ನವದೆಹಲಿ:ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆ ನಿನ್ನೆ (ಗುರುವಾರ) ಹೊರಟಿದೆ. ಇದಾಗಲೇ ಈ ರೇಸ್​ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸಂಸದರಾದ ಶಶಿ ತರೂರು ಹಾಗೂ ದಿಗ್ವಿಜಯ ಸಿಂಗ್​ ಇದ್ದಾರೆ. ರಾಹುಲ್​ ಗಾಂಧಿಯವರು ತಾವು ಈ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಇದಾಗಲೇ ಹೇಳಿರುವ ಕಾರಣ, ಅಧ್ಯಕ್ಷ ಚುನಾವಣೆ ಬಹಳ ಕುತೂಹಲ ತಂದಿದೆ. ಜತೆಗೆ 22 ವರ್ಷಗಳ ಬಳಿಕ ಗಾಂಧಿಯೇತರರಿಗೆ ಈ ಸ್ಥಾನ ಒಲಿಯಲಿದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಈ ನಡುವೆಯೇ, ಶಶಿ ತರೂರ್​ ಅವರು ಸ್ಪರ್ಧಿಸಲು ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದರೆ, ಅಶೋಕ್ ಗೆಹ್ಲೋಟ್ ಸೆ.28 ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ‘ನಾವೆಲ್ಲರೂ ರಾಹುಲ್ ಗಾಂಧಿ ನೇತೃತ್ವವನ್ನೇ ಬಯಸುತ್ತೇವೆ’ ಎಂದು ಹೇಳುತ್ತಲೇ ನಾಮಪತ್ರ ಸಲ್ಲಿಸುವ ವಿಷಯ ಪ್ರಸ್ತಾಪಿಸಿದರು. ‘ನಾನು ಕಾಂಗ್ರೆಸ್ಸಿನ ಸಿಪಾಯಿ, ಪಕ್ಷ ಏನು ಹೇಳುತ್ತದೆಯೋ ಆ ಕೆಲಸವನ್ನು ಮಾಡಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನವನ್ನು ಗಾಳಿಗೆ ತೂರಲಾಗುತ್ತಿದೆ. ಅಂತಹ ಸಮಯದಲ್ಲಿ, ಪ್ರಬಲ ಪ್ರತಿಪಕ್ಷದ ಪಾತ್ರವು ಹೆಚ್ಚು ಮಹತ್ವದ್ದಾಗಿದೆ ಮತ್ತು ಕಾಂಗ್ರೆಸ್ ಮಾತ್ರ ಅಂತಹ ಪಾತ್ರವನ್ನು ವಹಿಸುತ್ತದೆ’ ಎಂದರು.
ಆದರೆ ಅವರಿಗೆ ಶಾಕ್​ ನೀಡುವಂತೆ ಹೇಳಿಕೆಯೊಂದನ್ನು ರಾಹುಲ್​ ಗಾಂಧಿ ನೀಡಿದ್ದಾರೆ. ಅದೇನೆಂದರೆ, ಅಧ್ಯಕ್ಷ ಸ್ಥಾನವನ್ನು ಪಡೆಯಲು ಹಾತೊರೆಯುತ್ತಿರುವ ಅಶೋಕ್​ ಗೆಹ್ಲೋಟ್​, ಈ ಹುದ್ದೆಯ ಜತೆಗೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವೂ ನನಗೆ ಇರಲಿ ಎಂದು ಅಂದುಕೊಂಡಿದ್ದರು. ಆದರೆ ಈ ಯೋಚನೆಗೆ ರಾಹುಲ್​ ಗಾಂಧಿ ಬ್ರೇಕ್​ ಹಾಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದವರು ಎರಡು ಸ್ಥಾನಗಳಲ್ಲಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ ಎಂದು ಖಡಕ್​ ಸಂದೇಶ ರವಾನಿಸಿದ್ದಾರೆ. ಆದ್ದರಿಂದ ಒಂದು ವೇಳೆ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷರಾದರೆ ಅವರು ಸಿಎಂ ಹುದ್ದೆ ತೊರೆಯಲೇಬೇಕು. ಒಂದು ವೇಳೆ ಹೀಗೆ ಆಗಿದ್ದೇ ಆದಲ್ಲಿ, ರಾಜಸ್ಥಾನ ಸಿಎಂ ಸ್ಥಾನವನ್ನು ಸಚಿನ್ ಪೈಲಟ್ ಪಾಲಾಗುವ ಲಕ್ಷಣಗಳು ಗೋಚರಿಸುತ್ತಿವೆ.(ಏಜೆನ್ಸೀಸ್​)
ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಪ್ರಕಟ: 22 ವರ್ಷಗಳ ದಾಖಲೆ ಮುರಿಯುವುದೆ? ಇಲ್ಲಿಯವರೆಗೆ ಆಗಿದ್ದೇನು?
ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 2 =
Remember me
