ಜೈಸಲ್ಮೇರ್​ (ರಾಜಸ್ಥಾನ):ಪ್ರೀತಿಯೇ ಹಾಗೆ. ಯಾವಾಗ, ಎಲ್ಲಿ, ಹೇಗೆ ಮೂಡುತ್ತದೆ ಎಂದು ಹೇಳುವುದೇ ಕಷ್ಟ. ಇದೇ ರೀತಿ ಭಾರತ ಮತ್ತು ಆಸ್ಟ್ರೇಲಿಯಾದ ನಡುವೆ ನಡೆದ ಪ್ರೇಮ ಪ್ರಕರಣವೊಂದು ಅರ್ಧ ಶತಮಾನದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ.
ಇದು ರಾಜಸ್ಥಾನದ ಜೈಸಲ್ಮೇರ್​ ಜಿಲ್ಲೆಯ ಹೃದಯಭಾಗದಲ್ಲಿ ಕುಧಾರ ಎಂಬ ಕುಗ್ರಾಮದಲ್ಲಿ 50 ವರ್ಷಗಳ ಹಿಂದೆ ನಡೆದ ಪ್ರೇಮದ ಕಥೆ. ಒಂದೊಮ್ಮೆ ಸಮೃದ್ಧವಾಗಿದ್ದ ಈ ಗ್ರಾಮದಲ್ಲಿರುವ ದೇವಾಲಯವೊಂದರಲ್ಲಿ ದ್ವಾರಪಾಲಕನಾಗಿದ್ದ 30 ವರ್ಷ ವಯಸ್ಸಿನ ಯುವಕ. ಅಲ್ಲಿಗೆ ಪ್ರವಾಸಕ್ಕೆಂದು ಬಂದಿದ್ದಳು ಆಸ್ಟ್ರೇಲಿಯಾದ ಮರಿನಾ. ದ್ವಾರಪಾಲಕನಾಗಿದ್ದ ಈ ಯುವಕ ಆಕೆಗೆ ಒಂಟೆ ಸವಾರಿ ಮಾಡಲು ಕರೆದುಕೊಂಡು ಹೋಗಿದ್ದಾನೆ.
ಐದು ದಿನಗಳ ಮಟ್ಟಿಗೆ ಪ್ರವಾಸಕ್ಕೆ ಬಂದಿದ್ದ ಮರೀನಾ, ಒಂಟೆ ಸವಾರಿ ಮಾಡುವಾಗ ಈ ಯುವಕನನ್ನು ಪ್ರೀತಿಸಿಬಿಟ್ಟಿದ್ದಾಳೆ. ಈ ಯುವಕನಿಗೂ ಆಕೆಯ ಮೇಲೆ ವ್ಯಾಮೋಹ ಹುಟ್ಟಿದೆ. ಅಲ್ಲಿಯೇ ಆಕೆ ಐ ಲವ್​ ಯೂ ಎಂದುಬಿಟ್ಟಿದ್ದಾಳೆ. ಒಂಟೆ ಸವಾರಿ ಮೂಲಕ ಶುರುವಾದ ಈ ಪ್ರೀತಿ ಐದು ದಿನಗಳವರೆಗೆ ಮುಂದುವರೆದಿದೆ.
ನಂತರ ಮರೀನಾ ತನ್ನ ದೇಶಕ್ಕೆ ವಾಪಸಾಗಬೇಕಿತ್ತು. ವಾಪಸಾದ ಬಳಿಕ ಈ ದ್ವಾರಪಾಲಕನ ಪ್ರೀತಿಯನ್ನು ಆಕೆ ಮರೆಯಲಿಲ್ಲ. ಅಲ್ಲಿ ಹೋದ ಮೇಲೆಯೂ ಪ್ರೇಮ ಸಂಭಾಷಣೆ ಪತ್ರದ ಮೂಲಕ ಮುಂದುವರೆಸಿದ್ದಾಳೆ. ಮಾತ್ರವಲ್ಲದೇ ತನ್ನ ಪ್ರಿಯಕರನನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದಾಳೆ.
70ರ ದಶಕದಲ್ಲಿಯೇ ಈ ಯುವಕ ಹೇಗೇಗೋ 30 ಸಾವಿರ ರೂಪಾಯಿಗಳನ್ನ ಹೊಂದಿಸಿ ಆಸ್ಟ್ರೇಲಿಯಾಕ್ಕೆ ಹೋಗಿ ಆಕೆಯ ಜತೆಯಲ್ಲಿ ಮೂರು ತಿಂಗಳು ಉಳಿದಿದ್ದಾನೆ. ನಂತರ ಇಬ್ಬರ ಸ್ನೇಹ ಸಂಬಂಧ ಬಹಳ ಗಾಢವಾಗಿದ್ದರೂ ಈ ಯುವಕನಿಗೆ ವಾಪಸ್​ ತವರಿಗೆ ಬರಲೇಬೇಕಿತ್ತು. ನಾನು ನನ್ನ ತಾಯ್ನಾಡನ್ನ ಬಿಟ್ಟು ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲಸಲು ಸಿದ್ಧನಿರಲಿಲ್ಲ. ಹೀಗಾಗಿ ನಾನಿದನ್ನು ಆಕೆಯ ಬಳಿ ಹೇಳಿದೆ. ಆಕೆ ನನ್ನನ್ನ ಬಿಟ್ಟ ದಿನ ಸಿಕ್ಕಾಪಟ್ಟೆ ಅತ್ತಿದ್ದಳು ಎಂದು ಅಂದಿನ ದಿನಗಳನ್ನು ಇವರು ನೆನಪಿಸಿಕೊಳ್ಳುತ್ತಾರೆ.
ಅಲ್ಲಿಂದ ಭಾರತಕ್ಕೆ ವಾಪಸಾದ ಮೇಲೆ ಪರಿಸ್ಥಿತಿ ಏನೇನೋ ಆಗಿ ಇಬ್ಬರ ಸಂಪರ್ಕ ನಿಂತುಹೋಗುತ್ತದೆ. ಈ ನಡುವೆ ಈ ಯುವಕನ ಮದುವೆಯಾಗಿ ಮಕ್ಕಳೂ ಆಗಿದ್ದಾರೆ. ಹೀಗೆ 50 ವರ್ಷ ಕಳೆದ ಮೇಲೆ ಆ ಯುವಕನಿಗೆ ಈಗ 82 ವರ್ಷ ವಯಸ್ಸು. ಮಕ್ಕಳು, ಮೊಮ್ಮಕ್ಕಳನ್ನು ಕಂಡು ತನ್ನ ಪ್ರೇಮಿಯನ್ನು ಸಂಪೂರ್ಣ ಮರೆತ ಬೆನ್ನಲ್ಲೇ, ಇದೀಗ ಆ ಯುವತಿ (ಈಗ ಅಜ್ಜಿ) ಮತ್ತೆ ಪ್ರತ್ಯಕ್ಷಳಾಗಿದ್ದಾಳೆ!
50 ವರ್ಷಗಳಾದರೂ ಈ ಪ್ರೇಮಿಯ ನೆನಪಿನಲ್ಲಿಯೇ ಇದ್ದ ಯುವತಿ ಮದುವೆಯಾಗಿಲ್ಲ. ಪತ್ರ ಬರೆದಿರುವ ಆಕೆ ತನ್ನ ಪ್ರೀತಿ ಅಂಕುರಿಸಿದ ದಿನಗಳನ್ನು ನೆನಪಿಸಿಕೊಂಡಿದ್ದಾಳಂತೆ. ಇದನ್ನು ನೋಡಿ 82 ವರ್ಷದ ಈ ಅಜ್ಜಿ ಪುಳಕಿನತನಾಗಿದ್ದು, ಆಕೆಯನ್ನು ನೋಡಲು ಹಂಬಲಿಸುತ್ತಾನೆ. ನನ್ನ ಮೊದಲ ಪ್ರೀತಿಯ ಪತ್ರ ನೋಡಿ ನಾನು 20 ವರ್ಷದವನಂತೆ ಉತ್ಸಾಹಭರಿತನಾಗಿದ್ದೇನೆ. ಆಕೆಯನ್ನು ನೋಡಲು ಕಾತರನಾಗಿದ್ದೇನೆ ಎಂದು ಪತ್ರವನ್ನು ತೋರಿಸುತ್ತಾ ಹೇಳಿಕೊಂಡಿದ್ದಾನೆ.
ಮಕ್ಕಳ ಎದುರೇ ಗಂಡ ಸೆಕ್ಸ್​ಫಿಲ್ಮ್ ನೋಡ್ತಿರ್ತಾರೆ: ಹಳಿತಪ್ಪುತ್ತಿರುವ ಸಂಸಾರವನ್ನು ಹೇಗೆ ಸರಿಮಾಡಲಿ?

ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

ಕರೊನಾ ಮಾರ್ಗಸೂಚಿ ಎರ್ರಾಬಿರ್ರಿ ಮಾಡಿದ್ರೆ ಹುಷಾರ್​, ಸರ್ಕಾರಕ್ಕೇ ಎಚ್ಚರಿಕೆ ನೀಡಿದ ಡಿಕೆಶಿ!

ವಿಶೇಷ ವ್ಯಕ್ತಿಯನ್ನು ಭೇಟಿಯಾಗಲು ಬಂದು ದೇವರ ಮುಂದೆ ಕಣ್ಣೀರು ಸುರಿಸಿದ ನಟಿ ಕಂಗನಾ ರಣಾವತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
