ನವದೆಹಲಿ:ಹಲವಾರು ವಿವಾದಗಳನ್ನು ಸುತ್ತಿಕೊಂಡಿದ್ದ ಬಾಲಿವುಡ್​ನ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ವಿರುದ್ಧ ಸಲ್ಲಿಸಿದ್ದ ಕೆಲ ಅರ್ಜಿಗಳನ್ನು ಬಾಂಬೆ ಹೈಕೋರ್ಟ್​ ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ನೆರಡೇ ದಿನಗಳಲ್ಲಿ ರಿಲೀಸ್​ ಆಗಬೇಕಿದ್ದ ಚಿತ್ರಕ್ಕೆ ಇದ್ದ ಕಾನೂನು ತಡೆಯಿಂದ ಮುಕ್ತಿ ಸಿಕ್ಕಿದ್ದು, ಸಿನಿಮಾ ಬಿಡುಗಡೆ ಮಾಡಬಹುದಾಗಿದೆ.
ಇದೇ 25ರಂದು ರಿಲೀಸ್​ ಆಗಲಿರುವ ಈ ಸಿನಿಮಾದ ವಿರುದ್ಧ ರೆಡ್​ಲೈಟ್​ ಏರಿಯಾ ಎಂದೇ ಖ್ಯಾತವಾಗಿರುವ ಕಾಮಾಟಿಪುರ ಮತ್ತು ಕಾಥಿಯಾವಾಡಿಯ ಜನರು, ಗಂಗೂಬಾಯಿಯ ದತ್ತು ಮಗ ಹಾಗೂ ಕಾಂಗ್ರೆಸ್​ ಶಾಸಕ ಕೋರ್ಟ್​ ಮೊರೆ ಹೋಗಿದ್ದರು.
ಜನಾಂಗೀಯ ನಿಂದನೆ ಸೇರಿ ಸಾಕಷ್ಟು ಆರೋಪಗಳು ಈ ಸಿನಿಮಾದ ಮೇಲಿದೆ. ಕಾಮಾಟಿಪುರ ಮತ್ತು ಕಾಥಿಯಾವಾಡಿಯದ ಬಗ್ಗೆ ಈ ಸಿನಿಮಾದಲ್ಲಿ ಹೆಸರು ಉಲ್ಲೇಖವಾಗಿದ್ದು, ಇದರಿಂದ ಈ ಪ್ರದೇಶಗಳಿಗೆ ಕೆಟ್ಟ ಹೆಸರು ಬರುತ್ತದೆ. ಈ ಹಿನ್ನೆಲೆಯಲ್ಲಿ, ಆ ಹೆಸರುಗಳನ್ನು ತೆಗೆದುಹಾಕುವಂತೆ ಕೋರ್ಟ್​ನಲ್ಲಿ ಕೋರಲಾಗಿತ್ತು.
ಕಾಮಾಟಿಪುರದ ಬಗ್ಗೆ ಕೆಟ್ಟ ಸಂದೇಶ ಕೊಡಲಾಗಿದೆ. ಕಾಮಾಟಿಪುರದ ಬಗ್ಗೆ ಕೆಟ್ಟದಾಗಿ ಚಿತ್ರಿಸಲಾಗಿದೆ. ಸಿನಿಮಾ ಬಿಡುಗಡೆ ಆದರೆ ಕಾಮಾಟಿಪುರದ ನಿವಾಸಿಗಳ ಬಗ್ಗೆ ಸಾರ್ವಜನಿಕರು ಕೆಟ್ಟದಾಗಿ ಯೋಚಿಸಲಿದ್ದಾರೆ. ಇಲ್ಲಿನ ನಿವಾಸಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಲಿದ್ದಾರೆ. ಇಲ್ಲಿ ವಾಸಿಸಲು ಯಾರು ಬರುವುದಿಲ್ಲ. ಇಲ್ಲಿ ಇರುವವರೂ ಕೂಡ ಜಾಗ ಖಾಲಿ ಮಾಡುವ ಪರಿಸ್ಥಿತಿ ಬಂದರು ಬರಬಹುದು. ಹೀಗಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು. ಇಲ್ಲ ಸಿನಿಮಾದಲ್ಲಿ ಕಾಮಾಟಿಪುರ ಹೆಸರನ್ನು ತೆಗೆಯಬೇಕು ಎಂದು ಸ್ಥಳೀಯ ಶಾಸಕ ಅಮೀನ್​ ಕೋರಿದ್ದರು.
ಆದರೆ ಈ ವಾದಗಳನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ಅರ್ಜಿದಾರರು ಕೋರ್ಟ್​ಗೆ ಬರುವ ಮುನ್ನ ಪರ್ಯಾಯ ಮಾರ್ಗಗಳ ಬಗ್ಗೆ ಏನನ್ನೂ ಅರ್ಜಿಯಲ್ಲಿ ತಿಳಿಸಲಿಲ್ಲ. ಒಂದು ವೇಳೆ ಯಾರಿಗಾದರೂ ಮಾನಸಿಕವಾಗಿ ತೊಂದರೆ ಆಗುವುದಿದ್ದರೆ ಸೂಕ್ತ ವೇದಿಕೆಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದೆ.
ಬಾಯಲ್ಲಿ ನೀರೂರಿಸುವ ತಿರುಪತಿ ಜಿಲೇಬಿ ಜೇಬಿಗೆ ಕಹಿ: 100 ರೂ ಬದ್ಲು ಇನ್ನು 500 ರೂ!

ಈ ವರ್ಷವೂ ಪರೀಕ್ಷೆ ಬೇಡ ಎಂದು ‘ಸುಪ್ರೀಂ’ ಮೊರೆ ಹೋದ ವಿದ್ಯಾರ್ಥಿಗಳು: ಅರ್ಜಿ ವಜಾ ಮಾಡಿದ ಕೋರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + seventeen =
Remember me
