ಲಖನೌ:ಕೆಲಸ ಕೊಡಿಸುವ ಆಮಿಷ ಒಡ್ಡಿ, 22 ವರ್ಷದ ಯುವತಿಯ ಮೇಲೆ ರೈಲ್ವೆ ಅಧಿಕಾರಿಯೊಬ್ಬ ತನ್ನ ಸ್ನೇಹಿತರ ಜತೆಗೂಡಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಭೋಪಾಲ್‍ನ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ 45 ವರ್ಷದ ರಾಜೇಶ್ ತಿವಾರಿಯನ್ನು ಬಂಧಿಸಲಾಗಿದೆ. ಭೋಪಾಲ್ ರೈಲ್ವೆ ವಿಭಾಗದ ಸೆಕ್ಯೂರಿಟಿ ಕೌನ್ಸೆಲರ್, ವಿಪತ್ತು ನಿರ್ವಹಣಾ ಉಸ್ತುವಾರಿ ಹಾಗೂ ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ಬಂಧಿಸಲಾಗಿದೆ.
ಯುವತಿ ಉತ್ತರ ಪ್ರದೇಶದ ಮಾಹೋಬ್‍ನ ಯುವತಿಯ ಮೇಲೆ ಈ ಕೃತ್ಯ ಎಸಗಲಾಗಿದೆ ಎಂದು ಭೋಪಾಲ್ ಸೂಪರಿಂಟೆಂಡೆಂಟ್ ಆಫ್ ರೈಲ್ವೆ ಪೊಲೀಸ್ (ಎಸ್‍ಆರ್ ಪಿ) ಹಿತೇಶ್ ಚೌಧರಿ ಮಾಹಿತಿ ನೀಡಿದ್ದಾರೆ.
ತಿವಾರಿ ಯುವತಿಯ ಫೇಸ್​ಬುಕ್​ ಸ್ನೇಹಿತನಾಗಿದ್ದ. ಇಬ್ಬರ ನಡುವೆ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಯುವತಿ ತನಗೆ ಕೆಲಸದ ಅವಶ್ಯಕತೆ ಇರುವುದಾಗಿ ಹೇಳಿದ್ದಾಳೆ. ನಂತರ ತಿವಾರಿ ಕೆಲಸ ಕೊಡಿಸುವುದಾಗಿ ಭೋಪಾಲ್ ರೈಲ್ವೆ ನಿಲ್ದಾಣದ ಪ್ರದೇಶಕ್ಕೆ ಕರೆಸಿಕೊಂಡಿದ್ದ.
ಇದನ್ನೂ ಓದಿ:ಅಪ್ಪನ ವಿರುದ್ಧ ಕೋರ್ಟ್​ಗೆ ಹೋದ ಮಗಳು: ಕಾರಣ ಕೇಳಿದ್ರೆ ನಗೋದು ಗ್ಯಾರೆಂಟಿ!
ಆಕೆ ರೈಲ್ವೆ ನಿಲ್ದಾಣಕ್ಕೆ ಬಂದಾಗ ವೆಸ್ಟ್ ಸೆಂಟ್ರಲ್ ರೈಲ್ವೆ ಕಚೇರಿಯ ಮೊದಲ ಮಹಡಿಯಲ್ಲಿನ ರೂಮಿನಲ್ಲಿ ಆಕೆಯನ್ನು ಕೂಡಿ ಹಾಕಲಾಗಿದೆ. ನಂತರ ಆತ ಸ್ನೇಹಿತರ ಜತೆಗೆ ರೂಮಿಗೆ ಬಂದು ಮತ್ತು ಬರುವ ಔಷಧಿ ಬೆರೆಸಿದ ಪಾನೀಯವನ್ನು ನೀಡಿದ್ದಾನೆ. ನಂತರ ಎಲ್ಲರೂ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿರುವುದಾಗಿ ಚೌಧರಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ. ತಿವಾರಿಯನ್ನು ಇದಾಗಲೇ ಆರೋಪಿ ಎಂದು ಗೊತ್ತುಮಾಡಲಾಗಿದ್ದು, ಇನ್ನೊಬ್ಬ ಅಧಿಕಾರಿಯನ್ನು ಯುವತಿ ಗುರುತಿಸಲು ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್…​ ಎಚ್ಚರ ಎಚ್ಚರ… ಪೊಲೀಸರು ಬಿಚ್ಚಿಟ್ಟಿದ್ದಾರೆ ಭಯಾನಕ ಮಾಹಿತಿ

ಗಾಂಧೀಜಿಯ ಆದರ್ಶ ಪಾಲಿಸಿದ್ದರೆ ಆತ್ಮನಿರ್ಭರ್​ ಭಾರತ್​ ಬೇಕಿರಲಿಲ್ಲ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + twelve =
Remember me
