ಲಡಾಖ್:ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ 2020ರ ಜೂನ್​ 15 ಮತ್ತು 16 ಮಧ್ಯರಾತ್ರಿ ನಡೆದ ರ್ಷಣೆಯಲ್ಲಿ ಮೃತ ಚೀನಾ ಸೈನಿಕರ ಸಂಖ್ಯೆಯ ಕುರಿತು ಚೀನಾ ಸುಳ್ಳಿನ ಕಂತೆಯನ್ನೇ ಹೇಳಿದ್ದು, ನಿಜವಾಗಿಯೂ ಮೃತಪಟ್ಟವರು 42 ಸೈನಿಕರು ಎಂದು ಆಸ್ಟ್ರೆಲಿಯದ ಪತ್ರಿಕೆ “ದಿ ಕ್ಲಾಕ್ಸನ್​’ ವರದಿ ಮಾಡಿದೆ.
ಘರ್ಷಣೆ ನಡೆದ ಒಂದು ವರ್ಷದ ಬಳಿಕ ಈ ವರದಿ ಬಿಡುಗಡೆಗೊಂಡಿದೆ. ಈ ಘರ್ಷಣೆಯಲ್ಲಿ ಗಾಯಗೊಂಡ ಎರಡೂ ಸೇನೆಗಳ ಅನೇಕ ಯೋಧರು ಗಲ್ವಾನ್​ ನದಿಯಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ನದಿಯಲ್ಲಿ ಚೀನಾದ 38 ಯೋಧರು ಕೊಚ್ಚಿಹೋಗಿ ಮೃತಪಟ್ಟಿದ್ದಾರೆ. ಒಬ್ಬ ಜೂನಿಯರ್​ ಸಾರ್ಜೆಂಟ್​ ಮಾತ್ರ ಕೊಚ್ಚಿಹೋಗಿದ್ದು, ಉಳಿದ ನಾಲ್ವರು ಸಾವನ್ನಪ್ಪಿದ್ದಾರೆ ಇಲ್ಲಿನ ತಾಪಮಾನ ಶೂನ್ಯಕ್ಕಿಂತ ಕೆಳಗೆ ಇದ್ದ ಕಾರಣ ಕೊರೆಯುತ್ತಿದ್ದ ನದಿ ನೀರಿನಲ್ಲಿ ಬಿದ್ದಿದ್ದ ಗಾಯಗೊಂಡ ಅವರ ಪೈಕಿ ಹಲವರು ಮೃಪಟ್ಟಿರುವುದಾಗಿ ವರದಿ ಹೇಳಿದೆ.
ಗಡಿಯ ಆಯಕಟ್ಟಿನ ಗಲ್ವಾನ್​ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಮೀರಿ ಚೀನಾ ಸೇನೆ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಿತ್ತು. ಅಲ್ಲಿ ತನ್ನ ಗಸ್ತನ್ನು ಹೆಚ್ಚಿಸಿತ್ತು. ಗಡಿಯ ಬರ್​ ವಲಯದಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ ಎಂಬ ಒಪ್ಪಂದವನ್ನೂ ಮುರಿದಿತ್ತು ಎನ್ನಲಾಗಿದೆ.
ಗಲ್ವಾನ್​ ಘರ್ಷಣೆ ನಡೆದದ್ದೇಕೆ?2020ರ ಮೇ ತಿಂಗಳಲ್ಲಿ ಪ್ಯಾಂಗಾಂಗ್​ ತ್ಸೊ ಸರೋವರದ ಕೆಲ ಪ್ರದೇಶವನ್ನು ಅತಿಕ್ರಮಿಸಿಕೊಂಡು ಕ್ಯಾತೆ ತೆಗೆದಿದ್ದ ಚೀನಾ, ಗಲ್ವಾನ್​ ಕಣಿವೆಯಲ್ಲಿ ಎಲ್​ಎಸಿ ಆಚೆಗೆ ವೀಣಾ ಗೋಪುರ, ಬಂಕರ್​ಗಳನ್ನು ನಿರ್ಮಿಸಿತ್ತು. ಇದನ್ನು ತೆರವುಗೊಳಿಸುವಂತೆ ಭಾರತದ ಒತ್ತಾಯವನ್ನು ಒಪ್ಪಿಕೊಂಡಿದ್ದರೂ ತೆರವುಗೊಳಿಸಿರಲಿಲ್ಲ. ಹೀಗಾಗಿ 2020ರ ಜೂನ್​ 15ರ ಸಂಜೆ ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಪಡೆ, ವಿವಾದಾತ್ಮ ನಿರ್ಮಾಣಗಳನ್ನು ತೆಗೆಯಲು ಮುಂದಾಯಿತು. ಆಗ ಚೀನಾದ ಪೀಪಲ್ಸ್​ ಲಿಬರೇಷನ್​ ಆಮಿರ್ (ಪಿಎಲ್​ಎ) ಪ್ರತಿರೋಧ ವ್ಯಕ್ತಪಡಿಸಿತು. ಉಭಯ ಸೇನೆಗಳ ಮಧ್ಯೆ ಕಲ್ಲು ಮತ್ತು ಬಡಿಗೆಗಳಿಂದ ಮಧ್ಯರಾತ್ರಿಯವರೆಗೂ ಘರ್ಷಣೆ ನಡೆಯಿತು. ಇದರಿಂದ ಭಾರತ 20 ಯೋಧರು ಹುತಾತ್ಮರಾಗಿದ್ದರು.
