ಲಂಡನ್:ಗಾಂಧೀಜಿಯವರ ಕನ್ನಡಕ 3,40,000 ಡಾಲರ್‌ಗೆ (ಸುಮಾರು 2.54 ಕೋಟಿ ರೂಪಾಯಿ) ಹರಾಜು ಆಗಿದೆ.
ಈ ಕನ್ನಡಕವರು ಚಿನ್ನ ಲೇಪಿತವಾಗಿದ್ದು, ಲಂಡನ್‌ನಲ್ಲಿ ಹರಾಜು ಆಗಿರುವುದಾಗಿ ಹರಾಜು ಸಂಸ್ಥೆ ತಿಳಿಸಿದೆ.ಈ ಕುರಿತು ಹರಾಜು ಸಂಸ್ಥೆಯಾಗಿರುವ ‘ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್’ ಇನ್‌ಸ್ಟಾಗ್ರಾಮ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. .ಅಪೂರ್ವ ವಸ್ತುವೊಂದಕ್ಕೆ ಬಿಡ್‌ನಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ. ಬಿಡ್‌ನಲ್ಲಿ ಭಾಗಿಯಾದವರಿಗೆಲ್ಲ ಧನ್ಯವಾದಗಳು ಎಂದು ಸಂಸ್ಥೆ ಬರೆದಿದೆ.
ಈ ಮೂಲಕ, ಲಂಡನ್‌ನಲ್ಲಿ ಇದುವರೆಗೆ ಹರಾಜು ಆಗಿರುವ ಎಲ್ಲಾ ವಸ್ತುಗಳಿಗಿಂತಲೂ ಇದು ಅತ್ಯಧಿಕ ಬೆಲೆಗೆ ಮಾರಾಟವಾಗಿರುವುದಾಗಿ ದಾಖಲೆ ಪುಟಗಳನ್ನು ಸೇರಿದೆ.
ಗಾಂಧಿಯವರು ಹಳೆಯ ಅಥವಾ ತಮಗೆ ಬೇಡವೆನಿಸಿದ ವಸ್ತುಗಳನ್ನು ಅಗತ್ಯ ಇರುವವರಿಗೆ ಮತ್ತು ಸಹಾಯ ಮಾಡಿದವರಿಗೆ ನೀಡುತ್ತಿದ್ದರು. ಈ ಕನ್ನಡಕವನ್ನು ದಕ್ಷಿಣ ಆಫ್ರಿಕಾದಲ್ಲಿ 1920-30ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಭಯಾನಕ ಕಾಳ್ಗಿಚ್ಚಿನಿಂದ ಕುಡುಕನ ಪ್ರಾಣ, ಆಸ್ತಿ ಉಳಿಸಿತು ಬಿಯರ್‌ ಕ್ಯಾನ್‌!
ಈ ಕನ್ನಡಕವನ್ನು ಮೊದಲು ಗಾಂಧೀಜಿ ಬಳಸುತ್ತಿದ್ದರು. ನಂತರ ಅದನ್ನು ಅವರು ತಮ್ಮ ಚಿಕ್ಕಪ್ಪನಿಗೆ ನೀಡಿದ್ದರು. ಕಳೆದ 50 ವರ್ಷಗಳಿಂದ ಇದು ಯಾವುದೇ ಉಪಯೋಗವಿಲ್ಲದೇ ಬಿದ್ದುಕೊಂಡಿತ್ತು. ಕಳೆದ ತಿಂಗಳು ಈ ಕನ್ನಡಕ ನಮಗೆ ಸಿಕ್ಕಿದೆ. ಇದು ಪ್ರಯೋಜನ ಇಲ್ಲದೇ ಹೋದರೆ ಅದನ್ನು ಎಸೆಯುವ ಬಗ್ಗೆ ಯೋಚನೆ ಮಾಡಲಾಗಿತ್ತು. ಆದರೆ ಇದು ಗಾಂಧಿಯವರಿಗೆ ಸೇರಿದ್ದು ಎಂದ ಕೂಡಲೇ ಹರಾಜು ಮಾಡಲು ಮುಂದಾಗಿರುವುದಾಗಿ ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್ ಹೇಳಿದೆ.
ಇದನ್ನು ಪಶ್ಚಿಮ ಲಂಡನ್‌ ವ್ಯಕ್ತಿ ಖರೀದಿ ಮಾಡಿರುವುದಾಗಿ ಸಂಸ್ಥೆ ಹೇಳಿದೆ.
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ಉಗ್ರರ ದಾಳಿಗೂ ಜಗ್ಗದ ವಿಶ್ವದ ಎತ್ತರದ ಸೇತುವೆ ಕಾಶ್ಮೀರದಲ್ಲಿ… ಇಲ್ಲಿದೆ ಕೌತುಕ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
