಿಸಿರುವುದಾಗಿ ಜೆಮ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ಕೇರಳ ಕೋಯಿಕ್ಕೋಡ್‌ನಲ್ಲಿ ಉಷಾ ಅವರ ಗ್ಯಾರೆಂಟಿ ಮೇರೆಗೆ ತಾವು 1,012 ಚದರ ಅಡಿ ನಿವೇಶನವನ್ನು ಖರೀದಿಸಿದ್ದವು. ಇದಾಗಲೇ 46 ಲಕ್ಷ ರೂಪಾಯಿಯನ್ನು ಪಾವತಿ ಮಾಡಿಯಾಗಿದೆ. ಆದರೆ ಇದುವರೆಗೆ ಬಿಲ್ಡರ್ ಈಗ ನಿವೇಶನ ನೋಂದಣಿ ಮಾಡುತ್ತಿಲ್ಲ. ಒಂದೊಂದು ಕಾರಣ ನೀಡುತ್ತಿದ್ದಾರೆ. ಉಷಾ ಅವರ ಗ್ಯಾರೆಂಟಿ ಮೇರೆಗೆ ಈ ಹಣವನ್ನು ನೀಡಲಾಗಿತ್ತು. ಆದರೆ ಈಗ ಇಬ್ಬರೂ ಸೇರಿ ತಮಗೆ ಮೋಸ ಮಾಡುತ್ತಿರುವಂತಿದೆ ಎಂದು ಜೆಮ್ಮಾ ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪಿ.ಟಿ.ಉಷಾ ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕೋಯಿಕ್ಕೋಡ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎವಿ ಜಾರ್ಜ್ ಅವರು ಜೆಮ್ಮಾ ಜೋಸೆಫ್ ಅವರ ದೂರನ್ನು ವೆಲ್ಲಾಯಿಲ್ ಪ್ರದೇಶದ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬರಬೇಕಿದೆ.
VIDEO: ಮಂಟಪದಲ್ಲೇ ವರದಕ್ಷಿಣೆಗೆ ಬೇಡಿಕೆ ಇಟ್ಟ- ಮಾಡೇ ಬಿಟ್ರು ಮಹಾ ‘ವರಪೂಜೆ’: ಎದ್ದುಬಿದ್ದು ಓಡಿಹೋದ ಭಾವಿಪತಿ!

ದರ್ಗಾಗೆ ಪ್ರಯಾಣಿಸುತ್ತಿದ್ದವರು ರಸ್ತೆ ಮಧ್ಯೆಯೇ ಹೆಣವಾದರು! ಭಯಾನಕ ಅಪಘಾತದಲ್ಲಿ ಆರು ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + six =
Remember me
