ಕೋಲ್ಕತಾ (ಪಶ್ಚಿಮಬಂಗಾಳ):ನವರಾತ್ರಿ ಉತ್ಸವ ಅತಿ ಹೆಚ್ಚು ಕಳೆಗಟ್ಟುವುದು ಪಶ್ಚಿಮ ಬಂಗಾಳದಲ್ಲಿ. ಆದರೆ ಈ ವರ್ಷದ ನವರಾತ್ರಿ ಮಾತ್ರ ಭಾರಿ ವಿವಾದಕ್ಕೆ ಸಿಲುಕಿದೆ. ಅದಕ್ಕೆ ಕಾರಣ ಮಹಿಷಮರ್ದಿನಿಯ ವಿಗ್ರಹದ ಕಾಲಿನಡಿ ಮಹಿಷ ರಕ್ಕಸನ ಬದಲು ಗಾಂಧಿಯನ್ನು ಹೋಲುವ ತಲೆ ಇಡಲಾಗಿದೆ!
ಇಂಥದ್ದೊಂದು ವಿವಾದವನ್ನು ಹುಟ್ಟುಹಾಕಿರುವುದು ಅಖಿಲ ಭಾರತ ಹಿಂದೂ ಮಹಾಸಭಾ. ಮಹಾಸಭಾದಿಂದ ಪ್ರತಿಷ್ಠಾಪಿಸಲಾದ ದುರ್ಗಿಯ ವಿಗ್ರಹದ ಅಡಿ ರಕ್ಕಸನ ಬದಲು ಗಾಂಧಿಯನ್ನು ಹೋಲುವ ಮುಖ ಇಡಲಾಗಿದೆ. ಇದಕ್ಕೆ ವಿಪರೀತ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಗ್ರಹಕ್ಕೆ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಲಾಗಲಿಲ್ಲ.
ಈ ಸುದ್ದಿ ಭಾರಿ ವೈರಲ್​ ಆಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಂಧಿಯ ತಲೆಯನ್ನು ತೆರವುಗೊಳಿಸಿ, ರಕ್ಕಸನ ತಲೆಯನ್ನು ಇಟ್ಟಿದ್ದಾರೆ.
ಇದು ಗಾಂಧಿಯ ತಲೆ ಅಲ್ಲ ಎಂದು ಹಿಂದೂ ಮಹಾಸಭಾ ಸಮರ್ಥಿಸಿಕೊಂಡಿದೆ. ಈ ವಿಗ್ರಹಕ್ಕೆ ಕನ್ನಡಕ ಇರುವುದು ನಿಜವಾದರೂ ಅದು ಗಾಂಧಿಯ ಮುಖವಲ್ಲ. ಗಾಂಧಿಯ ಮುಖಕ್ಕೆ ಅದು ಹೋಲಿಕೆಯಾಗುತ್ತಿದ್ದರೆ ಅದು ಕಾಕತಾಳೀಯವಷ್ಟೇ ಎಂದು ಸಮರ್ಥನೆ ಬಂದಿದೆ. ದೇವಿ ಆರಾಧನೆಗೆ ಅನುಮತಿ ಪಡೆದಿದ್ದರೂ ಸಹಿತ ಪೂಜೆಗೆ ಅಡ್ಡಿ ಪಡಿಸಲಾಗಿದೆ. ಆರಾಧನೆ ಬಂದ್​ ಮಾಡುವಂತೆ ಸೂಚಿಸಲಾಗಿದೆ ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಮೊಹಂತೋ ಸುಂದರ ಗಿರಿ ಮಹಾರಾಜ್ ಆರೋಪಿಸಿದ್ದಾರೆ.(ಏಜೆನ್ಸೀಸ್​)
VIDEO: ಉರಗ ತಜ್ಞ ಹಾವು ಹಿಡೀತಿದ್ದಂತೆಯೇ ಶಿವಮೊಗ್ಗದ ಮಹಿಳೆಯರ ಮೈಮೇಲೆ ಹೀಗೆ ಬಂದ ನಾಗದೇವ!
ವರ್ಕೌಟ್​ಗೆ ಇನ್ನೊಂದು ಬಲಿ: ಚಿತ್ರರಂಗಕ್ಕೆ ಶಾಕ್​- ಜ್ಯೂನಿಯರ್​ ಸಲ್ಮಾನ್​ ಖಾನ್​ ಖ್ಯಾತಿಯ ನಟ ಇನ್ನಿಲ್ಲ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × five =
Remember me
