ಮುಂಬೈ:ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯ ನಾಯಕ ಏಕನಾಥ್​ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಸಂಪುಟ ರಚನೆ ಕಸರತ್ತು ನಡೆಯುತ್ತಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡು 100 ಕೋಟಿ ರೂಪಾಯಿ ಗುಳುಂ ಮಾಡುವ ಆಲೋಚನೆ ನಡೆಸುತ್ತಿದ್ದ ಗ್ಯಾಂಗ್​ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಸಂಪುಟ ಸೇರಲು ಹಲವು ಶಾಸಕರು ರೇಸ್​​ನಲ್ಲಿದ್ದಾರೆ. ಈ ಅವಕಾಶ ಬಳಸಿಕೊಂಡು ಹಣ ಮಾಡಲು ಮುಂದಾಗಿದ್ದರು ನಾಲ್ವರು ಆರೋಪಿಗಳು.
ಬಿಜೆಪಿ ಶಾಸಕ ರಾಹುಲ್​ ಕುಲ್​ ಅವರ ದೂರಿನ ಅನ್ವಯ ರಿಜಾಯ್​ ಶೇಖ್​ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. 2014ರ ಚುನಾವಣೆಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದಿಂದ ಗೆಲುವು ಸಾಧಿಸಿ ನಂತರ 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ಗಳಿಸಿರುವ ರಾಹುಲ್​ ಅವರನ್ನು ಟಾರ್ಗೆಟ್​ ಮಾಡಿಕೊಂಡು ಈ ಡೀಲ್​ ನಡೆಸಲಾಗಿತ್ತು.
ರಾಹುಲ್​ ಕುಲ್​ ಅವರ ಆಪ್ತ ಸಹಾಯಕ ಬಾಲಕೃಷ್ಣ ಅವರಿಗೆ ಕರೆ ಮಾಡಿದ್ದ ರಿಜಾಯ್​ ಶೇಖ್​, ರಾಹುಲ್​ ಅವರನ್ನು ಸಚಿವರನ್ನಾಗಿ ಮಾಡುವ ಇಚ್ಛೆ ನಮಗೆ ಇದೆ. ನಾನು ದೆಹಲಿಯ ನಿವಾಸಿಯಾಗಿದ್ದು, ಅವರ ಜತೆ ಮಾತನಾಡಬೇಕಿದೆ ಎಂದಿದ್ದಾನೆ. ಈ ಕುರಿತು ಬಾಲಕೃಷ್ಣ ಅವರು ರಾಹುಲ್​ ಕುಲ್​ ಅವರಿಗೆ ವಿಷಯ ತಿಳಿಸಿದಾಗ, ಇದು ಮೋಸದ ಜಾಲ ಎಂದು ತಿಳಿಯಲು ಅವರಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಆದರೂ ರಿಜಾಯ್​ನ ಮಾತನ್ನು ನಂಬಿದವರಂತೆ ನಟಿಸಿ ಆತ ಹೇಳಿದ ಹೋಟೆಲ್​ಗೆ ಹೋಗಿದ್ದಾರೆ ರಾಹುಲ್​.
ಅಲ್ಲಿ ರಿಯಾಜ್​ ಮತ್ತು ಆತನ ಇನ್ನು ಮೂವರು ಸಹಚರರು, ನಮಗೆ ರಾಷ್ಟ್ರೀಯ ನಾಯಕ ಪರಿಚಯವಿದೆ. ನಿಮಗೆ ಸಚಿವ ಸ್ಥಾನ ಕೊಡಿಸಲಾಗುವುದು. ಇದಕ್ಕಾಗಿ 100 ಕೋಟಿ ರೂಪಾಯಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಷ್ಟೊಂದು ಮೊತ್ತ ಕೊಡಲು ಸಾಧ್ಯವಿಲ್ಲ ಎಂದು ರಾಹುಲ್​ ಹೇಳಿದ್ದಾರೆ. ನಂತರ ಕೊನೆಯದಾಗಿ 90 ಕೋಟಿ ರೂಪಾಯಿಗೆ ಡೀಲ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.20ರಷ್ಟು ಅಂದರೆ 18 ಕೋಟಿ ರೂ.ಗಳನ್ನು ನಾಳೆಯೇ ಕೊಡಬೇಕು ಎಂದು ಶಾಸಕರಿಗೆ ಸೂಚಿಸಿದ್ದರು ಈ ಖದೀಮರು.
ಹಣ ತೆಗೆದುಕೊಂಡು ನಾರಿಮನ್ ಪಾಯಿಂಟ್ ಪ್ರದೇಶಕ್ಕೆ ಬರಲು ಶಾಸಕರಿಗೆ ಸೂಚಿಸಿದ್ದ ಆರೋಪಿಗಳು. ಈ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರು ರಾಹುಲ್​. ಮೊದಲೇ ಮಾಡಿದ ಯೋಚನೆಯಂತೆ ಪೊಲೀಸರು ಹೋಟೆಲ್​ ಮೇಲೆ ದಾಳಿ ಮಾಡಿ ನಾಲ್ವರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರ ಗಾಳಕ್ಕೆ ಇನ್ನೂ ಎಷ್ಟು ಮಂದಿ ಬಿದ್ದಿರಬಹುದು ಎಂಬ ತನಿಖೆಯನ್ನೂ ಪೊಲೀಸರು ಮಾಡುತ್ತಿದ್ದಾರೆ.(ಏಜೆನ್ಸೀಸ್​)
ಯುವಕ ಬೀಸಿದ ಬಲೆಗೆ ಬಿದ್ದರು ಈ ನಾಲ್ವರು ಶಾಸಕಿಯರು! ಕಣ್ಣೀರಿಗೆ ಕರಗಿ ಹಣ ಕಳೆದುಕೊಂಡರು

ನೋಡಿ ನಾನಿನ್ನೂ ಕನ್ಯೆ, ಸಿಕ್ಕೇಬಿಡ್ತು ಸರ್ಟಿಫಿಕೇಟ್​! ಹೀಗೆಲ್ಲಾ ನಡೀತಿದೆ ಕನ್ಯತ್ವ ಪರೀಕ್ಷೆ- ಪಾಸ್​ ಆದ್ರೆ ಪ್ರಮಾಣಪತ್ರ

12 ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿ ರದ್ದು ಮಾಡಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
