ಲಖನೌ:ಉತ್ತರ ಪ್ರದೇಶದ ಘಾಜಿಪುರದ ಗಂಗಾ ನದಿಯಲ್ಲಿ ಎರಡು ದಿನಗಳ ಹಿಂದೆ ಬುಟ್ಟಿಯೊಂದರಲ್ಲಿ ತೇಲಿಬಂದ ಹೆಣ್ಣುಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ.22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯಲ್ಲಿ ಸಿಕ್ಕಿತ್ತು. ಅಂಬಿಗನೊಬ್ಬ ಅದನ್ನು ಕಾಪಾಡಿದ್ದ. ಈ ಮಗುವನ್ನು ಸಾಕುವುದಾಗಿ ಕೆಲವರು ಮುಂದೆ ಬಂದಿದ್ದರು. ಆದರೆ ಇದೀಗ ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಹೇಳಿದ್ದಾರೆ.ಮರದ ಪೆಟ್ಟಿಗೆಯಲ್ಲಿ ಈ ಮಗು ತೇಲಿಬಂದಿತ್ತು. ದಾದ್ರಿ ಘಾಟ್​ನಲ್ಲಿ ಮಗುವಿನ ಅಳು ಶಬ್ದ ಕೇಳಿದ ಅಂಬಿಗ ಎಲ್ಲೆಡೆ ನೋಡಿದಾಗ ಮರದ ಪೆಟ್ಟಿಗೆಯೊಂದು ಕಂಡು ಬಂದಿತ್ತು. ಈ ಪೆಟ್ಟಿಗೆಯಲ್ಲಿ ದೇವಿಯ ಫೋಟೊ ಹಾಗೂ ಮಗುವಿನ ಜಾತಕವನ್ನೂ ಇಡಲಾಗಿತ್ತು ಎನ್ನಲಾಗಿದೆ. ಮಗುವನ್ನ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಬಳಿಕ ಗಂಗಾ ಎಂದು ನಾಮಕರಣ ಮಾಡಲಾಗಿದೆ.ಮಗುವನ್ನು ಕಾಪಾಡಿದ ಅಂಬಿಗನಿಗೂ ಗೌರವಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅವರಿಗೆ ಮನೆ ಸೌಕರ್ಯವನ್ನ ಒದಗಿಸಲಿದೆ. ಜತೆಗೆ ಅವರಿಗೆ ಯೋಗ್ಯವಾದ ಯೋಜನೆ ಮೂಲಕವೂ ಅನುದಾನವನ್ನ ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗುತ್ತೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಮನುಷ್ಯರನ್ನು ಹೊತ್ತೊಯ್ಯಿತು ಚೀನಾ: ಇತಿಹಾಸ ಬರೆದ ರೋಚಕ ಕ್ಷಣಗಳು ಇಲ್ಲಿವೆ ನೋಡಿ…
ದೆಹಲಿಯ ಏಮ್ಸ್‌ನಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ- 22 ಅಗ್ನಿಶಾಮಕ ದಳದಿಂದ ಅಗ್ನಿ ನಿಯಂತ್ರಣ
ಕಣ್ಣೋಟದಿಂದಲೇ ಅಪರಿಚಿತ ಯುವತಿಯ ಜೀವ ಕಾಪಾಡಿದ ಶ್ವಾನ! ಆತ್ಮಹತ್ಯೆಯಿಂದ ಬಚಾವ್‌ ಆದದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eight =
Remember me
