ಕೆನ್​ಬೆರ್ರಾ (ಆಸ್ಟ್ರೇಲಿಯಾ):ಆಸ್ಟ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆಗಳು ಇದೇ 21ರಂದು ಮುಗಿದಿವೆ. ಲಿಬರಲ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದಿದೆ. ಪ್ರಧಾನಿಯಾಗಿದ್ದ ಸ್ಕಾಟ್ ಮಾರಿಸನ್ ಜಾಗದಲ್ಲಿ ಕಾರ್ಮಿಕ ನಾಯಕ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗಲಿದ್ದಾರೆ. ಇವೆಲ್ಲಾ ಸರಿ… ಆದರೆ ಇಂಟೆರೆಸ್ಟಿಂಗ್​ ವಿಷಯವೊಂದು ಚುನಾವಣೆಯಲ್ಲಿ ನಡೆದಿದೆ. ಅದೇನೆಂದರೆ ಚುನಾವಣೆಯಲ್ಲಿ ಅನೇಕ ಮಂದಿ ಒಳ ಉಡುಪಿನಲ್ಲಿ ಬಂದು ಮತವನ್ನು ಚಲಾಯಿಸಿ ಹೋದದ್ದು!
ಹಾಗೆಂದು ಇದೇನು ಸರ್ಕಾರದ ವಿರುದ್ಧ ಪ್ರತಿಭಟನೆ ಅಂದುಕೊಂಡರೆ ತಪ್ಪು. ಹಾಗಿದ್ದರೆ ಇವರೆಲ್ಲಾ ಇಷ್ಟು ಖುಷಿಯಲ್ಲಿ ಅಂಡರ್​ವೇರ್​ನಲ್ಲಿ ಬಂದು ಮತ ಚಲಾಯಿಸಿದ್ದು ಏಕೆಂದರೆ, ಉಚಿತ ಒಳ ಉಡುಪು ಪಡೆಯಲು! ಅರ್ಥಾತ್​, ಒಳ ಉಡುಪುಗಳನ್ನು ಮಾತ್ರ ಧರಿಸಿ ಮತ ಚಲಾಯಿಸುವ ಯಾರಿಗಾದರೂ ಒಳ ಉಡುಪು ಕಂಪನಿಯು ಉಚಿತ ಒಳ ಉಡುಪುಗಳನ್ನು ನೀಡಿತ್ತು.
ಅಂಡರ್ ಗಾರ್ಮೆಂಟ್ ಕಂಪನಿಯಾಗಿರುವ ಬಝೀ ಸ್ಮಗ್ಲರ್ ಈ ಘೋಷಣೆ ಮಾಡಿತ್ತು. ಇದನ್ನು ಕೇಳಿ ಉಚಿತವಾಗಿ ಅಂಡರ್​ವೇರ್​ ಪಡೆಯಲು ಈ ವೇಷದಲ್ಲಿ ಸಹಸ್ರಾರು ಪುರುಷರು, ಮಕ್ಕಳು ಬಂದು ಮತ ಚಲಾಯಿಸಿ ಹೋಗಿದ್ದು, ಇದೀಗ ಭಾರಿ ವೈರಲ್​ ಆಗಿದೆ. ಒಂದು ಜೊತೆ ಒಳಉಡುಪುಗಳನ್ನು ಉಚಿತವಾಗಿ ಪಡೆಯಲು, ಮತದಾರರು ತಮ್ಮ ಕಂಪನಿಯ ಒಳ ಉಡುಪುಗಳಲ್ಲಿ ಬಂದು ಮತ ಚಲಾಯಿಸಬೇಕು ಮತ್ತು #SmugglersDecide ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಳ್ಳಬೇಕು ಎಂದು ಬಝೀ ಸ್ಮಗ್ಲರ್ ಹೇಳಿತ್ತು. ಹೀಗೆ ಷರತ್ತಿನಂತೆ ಮತ ಚಲಾಯಿಸಿ ಫೋಟೋ ಶೇರ್​ ಮಾಡಿಕೊಂಡವರಿಗೆ ಕಂಪೆನಿ ಉಚಿತವಾಗಿ ಅಂಡರ್​ವೇರ್​ ಕಳಿಸುತ್ತಿದೆ. ಅಂದಹಾಗೆ ಈ ಬ್ರ್ಯಾಂಡ್​ನ ಅಂಡರ್​ವೇರ್​ಗೆ ಬಹು ದುಬಾರಿ ಬೆಲೆ ಎನ್ನಲಾಗಿದೆ.
7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಪ್ರಿಯಕರನ ಲೈಂಗಿಕ ಆಸೆ ಈಡೇರಿಸಲು ಮಗಳನ್ನೇ ಆತನ ಬಳಿ ಬಿಟ್ಟ ಪಾಪಿ ತಾಯಿ!

VIDEO: ಹೊರಗಿಟ್ಟಿರೋ ಶೂಸ್​ ಧರಿಸೋ ಮುನ್ನ ಎಚ್ಚರ: ಪ್ರಾಣಕ್ಕೇ ಕುತ್ತಾದೀತು! ತುಮಕೂರಿನ ಶಾಕಿಂಗ್​ ವಿಡಿಯೋ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