ಈ ನಡುವೆಯೇ ಚೀನಾದ ಬೀಜಿಂಗ್​ನಲ್ಲಿ ಚಳಿಗಾಲದ ಒಲಿಂಪಿಕ್ಸ್​ ಶುಕ್ರವಾರ ಚಾಲನೆಗೊಳ್ಳಲಿದ್ದು, ಇದರ ಕ್ರೀಡಾ ಜ್ಯೋತಿ ತರುವ ಗೌರವಕ್ಕೆ ಗಲ್ವಾನ್​ ಕಣಿವೆಯ ಸಂರ್ಷದಲ್ಲಿ ಗಾಯಗೊಂಡಿದ್ದ ಯೋಧನನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕ್ರಮ ಸರಿಯಲ್ಲ ಎಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾ, ಕ್ರೀಡೆಯನ್ನು ರಾಜಕೀಯಗೊಳಿಸುತ್ತಿರುವುದು ನಾಚಿಕೆಗೇಡು ಎಂದು ಅಮೆರಿಕದ ಸೆನೆಟ್​ನ ವಿದೇಶಾಂಗ ವ್ಯವಹಾರ ಕುರಿತ ಸಮಿತಿ ಸದಸ್ಯ ಜಿಮ್​ ರಿಶ್​ ಹೇಳಿದ್ದಾರೆ.
ಗಲ್ವಾನ್​ ಕಣಿವೆಯ ರ್ಷಣೆಯಲ್ಲಿ ಗಾಯಗೊಂಡ ಸೇನಾಧಿಕಾರಿ ಚಳಿಗಾಲದ ಒಲಿಂಪಿಕ್ಸ್​ನ ಪರೇಡ್​ನಲ್ಲಿ ಕ್ರೀಡಾಜ್ಯೋತಿ ತರುವುದನ್ನು ಖಂಡಿಸಿ ಉದ್ಘಾಟನಾ ಕಾರ್ಯಕ್ರಮವನ್ನು ಭಾರತ ಬಹಿಷ್ಕರಿಸಿದೆ. ಚೀನಾ ಕ್ರೀಡೆಯನ್ನು ರಾಜಕೀಯದ ವೇದಿಕೆಯನ್ನಾಗಿ ಮಾಡಿಕೊಂಡಿದ್ದು ವಿಷಾದನಿಯ. ಇದನ್ನು ಖಂಡಿಸಿ ಭಾರತದ ತಂಡ ಚಳಿಗಾಲದ ಒಲಿಂಪಿಕ್ಸ್​ನ ಉದ್ಘಾಟನೆ (ಫೆ. 4) ಮತ್ತು ಸಮಾರೋಪ (ಫೆ. 20) ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಉಪನ್ಯಾಸಕನ ಹುದ್ದೆ ಕೊಡಿಸ್ತೇನೆಂದು ಯುವಕನ ಬಟ್ಟೆ ಬಿಚ್ಚಿ ಯುವತಿ ಜತೆ ಮಲಗಿಸಿದರು! ಶಿರಸಿಯಲ್ಲೊಂದು ಭಯಾನಕ ಕೃತ್ಯ
ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳಾಗಿವೆ… ಖರೀದಿಗೆ ಸಂಪರ್ಕಿಸಿ… ಪತಿಯನ್ನು ಹರಾಜಿಗಿಟ್ಟ ಪತ್ನಿ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − seven =
Remember me
