ಈಗಂತೂ ಸಾಮಾಜಿಕಜಾಲತಾಣದಲ್ಲಿ ಮದುವೆಯ ಸ್ವಾರಸ್ಯಕರ ಘಟನೆಗಳದ್ದೇ ಸುದ್ದಿ. ಪ್ರತಿನಿತ್ಯವೂ ಮದುವೆ ಮನೆಯಲ್ಲಿ ನಡೆದಿರುವ ಘಟನೆಗಳ ವಿಡಿಯೋಗಳು ವೈರಲ್‌ ಆಗುತ್ತಿವೆ.
ಅಂಥದ್ದೇ ಒಂದು ಇನ್ನೊಂದು ವಿಡಿಯೋ ವೈರಲ್‌ ಆಗಿದ್ದು, ಇದು ನೋಡುಗರಿಗೆ ಫನ್ನಿ ಎನಿಸಿದರೆ, ಅನುಭವಿಸಿವರಿಗೆ ಮಾತ್ರ ಫಜೀತಿ ತಂದಿದ್ದಂತೂ ನಿಜ. ಈ ವಿಡಿಯೋದಲ್ಲಿ ಏನಿದೆ ಎಂದರೆ ಹಾರ ಬದಲಾಯಿಸುವಾಗ ವಧು-ವರರು ಅರ್ಜೆಂಟ್‌ ಮಾಡಿದ್ದರಿಂದ ಆಗಿರುವ ಫಜೀತಿ ಇದು.
ಸಾಮಾನ್ಯವಾಗಿ ಯಾರು ಮೊದಲು ಹಾರ ಹಾಕಬೇಕು ಎಂದು ಪುರೋಹಿತರು ಹೇಳುತ್ತಾರೆ. ಹಿಂದೂ ಸಂಪ್ರದಾಯದಂತೆ ವಧು ಮೊದಲು ವರನ ಕೊರಳಿಗೆ, ನಂತರ ವರ ವಧುವಿಗೆ ಮಾಲೆ ಹಾಕಬೇಕು. ಆದರೆ ಈ ಮದುವೆಯಲ್ಲಿ ವಧು ಮೊದಲು ಹಾರಹಾಕಲು ಹೋಗುತ್ತಿದ್ದಂತೆಯೇ ಅದೇ ಸಂದರ್ಭದಲ್ಲಿ ವರನೂ ಅರ್ಜೆಂಟ್‌ ಮಾಡಿ ಹಾರ ಹಾಕಲು ಹೋಗಿದ್ದಾನೆ. ನಂತರ ಎರಡೂ ಹಾರಗಳು ಸಿಕ್ಕಿಬಿದ್ದಿವೆ. ಇವು ವರನ ಪೇಟಕ್ಕೆ ಸಿಕ್ಕಿಕೊಂಡಿದೆ.
ಇದನ್ನ ತಪ್ಪಿಸಲು ವಧು ಪ್ರಯತ್ನಿಸಿದರೂ ಸಹ ಅದು ಸಾಧ್ಯವಾಗಿಲ್ಲ. ಕೂಡಲೇ ವೇದಿಕೆ ಮೇಲೆ ಬಂದ ಇಬ್ಬರು ಪುರುಷರು ಈ ವರಮಾಲೆಯನ್ನ ಸರಿ ಮಾಡಿದ್ದಾರೆ .ನಂತರ ಅವರೇ ಇಬ್ಬರಿಗೂ ಹಾರ ಹಾಕಿದ್ದಾರೆ.ಇದು ಎಲ್ಲಿ ನಡೆದಿರುವ ಮದುವೆಯೆಂಬುದು ಸರಿಯಾಗಿ ತಿಳಿಯದಿದ್ದರೂ ಜಾಲತಾಣದಲ್ಲಿ ಸಕತ್‌ ಸುದ್ದಿ ಮಾಡ್ತಿದೆ ಈ ವಿಡಿಯೋ.
ಇಲ್ಲಿದೆ ನೋಡಿ ವಿಡಿಯೋ:


A post shared by Niranjan Mahapatra (@official_niranjanm87)

ಮಟನ್‌ ಊಟ ಹಾಕಿಸಿಲ್ಲವೆಂದು ಮದುಮಗಳ ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ ವರಮಹಾಶಯ…

ಸಪ್ತಪದಿ ತುಳಿಯುತ್ತಲೇ ಮನಸ್ಸು ಬದಲಿಸಿದ ವಧು- ಆರನೇ ಹೆಜ್ಜೆಗೆ ಮಂಟಪಬಿಟ್ಟು ಹೊರನಡೆದಳು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 1 =
Remember me
